ಜನತಾ ಕರ್ಫ್ಯೂ ಬೆನ್ನಲ್ಲೇ ದೇಶದ ಜನತೆಗೆ ಆರ್. ಅಶ್ವಿನ್ ಮತ್ತು ಇರ್ಫಾನ್ ಹೇಳಿದ್ದೇನು?

ದೇಶದಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡಿದ ಜನತಾ ಕರ್ಫ್ಯೂ ಅನ್ನು ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಶ್ಲಾಘಿಸಿದ್ದು, ಹೀಗೆ ಜಾಗರುಕತೆಯನ್ನು ಮುಂದುವರಿಸಬೇಕು ಎಂದು ಹೇಳಿದ್ದಾರೆ.

Published: 22nd March 2020 10:54 PM  |   Last Updated: 22nd March 2020 10:54 PM   |  A+A-


irfan-Ashwin

ಇರ್ಫಾನ್ ಪಠಾಣ್-ಆರ್ ಅಶ್ವಿನ್

Posted By : Vishwanath S
Source : UNI

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡಿದ ಜನತಾ ಕರ್ಫ್ಯೂ ಅನ್ನು ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಶ್ಲಾಘಿಸಿದ್ದು, ಹೀಗೆ ಜಾಗರುಕತೆಯನ್ನು ಮುಂದುವರಿಸಬೇಕು ಎಂದು ಹೇಳಿದ್ದಾರೆ.

ಅಶ್ವಿನ್ ತಮ್ಮ ಟ್ವೀಟ್‌ನಲ್ಲಿ, “ಶಾಲೆಯಲ್ಲಿ ಹೇಳುತ್ತಿದ್ದಂತೆ ಸೂಜಿ ಬಿದ್ದರೂ ಸಪ್ಪಳವಾಗಬೇಕು ಎಂದು ಹೇಳುತ್ತಿದ್ದರು.  ಅದರಂತೆ ಜನತಾ ಕರ್ಫ್ಯೂ ನಂಬಲಾಗದ ಆರಂಭ ಕಂಡಿದೆ. ಈ ದಿನದ ನಂತರವೂ ಕೆಲವು ದಿನ ಮುಂದುವರಿಯುತ್ತದೆ ಮತ್ತು ಮುಂದಿನ ದಿನಗಳಲ್ಲಿ ಸಾಮಾಜಿಕ ಅಂತರವನ್ನು ಅನುಸರಿಸಲಾಗುವುದು ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಈಗಲೇ ಮನೆಯಿಂದ ಹೊರಬರಬೇಡಿ: ಇರ್ಫಾನ್
ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರು ಇನ್ನೂ ಮನೆಯಿಂದ ಹೊರಬರಬಾರದು ಎಂದು ದೇಶವಾಸಿಗಳಿಗೆ ಮನವಿ ಮಾಡಿದ್ದು, ನಾವು ಇನ್ನೂ ವೈರಸ್ ಅನ್ನು ಹೊಡೆದೋಡಿಸಿಲ್ಲ ಎಂದಿದ್ದಾರೆ. 

ಟ್ವೀಟ್ ಮಾಡುವ ಮೂಲಕ ಕರೋನಾ ವೈರಸ್ ವಿರುದ್ಧ ಹೋರಾಡುವ ಬಗ್ಗೆ ಇರ್ಫಾನ್ ಎಲ್ಲಾ ದೇಶವಾಸಿಗಳಿಗೆ ತಮ್ಮ ಸಲಹೆಯನ್ನು ನೀಡಿದ್ದಾರೆ ಮತ್ತು ಕರ್ಫ್ಯೂ ತೆಗೆದುಹಾಕಿದ ನಂತರವೂ ಇಂದು ರಾತ್ರಿ ಮನೆಯಿಂದ ಹೊರಹೋಗದಂತೆ ಜನರಲ್ಲಿ ಕೋರಿದ್ದಾರೆ. ಇರ್ಫಾನ್ ತಮ್ಮ ಟ್ವೀಟ್‌ನಲ್ಲಿ, "ನಾವು 2007 ಟಿ-20 ವಿಶ್ವಕಪ್ ಮತ್ತು 2011 ರ ವಿಶ್ವಕಪ್‌ನಲ್ಲಿ ವಿಜೇತರಾಗಿದ್ದಾಗ, ದೇಶದ ಎಲ್ಲರೂ ಮನೆಯಿಂದ ಹೊರಗೆ ಹೋಗಿ ಅದನ್ನು ಆಚರಿಸಿದರು. ಆದರೆ ಈಗ ಪರಿಸ್ಥಿತಿ ಬೇರೆಯದ್ದೇ ಆಗಿದೆ, ನಾವು ಇನ್ನೂ ಕರೋನಾ ವಿರುದ್ಧದ ಹೋರಾಟವನ್ನು ಗೆದ್ದಿಲ್ಲ ಎಂದು ಬರೆದುಕೊಂಡಿದ್ದಾರೆ.

Stay up to date on all the latest ಕ್ರಿಕೆಟ್ news
Poll
Defence minister Rajanath Singh

101 ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ಹೇರುವ ಭಾರತದ ಕ್ರಮವು, ದೇಶೀಯ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp