ಟೀಂ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸಕ್ಕೆ ಕಿಟ್ ಪ್ರಾಯೋಜಕರಿಲ್ಲ!

ಮುಂದಿನ ತಿಂಗಳು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುತ್ತಿರುವ ಟೀಂ ಇಂಡಿಯಾಗೆ  ಕಿಟ್ ಪ್ರಾಯೋಜಕರು ಇಲ್ಲದಿರುವ ಬಗ್ಗೆ ಬಿಸಿಸಿಐ ಚಿಂತಿಸುತ್ತಿದೆ. ಟೆಂಡರ್ ಗಡುವನ್ನು ವಿಸ್ತರಿಸುವ ಸಾಧ್ಯತೆಯನ್ನು ಮಂಡಳಿಯು ಇನ್ನೂ ಫೈನಲ್ ಮಾಡಿಲ್ಲವಾಗಿಯೂ ಸರಣಿ ಪ್ರಾರಂಭವಾಗುವ ಹೊತ್ತಿಗೆ ಅದು ಪ್ರಾಯೋಜಕರನ್ನು ಹೊಂದಿವ ಸಆಧ್ಯತೆಯ ನಿರೀಕ್ಷೆಯಲ್ಲಿದೆ.
ಟೀಂ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸಕ್ಕೆ ಕಿಟ್ ಪ್ರಾಯೋಜಕರಿಲ್ಲ!

ಚೆನ್ನೈ: ಮುಂದಿನ ತಿಂಗಳು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುತ್ತಿರುವ ಟೀಂ ಇಂಡಿಯಾಗೆ  ಕಿಟ್ ಪ್ರಾಯೋಜಕರು ಇಲ್ಲದಿರುವ ಬಗ್ಗೆ ಬಿಸಿಸಿಐ ಚಿಂತಿಸುತ್ತಿದೆ. ಟೆಂಡರ್ ಗಡುವನ್ನು ವಿಸ್ತರಿಸುವ ಸಾಧ್ಯತೆಯನ್ನು ಮಂಡಳಿಯು ಇನ್ನೂ ಫೈನಲ್ ಮಾಡಿಲ್ಲವಾಗಿಯೂ ಸರಣಿ ಪ್ರಾರಂಭವಾಗುವ ಹೊತ್ತಿಗೆ ಅದು ಪ್ರಾಯೋಜಕರನ್ನು ಹೊಂದಿವ ಸಾಧ್ಯತೆಯನಿರೀಕ್ಷೆಯಲ್ಲಿದೆ. ಆದರೆ ಇಲ್ಲಿಯವರೆಗೆ, ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ ಮತ್ತು ಅಧಿಕಾರಿಗಳು ಯಾವುದೇ ಸಾಧ್ಯತೆಗಳಿದ್ದರೂ ಎದುರಿಸಲು ಸಿದ್ಧತೆ ನಡೆಸುತ್ತಿದ್ದಾರೆ, 

ಇದುವರೆಗೂ ಆಸ್ಟ್ರೇಲಿಯಾ ಸರಣಿಗೆ ಕಿಟ್ ಪ್ರಾಯೋಜಕರು ಸಿಕ್ಕಿಲ್ಲ. ಆಗಸ್ಟ್ 3 ರಂದು, ಬಿಸಿಸಿಐ ಕಿಟ್ ಪ್ರಾಯೋಜಕ ಮತ್ತು ಅಧಿಕೃತ ವಾಣಿಜ್ಯ ಪಾಲುದಾರರಿಗೆ ಟೆಂಡರ್ ಆಹ್ವಾನಿಸುವ ಜಾಹೀರಾತು ಹೊರಡಿಸಿದೆ. ಆದರೆ ಈ ಟೆಂಡರ್ ನ ಗಡುವು ಆಗಸ್ಟ್ 26ಕ್ಕೆ ಕೊನೆಗೊಂಡಿದೆ.

ಅಡಿದಾಸ್ ಮತ್ತು ಪೂಮಾ ಸೇರಿದಂತೆ ಹಲವಾರು ಕಂಪನಿಗಳು ಟೆಂಡರ್ ದಾಖಲೆಗಳನ್ನು ಖರೀದಿಸಿದರೂ, ಅವರು ಅಂತಿಮ ಬಿಡ್ ಸಲ್ಲಿಸಲಿಲ್ಲ. ಅಂತಿಮವಾಗಿ, ಸೆಪ್ಟೆಂಬರ್‌ನಲ್ಲಿ ಬಿಸಿಸಿಐ ಈ ಪ್ರಕ್ರಿಯೆಯನ್ನು ಕೈಬಿಡಬೇಕಾಯಿತು. ಕೋವಿಡ್  -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮಾರುಕಟ್ಟೆಯ ಪರಿಸ್ಥಿತಿ ಈ ಪರಿಸ್ಥಿತಿಗೆ ಕಾರಣವೆನ್ನಲಾಗಿದ್ದರೂ ಶ್ರೇಷ್ಠ ಕಂಪನಿಗಳ ಆಸಕ್ತಿಯ ಕೊರತೆಯಿಂದ ಇಂತಹಾ ಸ್ಥಿತಿ ಉಂಟಾಗಿದೆಎಂದು ಬಿಸಿಸಿಐ ಮೂಲಗಳು ತಿಳಿಸಿವೆ, ಅದರಲ್ಲೂ ವಿಶೇಷವಾಗಿ ಮೂಲ ಬೆಲೆಯನ್ನು 88 ಲಕ್ಷ ರೂ.ಗಳಿಂದ  61 ಲಕ್ಷ ರೂ.ಗೆ ಇಳಿಕೆ ಮಾಡಿದ್ದಾಗ್ಯೂ ಯಾವಿಬ್ಬ ಬಿಡ್ ಸಹ ಅಂತಿಮವಾಗಿಲ್ಲ.

ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ಹೊಂದಿರುವ ಪೂಮಾ ಮಾರುಕಟ್ಟೆಯಲ್ಲಿ ತನ್ನ ಪಾಲಿನ ಕ್ಷೇತ್ರವನ್ನು ಬಲಪಡಿಸಲು ದೊಡ್ಡ ಪ್ರಯತ್ನವನ್ನು ಮಾಡುತ್ತದೆ ಎಂದು ಬಿಸಿಸಿಐ ನಂಬಿತ್ತು. ಅಡಿಡಾಸ್  ಸಹ ಆಸಕ್ತಿಯನ್ನು ತೋರಿಸುವುದರೊಂದಿಗೆ, ಹಿಂದಿನ  ಋತುವಿನಲ್ಲಿ ಟ್ ಪ್ರಾಯೋಜಕರಾದ ನೈಕ್‌ಗೆ ಅಂತಿಮ ಬಿಡ್ ಖಂಡಿತವಾಗಿಯೂ ಹೊಂದಿಕೆಯಾಗುತ್ತದೆ ಎಂದು ಬಿಸಿಸಿಐ ಭಾವಿಸಿತ್ತು. ಅಂತಿಮವಾಗಿ, ಪೂಮಾ ಅಥವಾ ಅಡಿಡಾಸ್ ಇಬ್ಬರೂ  ಬಿಡ್ ಸಲ್ಲಿಸಲಿಲ್ಲ ಮತ್ತು ಐಪಿಸಿಎಲ್ ಪ್ರಾರಂಭವಾದಾಗ ಬಿಸಿಸಿಐ ಈ ಪ್ರಕ್ರಿಯೆಯನ್ನು ಸ್ವಲ್ಪ ಸಮಯದವರೆಗೆ ಬದಿಗಿಟ್ಟಿತು. ಮಾರುಕಟ್ಟೆ ವಿಶ್ಲೇಷಕರು ಈ ಎರಡು ಬ್ರಾಂಡ್‌ಗಳು ಯುರೋಪಿಯನ್ ಫುಟ್‌ಬಾಲ್‌ನಲ್ಲಿ ಭಾರಿ ಮಾರುಕಟ್ಟೆಯನ್ನು ಹೊಂದಿರುವುದರಿಂದ ಕಿಟ್ ಪ್ರಾಯೋಜಕತ್ವಕ್ಕಾಗಿ ಲಕ್ಷಾಂತರ ಹಣವನ್ನು ಪಾವತಿಸುತ್ತಾರೆ ಎಂದಿದ್ದವು.

2006 ರಿಂದ ಟೀಂ ಇಂಡಿಯಾದ ಡ್ರೆಸ್  ಪ್ರಾಯೋಜಕರಾಗಿದ್ದ ನೈಕ್, ಆರಂಭದಲ್ಲಿ ಬಿಸಿಸಿಐಗೆ ತನ್ನ ಒಪ್ಪಂದವನ್ನು ಕಡಿಮೆ ದರಕ್ಕೆ ಇಳಿಕೆ ಮಾಡುವಂತೆ ಕೋರಿತ್ತು ಆದರೆ ಆ ಸಮಯ ಬಿಸಿಸಿಐ ಅದಕ್ಕೆ ಒಪ್ಪಿರಲಿಲ್ಲ. ಆ ಕಾರಣದಿಂದ ಸಂಸ್ಥೆಯು ಒಪ್ಪಂದವನ್ನು ನವೀಕರಿಸಲು ಆಸಕ್ತಿ ತೋರಿಸಲಿಲ್ಲ, ಬಿಸಿಸಿಐ ಹೊಸ ಟೆಂಡರ್ ಪ್ರಕ್ರಿಯೆಯೊಂದಿಗೆ ಮುಂದುವರಿಯಲು ಇದು ಪ್ರೇರಣೆಯಾಗಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com