ಶ್ರೀಮಂತ ಚುಟುಕು ಕ್ರಿಕೆಟ್ ಟೂರ್ನಿ ಐಪಿಎಲ್ ನಡೆಯದಿದ್ದರೆ ಬಿಸಿಸಿಐಗೆ 4000 ಕೋಟಿ ನಷ್ಟ..!

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಈ ವರ್ಷ ಆಯೋಜಿಸದಿದ್ದರೆ, ಬಿಸಿಸಿಐಗೆ 4000 ಕೋಟಿ ರೂಪಾಯಿಗಳ ಭಾರಿ ನಷ್ಟವಾಗಲಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಖಜಾಂಚಿ ಅರುಣ್ ಧುಮಾಲ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಈ ವರ್ಷ ಆಯೋಜಿಸದಿದ್ದರೆ, ಬಿಸಿಸಿಐಗೆ 4000 ಕೋಟಿ ರೂಪಾಯಿಗಳ ಭಾರಿ ನಷ್ಟವಾಗಲಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಖಜಾಂಚಿ ಅರುಣ್ ಧುಮಾಲ್ ಹೇಳಿದ್ದಾರೆ.

ಕೋವಿಡ್ -19 ರ ಕಾರಣದಿಂದಾಗಿ ಕ್ರಿಕೆಟ್ ಚಟುವಟಿಕೆ ಮೊಟಕುಗೊಂಡಿವೆ. ಈ ವೇಳೆ ಸಂದರ್ಶನದಲ್ಲಿ ಮಾತನಾಡಿದ ಧಮಾಲ್ ಕ್ರಿಕೆಟ್ ಪುನಃ ಆರಂಭವಾದಗ ಮಾತ್ರ ಐಪಿಎಲ್ ಬಗ್ಗೆ ನಿರ್ಣಯಿಸಲು ಸಾಧ್ಯ. ಈ ಬಾರಿ ಐಪಿಎಲ್ ಸಂಘಟಿಸಲು ನಮಗೆ ಸಾಧ್ಯವಾಗದಿದ್ದರೆ, ನಾವು ಸುಮಾರು 4000 ಕೋಟಿ ರೂ. ನಷ್ಟವಾಗಲಿದೆ ಎಂದಿದ್ದಾರೆ.
  
ಕೊರೊನಾ ವೈರಸ್ ಕೋವಿಡ್ -19 ರ ವಿಶ್ವಾದ್ಯಂತ ಸಾಂಕ್ರಾಮಿಕ ರೋಗವು ಹೆಚ್ಚುತ್ತಿದ್ದು, ದೇಶದಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಮೂರನೇ ಲಾಕ್ ಡೌನ್ ಇದು ಮೇ 17 ರವರೆಗೆ ನಡೆಯುತ್ತದೆ. ದೇಶಾದ್ಯಂತ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿವೆ ಮತ್ತು ಐಪಿಎಲ್ 13 ನೇ ಋತುವನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ. 

ಧುಮಾಲ್ ಕ್ರಿಕೆಟಿಗರ ಆರೋಗ್ಯ ಮತ್ತು ಸುರಕ್ಷತೆಯು ಬಿಸಿಸಿಐಗೆ ಮೊದಲ ಆದ್ಯತೆ ನೀಡುತ್ತದೆ. ಒಮ್ಮೆ ಅವಕಾಶ ಲಭ್ಯವಾದರೆ, ನಾವು ಐಪಿಎಲ್ ಅನ್ನು ಸಂಘಟಿಸಲು ಬಯಸುತ್ತೇವೆ. ವಿಶ್ವದಲ್ಲಿ ಕ್ರಿಕೆಟ್ ಚಟುವಟಿಕೆ ಆರಂಭವಾದ ಮೇಲೆ, ಐಪಿಎಲ್ ಆಡುವ ಬಗ್ಗೆ ವಿವಿಧ ರಾಜ್ಯಗಳ ಸಮಿತಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com