'ಯಾರಿಂದಲೂ ಅಸಮರ್ಥ ಎನಿಸಿಕೊಳ್ಳಲು ಇಚ್ಛಿಸುವುದಿಲ್ಲ': ಎಂಎಸ್ ಧೋನಿ ಮಾತಿನ ಅರ್ಥವೇನು?

ಯಾರಿಂದಲೂ ಅಸಮರ್ಥ ಎನಿಸಿಕೊಳ್ಳಲು ಇಚ್ಛಿಸುವುದಿಲ್ಲ ಎಂದು ಚೆನ್ನೈಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.
ಎಂಎಸ್ ಧೋನಿ
ಎಂಎಸ್ ಧೋನಿ
Updated on: 

ಚೆನ್ನೈ: ಯಾರಿಂದಲೂ ಅಸಮರ್ಥ ಎನಿಸಿಕೊಳ್ಳಲು ಇಚ್ಛಿಸುವುದಿಲ್ಲ ಎಂದು ಚೆನ್ನೈಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.

ನಿನ್ನೆ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ನಡೆದ ಲೀಗ್ ಪಂದ್ಯದಲ್ಲಿ 45 ರನ್ ಗಳ ಅಂತರದ ಭರ್ಜರಿ ಜಯ ದಾಖಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಧೋನಿ, 'ತಂಡದಲ್ಲಿ ಯುವ ಆಟಗಾರರ ಜತೆ ಮುನ್ನುಗ್ಗುವುದು ಕಷ್ಟದ ವಿಚಾರ. ಆದರೆ ತಮ್ಮ ದೈಹಿಕ ಸಾಮರ್ಥ್ಯದ ಬಗ್ಗೆ ಅವರು  ಆಡಿಕೊಳ್ಳುವಂತಾಗದಿದ್ದರೆ ಅದುವೇ ದೊಡ್ಡ ಸಕಾರಾತ್ಮಕ ವಿಚಾರ ಎಂದು 39 ವರ್ಷದ ಧೋನಿ ಹೇಳಿದ್ದಾರೆ.

'ಆಟವಾಡುತ್ತಿರುವಾಗ ಅನ್‌ಫಿಟ್ (ದೈಹಿಕವಾಗಿ ಅಸಮರ್ಥ) ಎಂದು ಯಾರಿಂದಲೂ ಹೇಳಿಸಿಕೊಳ್ಳಲು ಬಯಸುವುದಿಲ್ಲ. ನಾನು ಯುವ ಆಟಗಾರರೊಂದಿಗೆ ಮುನ್ನುಗ್ಗಬೇಕಿದೆ. ಅವರು ತುಂಬಾ ವೇಗವಾಗಿ ಸಾಗುತ್ತಿದ್ದಾರೆ. ಈ ಸವಾಲು ಒಳ್ಳೆಯದು. 24ನೇ ವಯಸ್ಸಿನಲ್ಲಿದ್ದಾಗ ಫಾರ್ಮ್‌ ಬಗ್ಗೆ ನಾನು ಖಾತರಿ  ನೀಡಿರಲಿಲ್ಲ. 40ನೇ ವಯಸ್ಸಿನಲ್ಲಿದ್ದಾಗಲೂ ನೀಡಲು ಸಾಧ್ಯವಾಗದು. ಆದರೆ, ಕನಿಷ್ಠ ‘ಅವನೊಬ್ಬ ಅಸಮರ್ಥ’ ಎಂದು ಯಾರೂ ನನ್ನತ್ತ ಬೆರಳು ತೋರಿಸುವಂತೆ ಆಗದಿದ್ದರೆ ಸಾಕು. ಅದುವೇ ನನ್ನ ಪಾಲಿಗೆ ದೊಡ್ಡ ಸಕಾರಾತ್ಮಕ ಅಂಶವಾಗಿರಲಿದೆ ಎಂದು ಹೇಳಿದರು.

ಇದೇ ವೇಳೆ ಗೆಲುವಿನ ಕುರಿತು ಮಾತನಾಡಿದ ಧೋನಿ, ತಂಡವು 180ಕ್ಕೂ ಹೆಚ್ಚು ರನ್‌ ಗಳಿಸಿದ್ದರಿಂದ ಸಂತಸವಾಗಿದೆ. ಆದರೆ ನಾವು ಇನ್ನೂ ಹೆಚ್ಚು ರನ್ ಗಳಿಸಬಹುದಿತ್ತು. ಸ್ಯಾಮ್ ಅತ್ಯುತ್ತಮ ಬೌಲಿಂಗ್ ಮಾಡಿದರು. ಇಬ್ಬನಿ ಪರಿಣಾಮ ಚೆಂಡು ಒದ್ದೆಯಾದರೂ ಉತ್ತಮವಾಗಿ ಸ್ಪಿನ್ ಆಗುತ್ತಿತ್ತು. ಹೀಗಾಗಿ  ಉತ್ತಮ ಆರಂಭ ಬಹುಮುಖ್ಯವೆಂದು ಭಾವಿಸಿದ್ದೆ. ಆರನೇ ಬೌಲರ್ ಅನ್ನು ಹೊಂದಿರುವುದು ಮುಖ್ಯ, ಅದು ಯಾವಾಗಲೂ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.  

ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರುದ್ದ ಧೋನಿ ಸದ್ಯ ಐಪಿಎಲ್‌ ಟೂರ್ನಿಯಲ್ಲಿ ಆಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com