ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಕ್ವಾರಂಟೈನ್‌ಗೆ ಒಳಗಾಗಲು ಟೀಂ ಇಂಡಿಯಾ ರೆಡಿ: ಬಿಸಿಸಿಐ ಅಧಿಕಾರಿ

ವರ್ಷಾಂತ್ಯದಲ್ಲಿ ಯೋಜಿಸಿದಂತೆ ಪ್ರವಾಸ ಮುಂದುವರಿಯಲು ನೆರವಾಗುವುದಾದರೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಆತನ ತಂಡ ಆಸ್ಟ್ರೇಲಿಯಾದಲ್ಲಿ ಎರಡು ವಾರಗಳ ಕಾಲ ಕ್ವಾರಂಟೈನ್ ನಲ್ಲಿ ಇರಲು ಸಜ್ಜಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

Published: 08th May 2020 07:10 PM  |   Last Updated: 08th May 2020 07:10 PM   |  A+A-


Team India

ಟೀಂ ಇಂಡಿಯಾ

Posted By : Vishwanath S
Source : UNI

ಸಿಡ್ನಿ: ವರ್ಷಾಂತ್ಯದಲ್ಲಿ ಯೋಜಿಸಿದಂತೆ ಪ್ರವಾಸ ಮುಂದುವರಿಯಲು ನೆರವಾಗುವುದಾದರೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಆತನ ತಂಡ ಆಸ್ಟ್ರೇಲಿಯಾದಲ್ಲಿ ಎರಡು ವಾರಗಳ ಕಾಲ ಕ್ವಾರಂಟೈನ್ ನಲ್ಲಿ ಇರಲು ಸಜ್ಜಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೊರೊನಾ ವೈರಸ್ ನಿಂದಾಗಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಕ್ರಿಕೆಟ್ ಆಸ್ಟ್ರೇಲಿಯಾಗೆ ಈ ಸರಣಿ ನಡೆಯುವುದರಿಂದ 195 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದಷ್ಟು ಸಹಾಯವಾಗಲಿದೆ. ಭಾರತ-ಆಸೀಸ್ ಸರಣಿ ಬಗ್ಗೆ ಆಶಾದಾಯಕ ವ್ಯಕ್ತಪಡಿಸಿರುವ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್, ಮುಂಬರುವ ಡಿಸೆಂಬರ್ ಮತ್ತು ಜನವರಿಯಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಮತ್ತು ಮೂರು ಪಂದ್ಯಗಳ ಏಕದಿನ ಸರಣಿ ನಡೆಯುವ ಮುನ್ನ ಟೀಮ್ ಇಂಡಿಯಾ ಆಟಗಾರರು ಪ್ರತ್ಯೇಕವಾಗಿರಲು (ಕ್ವಾರಂಟೈನ್) ಸಿದ್ದರಿದ್ದಾರೆ ಎಂದು ಹೇಳಿದ್ದಾರೆ.

ಕ್ವಾರಂಟೈನ್ ಬಿಟ್ಟು ಬೇರ ಆಯ್ಕೆಗಳಿಲ್ಲ. ಪ್ರತಿಯೊಬ್ಬರು ಅದನ್ನು ಮಾಡಬೇಕಾಗುತ್ತದೆ, ನೀವು ಕ್ರಿಕೆಟ್ ಪುನರಾರಂಭವಾಗುವುದನ್ನು ಬಯಸುತ್ತೀರಿ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಗೆ ಅವರು ಹೇಳಿದ್ದಾರೆ.

ಇತ್ತಂಡಗಳ ನಡುವೆ ಐದನೇ ಟೆಸ್ಟ್ ಆಡುವ ಸಾಧ್ಯತೆಯ ಬಗ್ಗೆ ಮಂಡಳಿಗಳು ಚರ್ಚಿಸುತ್ತಿವೆ. ಆದರೆ ಹೆಚ್ಚುವರಿ ಸೀಮಿತ ಓವರ್ ಗಳ ಪಂದ್ಯಗಳನ್ನಾಡುವುದು ಆರ್ಥಿಕ ಪುನಶ್ಚೇತನಕ್ಕೆ ನೆರವಾಗಲಿದೆ ಎಂದು ಧುಮಾಲ್ ಅಭಿಪ್ರಾಯಪಟ್ಟಿದ್ದಾರೆ. 

ಒಂದು ವೇಳೆ ಆಡಲು ಅವಕಾಶ ಲಭ್ಯವಾದರೆ, ಅವರು ಒಂದು ಟೆಸ್ಟ್ ಅಥವಾ ಎರಡು ಏಕದಿನ ಅಥವಾ ಎರಡು ಟಿ20 ಪಂದ್ಯಗಳನ್ನಾಡುವ ಕುರಿತು ನಿರ್ಧಾರಿಸುವುದು ಮಂಡಳಿಗಳಿಗೆ ಬಿಟ್ಟಿದ್ದಾಗಿದೆ. ಲಾಕ್ ಡೌನ್ ನಿಂದಾಗಿ ಅವರು ನಷ್ಟ ಅನುಭವಿಸಿರುವುದನ್ನು ಗಮನಿಸಿದರೆ, ಆದಾಯ ಬರುವುದನ್ನು ಅವರು ಬಯಸುತ್ತಾರೆ. ಟೆಸ್ಟ್ ಪಂದ್ಯದ ಆದಾಯಕ್ಕಿಂತಲೂ ಸೀಮಿತ ಓವರ್ ಗಳ ಪಂದ್ಯಗಳಲ್ಲಿ ಹೆಚ್ಚಿನ ಆದಾಯ ಸಿಗಲಿದೆ ಎಂದು ಧುಮಾಲ್ ಹೇಳಿದ್ದಾರೆ.
 

Stay up to date on all the latest ಕ್ರಿಕೆಟ್ news with The Kannadaprabha App. Download now
Poll
coronadead

ಕೊರೋನಾ ವೈದ್ಯಕೀಯ ಸಲಕರಣೆ ಖರೀದಿ ಹೆಸರಿನಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ಆರೋಪಗಳು ಕೇಳಿಬಂದಿವೆ. ನೀವು ಏನಂತೀರಿ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp