2ನೇ ಟೆಸ್ಟ್: 2ನೇ ದಿನ 235 ಕ್ಕೆ ಕಿವೀಸ್ ಆಲೌಟ್, ಕೊಹ್ಲಿ ಸೇರಿ 6 ವಿಕೆಟ್ ಕಳೆದುಕೊಂಡ ಭಾರತಕ್ಕೆ ಮತ್ತೆ ಸಂಕಷ್ಟ

ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಮಾರಕ ಬೌಲಿಂಗಿಗೆ ಬೆದರಿದ ಕಿವೀಸ್ ಎರಡನೇ ಟೆಸ್ಟ್ ನ ದ ಎರಡನೇ ದಿನದಂದು ಚಹಾ ವಿರಾಮದ ವೇಳೆಗೆ 235 ರನ್ನುಗಳಿಗೆ ಆಲೌಟ್ ಆಗಿದೆ.

Published: 01st March 2020 11:24 AM  |   Last Updated: 01st March 2020 12:17 PM   |  A+A-


ಎರಡನೇ ಟೆಸ್ಟ್: 2ನೇ ದಿನ 235 ಕ್ಕೆ ಕಿವೀಸ್ ಆಲೌಟ್, ಕೊಹ್ಲಿ ಸೇರಿ 3 ವಿಕೆಟ್ ಕಳೆದುಕೊಂಡ ಭಾರತಕ್ಕೆ ಮತ್ತೆ ಸಂಕಷ್ಟ

Posted By : Raghavendra Adiga
Source : PTI

ವೃತ್ತಿ ಜೀವನದ ಶ್ರೇಷ್ಠ ಕ್ಯಾಚ್ ಹಿಡಿದ ರವೀಂದ್ರ ಜಡೇಜಾ

ಕ್ರೈಸ್ಟ್ ಚರ್ಚ್: ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಮಾರಕ ಬೌಲಿಂಗಿಗೆ ಬೆದರಿದ ಕಿವೀಸ್ ಎರಡನೇ ಟೆಸ್ಟ್ ನ ದ ಎರಡನೇ ದಿನದಂದು ಚಹಾ ವಿರಾಮದ ವೇಳೆಗೆ 235 ರನ್ನುಗಳಿಗೆ ಆಲೌಟ್ ಆಗಿದೆ.

ಎರಡನೇ ದಿನದಲ್ಲಿ ಶಮಿ (23.1 ಓವರ್‌ಗಳಲ್ಲಿ 4/81) ಮತ್ತು ಬುಮ್ರಾ (22 ಓವರ್‌ಗಳಲ್ಲಿ 3/62) ಅದ್ಭುತ ಆಟ ಪ್ರದರ್ಶಿಸಿದ್ದಾರೆ.ಅದಲ್ಲದೆ  ರವೀಂದ್ರ ಜಡೇಜಾ (10 ಓವರ್‌ಗಳಲ್ಲಿ 2/22) ಸಹ ಅವರಿಗೆ ಸಾಥ್ ಒದಗಿಸಿದ್ದಾರೆ.

ಇದಕ್ಕೆ ಮುನ್ನ ಪ್ರವಾಸಿ ತಂಡ ಟೀಂ ಇಂಡಿಯಾ  ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ 242 ರನ್ ಗಳಿಸಿದ್ದರು.

ಚಹಾ ವೇಳೆಗೆ ಕೈಲ್ ಜಾಮಿಸನ್ (49) ಮತ್ತು ನೀಲ್ ವ್ಯಾಗ್ನರ್ (21) 51 ರನ್ನುಗಳ ಕಲೆ ಹಾಕಿದ್ದ ಜೋಡಿಯ ಒಂಬತ್ತನೇ ವಿಕೆಟ್ ಕಬಳಿಸಲು ಜಡೇಜಾ ಹಿಡಿದ ಕ್ಯಾಚ್ ನೆರವಾಗಿದೆ. ಇದರೊಡನೆ ಕಿವೀಸ್ ಮತ್ತೆ ಹಿನ್ನಡೆ ಕಂಡಿದ್ದ್ದು ಟೀಂ ಇಂಡಿಯಾ ಕನಿಷ್ಟ 50 ರನ್‌ಗಳ ಮುನ್ನಡೆ ಸಾಧಿಸುವುದನ್ನು ಖಚಿತಪಡಿಸಿದೆ.

ಸದ್ಯ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿರುವ ಭಾರತ ಮತ್ತೆ ಸಂಕಟಕ್ಕೆ ಸಿಲುಕಿದೆ. ಕೇವಲ 26 ರನ್ ಗಳಿಸುವುದರಡೆಗೆ ಮಯಾಂಕ್ ಅಗರ್ವಾಲ್ (3) ಹಾಗೂ ಪೃಥ್ವಿ ಶಾ (14) ವಿಕೆಟ್ ಕೈತಪ್ಪಿದೆ. ಅಲ್ಲದೆ ನಾಯಕ ವಿರಾಟ್ ಕೊಹ್ಲಿ ಸಹ 30 ಎಸೆತದಲ್ಲಿ 14 ರನ್ ಗಳಿಸಿ ಪೆವಿಲಿಯನ್ ಸೇರಿದ್ದರು. . ಎರಡನೇ ದಿನದಾಟದ ಅಂತ್ಯಕ್ಕೆ 36 ಓವರ್‌ಗಳಿಗೆ 90 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಭಾರತ 97 ರನ್ ಗಳ ಮುನ್ನಡೆ ಗಳಿಸಿದೆಯಾದರೂ ಪ್ರಮುಖ ಆರು ವಿಕೆಟ್‌ಗಳನ್ನು ಕಳೆದುಕೊಂಡಿದೆ.

 

ವೃತ್ತಿ ಜೀವನದ ಶ್ರೇಷ್ಠ ಕ್ಯಾಚ್ ಹಿಡಿದ ರವೀಂದ್ರ ಜಡೇಜಾ

ಹ್ಯಾಗ್ಲೆ ಓವಲ್ ಅಂಗಳದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್‌ ಪಂದ್ಯದ ಎರಡನೇ ದಿನ ನ್ಯೂಜಿಲೆಂಡ್ ತಂಡ 235 ರನ್‌ಗಳಿಗೆ ಆಲೌಟ್ ಆಯಿತು. ಆದರೆ, ಇಂದಿನ ದಿನದಾಟದಲ್ಲಿ ಭಾರತ ತಂಡದ ಸ್ಟಾರ್ ಆಲ್ರೌಂಡರ್‌ ರವೀಂದ್ರ ಜಡೇಜಾ ಅವರು ಹಿಡಿದ ಕ್ಯಾಚ್ ಅತ್ಯಂತ ಆಕರ್ಷಣೆಯಿಂದ ಕೂಡಿತ್ತು.

ಮಧ್ಯಾಹ್ನದ ಭೋಜನ ವಿರಾಮದ ವೇಳೆಗೆ ನ್ಯೂಜಿಲೆಂಡ್ 142 ರನ್‌ಗಳಿಗೆ 142 ರನ್ ಗಳಿಸಿತ್ತು. ನಂತರ, ಕೈಲ್ ಜಾಮಿಸನ್(49) ಹಾಗೂ ನೀಲ್ ವ್ಯಾಗ್ನರ್ (21) ಅವರು ಒಂಬತ್ತನೇ ವಿಕೆಟ್‌ಗೆ 51 ರನ್ ಜತೆಯಾಟವಾಡಿದ್ದರು. ಈ ವೇಳೆ ನೀಲ್ ವ್ಯಾಗ್ನರ್ ಅವರು ಸ್ಕೈರ್ ಲೆಗ್ ಕಡೆ ಹೊಡೆದ ಚೆಂಡನ್ನು ರವೀಂದ್ರ ಜಡೇಜಾ ಅವರು ಜಂಪ್ ಮಾಡುವ ಮೂಲಕ ಕ್ಯಾಚ್‌ ಹಿಡಿದರು.

ಅತ್ಯಂತ ಕಠಿಣ ಕ್ಯಾಚ್ ಹಿಡಿದ ರವೀಂದ್ರ ಜಡೇಜಾ ಅವರನ್ನು ಸಹ ಆಟಗಾರರ ಸುತ್ತುವರಿದು ಅಭಿನಂದನೆ ಸಲ್ಲಿಸಿದರು.

 

 

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp