ಕಳಪೆ ಆಟದಲ್ಲೂ ಬಿಸಿಸಿಐ ಅಧ್ಯಕ್ಷ ಗಂಗೂಲಿಯ 18 ವರ್ಷದ ಹಿಂದಿನ ಇತಿಹಾಸ ಪುನಾರಾವರ್ತಿಸಿದ ಕೊಹ್ಲಿ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿಯ 18 ​​ವರ್ಷದ ಹಿಂದಿನ ಇತಿಹಾಸವನ್ನು ಪುನರಾವರ್ತಿಸಿದ್ದಾರೆ.
ಕೊಹ್ಲಿ-ಗಂಗೂಲಿ
ಕೊಹ್ಲಿ-ಗಂಗೂಲಿ

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿಯ 18 ​​ವರ್ಷದ ಹಿಂದಿನ ಇತಿಹಾಸವನ್ನು ಪುನರಾವರ್ತಿಸಿದ್ದಾರೆ.

ವಿರಾಟ್ ಕೊಹ್ಲಿ ಅವರಿಗೆ ದಾಖಲೆಯನ್ನು ಅಳಿಸಿ ಹಾಕುವುದು ಹೊಸ ಕೆಲಸ ಅಲ್ಲ. ಆದರೆ, ಈ ದಾಖಲೆ ವಿರಾಟ್ ಅವರ ಕಳಪೆ ಆಟಕ್ಕೆ ಸಂದಿದ್ದಾಗಿದೆ. ಗಂಗೂಲಿ ನಾಯಕತ್ವದಲ್ಲಿ, ಭಾರತವು 2002 ರಲ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲಿ 0–2ರಿಂದ ಸೋಲನುಭವಿಸಿತ್ತು. ಮತ್ತು ವಿರಾಟ್ ನಾಯಕತ್ವದಲ್ಲಿ, 2020 ರಲ್ಲಿ ನಡೆದ ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತವು 0–2ರಿಂದ ಸೋಲನುಭವಿಸಿದೆ.

ನಾಯಕತ್ವ ಮತ್ತು ಬ್ಯಾಟಿಂಗ್ ವಿಷಯದಲ್ಲಿ ಗಂಗೂಲಿ ಮತ್ತು ವಿರಾಟ್ ನ್ಯೂಜಿಲೆಂಡ್ ಪ್ರವಾಸಗಳಲ್ಲಿ ಸಾಕಷ್ಟು ಹೋಲಿಕೆಯನ್ನು ಹೊಂದಿದ್ದಾರೆ. ಗಂಗೂಲಿ 2002 ರಲ್ಲಿ 5, 5, 17 ಮತ್ತು 2 ಸೇರಿದಂತೆ ಒಟ್ಟು 29 ರನ್ ಗಳಿಸಿದರು ಮತ್ತು ಸರಾಸರಿ 7.25 ಆಗಿದ್ದರೆ, ವಿರಾಟ್ 3, 14, 2 ಮತ್ತು 19 ಸೇರಿದಂತೆ 38 ರನ್ ಗಳಿಸಿದ್ದರು ಮತ್ತು ಸರಾಸರಿ 9.50 ರನ್ ಆಗಿದೆ. ಆದರೂ ಗಂಗೂಲಿ ಮತ್ತು ವಿರಾಟ್ ಅವರನ್ನು ವಿದೇಶಿ ನೆಲದಲ್ಲಿ ಭಾರತದ ಅತ್ಯಂತ ಯಶಸ್ವಿ ನಾಯಕ ಎಂದು ಪರಿಗಣಿಸಲಾಗಿದೆ.

2002 ಮತ್ತು 2020 ರ ಎರಡೂ ಸಂದರ್ಭಗಳಲ್ಲಿ, ನ್ಯೂಜಿಲೆಂಡ್ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಟಾಸ್ ಗೆದ್ದಿತು ಮತ್ತು ಮೊದಲು ಬ್ಯಾಟಿಂಗ್ ಮಾಡಲು ಭಾರತವನ್ನು ಕೇಳಿತು. ಗಂಗೂಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 10 ವಿಕೆಟ್ ಮತ್ತು ನಾಲ್ಕು ವಿಕೆಟ್‌ಗಳಿಂದ ಸೋಲನ್ನು ಅನುಭವಿಸಿತ್ತು. ವಿರಾಟ್ ನಾಯಕತ್ವದಲ್ಲಿ ಭಾರತ 10 ವಿಕೆಟ್ ಮತ್ತು ಏಳು ವಿಕೆಟ್‍ಗಳಿಂದ ಸೋಲನ್ನು ಕಂಡಿತ್ತು.

2002ರಲ್ಲಿ, ನ್ಯೂಜಿಲೆಂಡ್‌ನ ಪರ ಮಾರ್ಕ್ ರಿಚರ್ಡ್‌ಸನ್ 89 ರನ್‌ಗಳೊಂದಿಗೆ ಸರಣಿಯಲ್ಲಿ ಗರಿಷ್ಠ ರನ್ ದಾಖಲಿಸಿದ್ದರು. ಈ ಬಾರಿ ಕೇನ್ ವಿಲಿಯಮ್ಸನ್ 89 ರನ್ ಗಳಿಸಿ ನ್ಯೂಜಿಲೆಂಡ್‌ನ ಅಗ್ರ ಸ್ಕೋರರ್ ಆಗಿದ್ದರು. 2002 ರ ಸರಣಿಯಲ್ಲಿ ಪ್ರತಿ ವಿಕೆಟ್‌ಗೆ ಭಾರತದ ಸರಾಸರಿ ರನ್ 13.37 ಆಗಿತ್ತು. 2020 ರಲ್ಲಿ 18.05 ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com