ವಲಸೆ ಕಾರ್ಮಿಕರಿಗೆ ಆಹಾರ ವಿತರಿಸಿ ಮಾನವೀಯತೆ ಮೆರೆದ ಟೀಂ ಇಂಡಿಯಾ ಆಟಗಾರ ಶಮಿ

ಕೋವಿಡ್-19 ಸಾಂಕ್ರಾಮಿಕ ರೋಗದ ಮಧ್ಯೆ ಸಂಕಷ್ತಕ್ಕೀಡಾದ ವಲಸೆ ಕಾರ್ಮಿಕರ ನೆರವಿಗೆ ನಾನಾ ಸೆಲೆಬ್ರೆಟಿಗಳು ಮುಂದಾಗುತ್ತಿರುವುದು ಗೊತ್ತೇ ಇದೆ. ಇದೀಗ ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಸಹ ಇಂತಹಾ ವಲಸೆ ಕಾರ್ಮಿಕರಿಗೆ, ನಿರಾಶ್ರಿತರಿಗೆ ಆಹಾರ ಪ್ಯಾಕೆಟ್ ಮತ್ತು ಮಾಸ್ಕ್ ಗಳನ್ನು ವಿತರಿಸಲು ಪ್ರಾರಂಭಿಸಿದ್ದಾರೆ.
ವಲಸೆ ಕಾರ್ಮಿಕರಿಗೆ ಆಹಾರ ವಿತರಿಸಿ ಮಾನವೀಯತೆ ಮೆರೆದ ಟೀಂ ಇಂಡಿಯಾ ಆಟಗಾರ ಶಮಿ

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ಮಧ್ಯೆ ಸಂಕಷ್ತಕ್ಕೀಡಾದ ವಲಸೆ ಕಾರ್ಮಿಕರ ನೆರವಿಗೆ ನಾನಾ ಸೆಲೆಬ್ರೆಟಿಗಳು ಮುಂದಾಗುತ್ತಿರುವುದು ಗೊತ್ತೇ ಇದೆ. ಇದೀಗ ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಸಹ ಇಂತಹಾ ವಲಸೆ ಕಾರ್ಮಿಕರಿಗೆ, ನಿರಾಶ್ರಿತರಿಗೆ ಆಹಾರ ಪ್ಯಾಕೆಟ್ ಮತ್ತು ಮಾಸ್ಕ್ ಗಳನ್ನು ವಿತರಿಸಲು ಪ್ರಾರಂಭಿಸಿದ್ದಾರೆ.

ಶಮಿ ಉತ್ತರ ಪ್ರದೇಶದ ಸಹಸ್ಪುರದ ತನ್ನ ಮನೆಯ ಬಳಿ ಬಡ ವಲಸಿಗರಿಗೆ ಆಹಾರ ವಿತರಣಾ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಮಾಸ್ಕ್ ಹಾಗೂ ಗ್ಲೌಸ್ ಸು ಧರಿಸಿ, ಬಸ್‌ಗಳಲ್ಲಿ ಪ್ರಯಾಣಿಸುವ ಜನರಿಗೆ ಮತ್ತು ಆಹಾರ ವಿತರಣಾ ಕೇಂದ್ರಗಳಲ್ಲಿರುವವರಿಗೆ ಆಹಾರ ಪ್ಯಾಕೆಟ್‌ಗಳು ಮತ್ತು ಮಾಸ್ಕ್ ಗಳನ್ನು ಹಸ್ತಾಂತರಿಸುವ ಶಮಿ ಅವರ ವೀಡಿಯೊವನ್ನು ಬಿಸಿಸಿಐ ಪೋಸ್ಟ್ ಮಾಡಿದೆ.

" #IndiaFightsCorona ಮೊಹಮ್ಮದ್ ಶಮಿ  ಉತ್ತರ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 24 ರಲ್ಲಿ ಆಹಾರ ಪ್ಯಾಕೆಟ್ ಮತ್ತು ಮಾಸ್ಕ್ ಗಳನ್ನು ವಿತರಿಸುವ ಮೂಲಕ  ತಮ್ಮ ಮನೆಗಳನ್ನು ತಲುಪಲು ಪ್ರಯತ್ನಿಸುವ ಜನರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. . ಅವರು ಸಹಸ್ಪುರದ ತಮ್ಮ ಮನೆಯ ಬಳಿ ಆಹಾರ ವಿತರಣಾ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ" ಎಂದು ಬಿಸಿಸಿಐ ಟ್ವೀಟ್ ಮಾಡಿದೆ. 

ಕೊರೋನಾವೈರಸ್  ಲಾಕ್‌ಡೌನ್ ದೇಶದಲ್ಲಿ ವಲಸೆ ಕಾರ್ಮಿಕರ  ಬಿಕ್ಕಟ್ಟನ್ನು ಉಂಟುಮಾಡಿದೆ, ಲಕ್ಷಾಂತರ ಜನರು ತೀವ್ರ ಸಂಕಷ್ಟ ಹಾಗೂ ಹಸಿವಿನಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಕೊರೋನಾ ಇದುವರೆಗೆ 5000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು ದೇಶದ 2 ಲಕ್ಷ ಜನರಿಗೆ ಸೋಂಕು ತಗುಲಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com