ಧೋನಿ ಕಮ್ ಬ್ಯಾಕ್ ಮಾಡಲ್ಲ ಅಂದ್ರೂ ಭಜ್ಜಿ, ಕ್ರಿಕೆಟ್‌ ಶುರುವಾದರೆ ಎಲ್ಲರಿಗೂ ಧೋನಿ ಸಾಮರ್ಥ್ಯ ಗೊತ್ತಾಗುತ್ತೆ ಅಂದ್ರೂ ರೈನಾ!

ಸ್ಪರ್ಧಾತ್ಮಕ ಕ್ರಿಕೆಟ್ ಗೆ ಕಮ್ ಬ್ಯಾಕ್ ಮಾಡಲು ಎಂಎಸ್ ಧೋನಿ ಭರ್ಜರಿಯ ತಯಾರಿ ನಡೆಸಿದ್ದಾರೆ ಎಂದು ಭಾರತ ತಂಡದ ಅನುಭವಿ ಎಡಗೈ ಬ್ಯಾಟ್ಸ್ ಮನ್ ಸುರೇಶ್ ರೈನಾ ಹೇಳಿದ್ದಾರೆ.
ರೈನಾ-ಧೋನಿ
ರೈನಾ-ಧೋನಿ

ನವದೆಹಲಿ: ಸ್ಪರ್ಧಾತ್ಮಕ ಕ್ರಿಕೆಟ್ ಗೆ ಕಮ್ ಬ್ಯಾಕ್ ಮಾಡಲು ಎಂಎಸ್ ಧೋನಿ ಭರ್ಜರಿಯ ತಯಾರಿ ನಡೆಸಿದ್ದಾರೆ ಎಂದು ಭಾರತ ತಂಡದ ಅನುಭವಿ ಎಡಗೈ ಬ್ಯಾಟ್ಸ್ ಮನ್ ಸುರೇಶ್ ರೈನಾ ಹೇಳಿದ್ದಾರೆ.

ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮಾರ್ಚ್ 29ರಿಂದ ಮೇ 24ರವರೆಗೆ ನಡೆಯಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿದೆ. ಆದರೆ, ಇದಕ್ಕೂ ಮುನ್ನ ನಡೆದಿದ್ದ ಚೆನ್ನೈ ಸೂಪರ್  ಕಿಂಗ್ಸ್ ತಂಡದ ಅಭ್ಯಾಸ ಶಿಭಿರದಲ್ಲಿ ಧೋನಿ ಹೊಸ ಹುರುಪಿನಲ್ಲಿ ಕಾಣಿಸಿಕಿಂಡಿದ್ದರು ಎಂದು ರೈನಾ ಬಹಿರಂಗ ಪಡಿಸಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯ ಸೋತ ಬಳಿಕ ಧೋನಿ ತೆರೆಮರೆ ಸರಿದಿದ್ದಾರೆ. ಸುದೀರ್ಘಾವಧಿಯ ವಿಶ್ರಾಂತಿ ತೆಗೆದುಕೊಂಡ ಧೋನಿ, ಬಳಿಕ ಐಪಿಎಲ್ 2020 ಮೂಲಕ ಕಮ್ ಬ್ಯಾಕ್ ಮಾಡುವುದನ್ನು ಎದುರು ನೋಡುತ್ತಿದ್ದರು. ಆದರೆ, ಕೋವಿಡ್-19 ಸೋಂಕು ಕ್ರಿಕೆಟ್ ಮತ್ತು ಧೋನಿ ನಡುವೆ ತಡೆಗೋಡೆಯಾಗಿ ನಿಂತಿದೆ. 

ಈ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಎಡಗೈ ಬ್ಯಾಟ್ಸ್ ಮನ್ ಸುರೇಶ್ ರೈನಾ, ಅಭ್ಯಾಸ ಶಿಬಿರದಲ್ಲಿ ಮೊದಲ ಮೂರು ದಿನಗಳು ಅವರು ಬಹಳ ಸರಳವಾಗಿ ತೆಗೆದುಕೊಂಡು ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿದ್ದರು. ಆದರೆ ಬ್ಯಾಟಿಂಗ್ ವೇಳೆ ಅದ್ಭುತ ಹೊಡೆತಗಳನ್ನು ಆಡುತ್ತಿದ್ದರು. ಅವರ ಫಿಟ್ನೆಸ್ ಕೂಡ ಭರ್ಜರಿಯಾಗಿದ್ದು ಕಿಂಚಿತ್ತೂ ದಣಿದವರಂತೆ ಕಾಣಲಿಲ್ಲ ಎಂದಿದ್ದಾರೆ.

ಎಂಎಸ್‌ ಧೋನಿ ದೇಶದ ಪರ ತಮ್ಮ ಆಟವನ್ನು ಮುಗಿಸಿದ್ದು, ಅವರಿನ್ನು ಟೀx ಇಂಡಿಯಾವನ್ನು ಪ್ರತಿನಿಧಿಸುವುದಿಲ್ಲ ಎಂದು ಅನುಭವಿ ಆಫ್‌ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ಅಭಿಪ್ರಾಯ ಪಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com