ಕೊರೋನಾ ವಿರುದ್ಧದ ಹೋರಾಟಕ್ಕೆ ಧೋನಿ ಕೇವಲ 1 ಲಕ್ಷ ಕೊಟ್ರಾ! 'ನಾಚಿಕೆ ಆಗಬೇಕು' ಎಂದು ಸಾಕ್ಷಿ ಕಿಡಿಕಾರಿದ್ದೇಕೆ?

ಟೀಂ ಇಂಡಿಯಾದ ಮಾಜಿ ನಾಯಕ, ಕೋಟಿ ಕೋಟಿ ಜಾಹೀರಾತು ಒಡೆಯ ಎಂಎಸ್ ಧೋನಿ ಅವರು ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೇವಲ 1 ಲಕ್ಷ ರುಪಾಯಿ ಮಾತ್ರ ನೀಡಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಎಂಎಸ್ ಧೋನಿ-ಸಾಕ್ಷಿ
ಎಂಎಸ್ ಧೋನಿ-ಸಾಕ್ಷಿ

ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ, ಕೋಟಿ ಕೋಟಿ ಜಾಹೀರಾತು ಒಡೆಯ ಎಂಎಸ್ ಧೋನಿ ಅವರು ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೇವಲ 1 ಲಕ್ಷ ರುಪಾಯಿ ಮಾತ್ರ ನೀಡಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. 

ಕೋಟ್ಯಂತರ ರುಪಾಯಿ ಒಡೆಯ ಎಂಎಸ್ ಧೋನಿ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೇವಲ 1 ಲಕ್ಷ ರುಪಾಯಿ ಮಾತ್ರ ನೀಡಿದ್ದಾರೆ ಎಂಬಂತಹ ಟ್ವೀಟ್ ವೊಂದು ಸಖತ್ ವೈರಲ್ ಆಗಿತ್ತು. ಇದರ ಪರ ವಿರೋಧ ಟೀಕೆಗಳು ಶುರುವಾಗಿತ್ತು. 

ಇದಕ್ಕೆ ಧೋನಿ ಪತ್ನಿ ಸಾಕ್ಷಿ ಕಿಡಿಕಾರಿದ್ದು ಟ್ವೀಟ್ ಮಾಡಿ ಇಂತಹ ಸೂಕ್ಷ್ಮ ಸಮಯದಲ್ಲಿ ಈ ರೀತಿಯ ಸುಳ್ಳು ಸುದ್ದಿಗಳನ್ನು ನೀಡುತ್ತಿರುವುದನ್ನು ನಿಲ್ಲಿಸಬೇಕು ಎಂದು ನಾನು ಎಲ್ಲಾ ಮಾಧ್ಯಮ ಸಂಸ್ಥೆಗಳಿಗೆ ವಿನಂತಿಸುತ್ತೇನೆ. ನಿಮಗೆ ನಾಚಿಕೆಯಾಗಬೇಕು! ಜವಾಬ್ದಾರಿಯುತ ಪತ್ರಿಕೋಧ್ಯಮ ಎಲ್ಲಿ ಕಣ್ಮರೆಯಾಯಿತು ಎಂದು ನಾನು ಆಶ್ಚರ್ಯ ಪಡುತ್ತಿದ್ದೇನೆ ಎಂದು ಟ್ವೀಟಿಸಿದ್ದಾರೆ.

ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಸಲುವಾಗಿ ಧೋನಿ ಕ್ರೌಡ್ ಫಂಡಿಂಗ್ ವೆಬ್‌ಸೈಟ್ ಕೆಟ್ಟೊ ಮೂಲಕ ಪುಣೆಯ ಸಾರ್ವಜನಿಕ ಚಾರಿಟಬಲ್ ಟ್ರಸ್ಟ್‌ಗೆ ಮುಕುಲ್ ಮಾಧವ್ ಫೌಂಡೇಶನ್‌ಗೆ ದೇಣಿಗೆ ನೀಡಿದ್ದಾರೆ ಎಂದು ಕೆಲವು ವರದಿಗಳು ಪ್ರಕಟಗೊಂಡವು. ಇದಕ್ಕೆ ಕೆಲವು ಟ್ವೀಟರಿಗರು ಈ ಪ್ರಕರಣಕ್ಕೆ ಎಂಎಸ್ ಧೋನಿ ನೀಡಿದ ಕೊಡುಗೆಯನ್ನು ಶ್ಲಾಘಿಸಿದರೆ, ಇತರರು ಈ ಮೊತ್ತ ತಡವಾಗಿದೆ ಎಂದು ಕಿಡಿಕಾರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com