ಐಪಿಎಲ್ 2021: ಕೋಪದಲ್ಲಿ ಕುರ್ಚಿ ಹೊಡೆದುರುಳಿಸಿದ ವಿರಾಟ್ ಕೊಹ್ಲಿ

 ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಔಟ್ ಆದ ಬಳಿಕ ಕೋಪದಲ್ಲಿ ಕುರ್ಚಿ ಹೊಡೆದುರುಳಿಸಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on: 

ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಔಟ್ ಆದ ಬಳಿಕ ಕೋಪದಲ್ಲಿ  ಕುರ್ಚಿ ಹೊಡೆದುರುಳಿಸಿದ್ದಾರೆ.

ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಬುಧವಾರ ನಡೆದ ಪಂದ್ಯದ ವೇಳೆ  ಜೇಸನ್ ಹೋಲ್ಡರ್ ಎಸೆತದಲ್ಲಿ ವಿಜಯ್ ಶಂಕರ್ ಗೆ ಕ್ಯಾಚ್ ನೀಡಿ ಫೆವಿಲಿಯನ್ ನತ್ತ ಹೆಜ್ಜೆ ಹಾಕುತ್ತಿದ್ದ ಕೊಹ್ಲಿ, ಸಂಯಮವನ್ನು ಕಳೆದುಕೊಂಡು, ಬೌಂಡರಿ ಹಗ್ಗವನ್ನು ಇನ್ನು ಮುಂದಕ್ಕೆ ಸಾಗಿ ಡಗೌಟ್ ನಲ್ಲಿದ್ದ ಕುರ್ಚಿಯಿಂದ ಬ್ಯಾಟಿನಿಂದ ಹೊಡೆದುರುಳಿಸಿದ್ದಾರೆ. 

ಮೈದಾನದ ಒಳಗಡೆ ಆಕ್ರಮಣಕಾರಿ ಮನೋಭಾವ ಮೈಗೂಡಿಸಿಕೊಂಡಿರುವ ವಿರಾಟ್ ಕೊಹ್ಲಿ, ಹಲವು ವೇಳೆ ತಾಳ್ಮೆ ಕಳೆದುಕೊಂಡ ಪ್ರಸಂಗಗಳಿವೆ. ಇದೀಗ ಮತ್ತೊಮ್ಮೆ ಕೊಹ್ಲಿ ಎಲ್ಲೆ ಮೀರಿರುವುದು ಕಂಡುಬಂದಿದ್ದು, ವ್ಯಾಪಕ ಟೀಕೆಗಳಿಗೆ ಗುರಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com