2016ರ ಬಳಿಕ ಆರ್‌ಸಿಬಿ ತಂಡ ಸಮತೋಲಿತವಾಗಿದೆ: ವಿರಾಟ್ ಕೊಹ್ಲಿ

ಐಪಿಎಲ್ 2016ರ ಬಳಿಕ ಪ್ರಸ್ತುತ ಬೆಂಗಳೂರು ತಂಡ ಅತ್ಯಂತ ಸಮತೋಲಿತ ತಂಡವಾಗಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ದುಬೈ: ಐಪಿಎಲ್ 2016ರ ಬಳಿಕ ಪ್ರಸ್ತುತ ಬೆಂಗಳೂರು ತಂಡ ಅತ್ಯಂತ ಸಮತೋಲಿತ ತಂಡವಾಗಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. 

ಬೆಂಗಳೂರು ತಂಡ 2016ರ ಫೈನಲ್‌ ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಕಂಡಿತ್ತು.

ಈ ಬಾರಿ ಯುವ ಮತ್ತು ಅನುಭವಿ ಆಟಗಾರರ ಉತ್ತಮ ಸಂಯೋಜನೆ ಇದ್ದು, ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಬೇಕಾದ ಕೌಶಲ್ಯಗಳನ್ನು ಹೊಂದಿದ್ದಾರೆ ಎಂದು ವಿರಾಟ್ ಆರ್‌ಸಿಬಿ ಟಿವಿಗೆ ತಿಳಿಸಿದರು. ತಂಡದ ಯುವ ಆಟಗಾರರು ತಮ್ಮ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಾಗಿದ್ದಾರೆ ಮತ್ತು ಈ ಬಾರಿ ಅವರು ಅವಕಾಶಗಳಿಗಾಗಿ ಕಾಯುತ್ತಿದ್ದಾರೆ ಎಂದು ಅವರು ಹೇಳಿದರು.

ಆರ್‌ಸಿಬಿ ಇನ್ನೂ ಐಪಿಎಲ್ ಟ್ರೋಫಿ ಗೆದ್ದಿಲ್ಲ. ಆದರೆ ಮೂರು ಬಾರಿ ಫೈನಲ್ ತಲುಪಿತ್ತು. ಆದರೆ ಎಲ್ಲಾ ಸಂದರ್ಭಗಳಲ್ಲಿ ತಂಡ ಸೋಲಿನೊಂದಿಗೆ ಹೊರಬಂದಿತ್ತು.

ಸದ್ಯದ ತಂಡ ಹಿಂದೆ ನಡೆದ ಸಂಗತಿಗಳೊಂದಿಗೆ ಸಂಪರ್ಕ ಕಡಿತಗೊಂಡು ಮುಂದುವರಿಯಲು ನೋಡುತ್ತದೆ ಎಂದು ಕೊಹ್ಲಿ ಹೇಳಿದರು.

ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ತಾರೆ ಎಬಿ ಡಿವಿಲಿಯರ್ಸ್ ಬಗ್ಗೆ ಕೊಹ್ಲಿ ಮಾತನಾಡುತ್ತಾ ಅವರು ಎಂದಿಗಿಂತಲೂ ಶಾಂತವಾಗಿದ್ದಾರೆ ಎಂದು ಹೇಳಿದರು. ಡಿವಿಲಿಯರ್ಸ್ ವಿಭಿನ್ನ ಸ್ಥಳದಿಂದ ಬರುತ್ತಿದ್ದಾರೆ. ಸದ್ಯ ಅವರು ತನ್ನ ಜೀವನವನ್ನು ಆನಂದಿಸುತ್ತಿದ್ದಾರೆ ನಿರಾಳನಾಗಿದ್ದಾನೆ. ಅವರು ಎಂದಿನಂತೆ ಫಿಟ್ ಆಗಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com