ಟೆಸ್ಟ್ ರ್ಯಾಂಕಿಂಗ್: ಕೆಎಲ್ ರಾಹುಲ್ ಗೆ ಬಡ್ತಿ, 2ನೇ ಸ್ಥಾನದಲ್ಲಿ ಅಶ್ವಿನ್

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ನೂತನವಾಗಿ ಟೆಸ್ಟ್ ಶ್ರೇಯಾಂಕವನ್ನು ಬಿಡುಗಡೆ ಮಾಡಿದ್ದು, ಜೋ ರೂಟ್ ರ್ಯಾಂಕಿಂಗ್ ನಲ್ಲಿ ಏರಿಕೆ ಆಗಿದ್ದು, ಕರ್ನಾಟಕದ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ ಬಡ್ತಿ ಪಡೆದಿದ್ದಾರೆ.
ಕೆಎಲ್ ರಾಹುಲ್
ಕೆಎಲ್ ರಾಹುಲ್
Updated on

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ನೂತನವಾಗಿ ಟೆಸ್ಟ್ ಶ್ರೇಯಾಂಕವನ್ನು ಬಿಡುಗಡೆ ಮಾಡಿದ್ದು, ಜೋ ರೂಟ್ ರ್ಯಾಂಕಿಂಗ್ ನಲ್ಲಿ ಏರಿಕೆ ಆಗಿದ್ದು, ಕರ್ನಾಟಕದ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ ಬಡ್ತಿ ಪಡೆದಿದ್ದಾರೆ.

ಕನ್ನಡಿಗ ರಾಹುಲ್ ಅವರ ಶ್ರೇಯಾಕಂದಲ್ಲಿ ಏರಿಕೆ ಆಗಿದೆ. ಕೆ.ಎಲ್ ಲಾರ್ಡ್ಸ್ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದರು. ಅಲ್ಲದೆ 129 ರನ್ ಬಾರಿಸಿ ಅಬ್ಬರಿಸಿದರು. ಇವರು 19 ಸ್ಥಾನ ಜಿಗಿದರು ಸದ್ಯ 37ನೇ ಸ್ಥಾನದಲ್ಲಿದ್ದಾರೆ. 

ಇವರ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಬಲದಿಂದ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 151 ರನ್ ಗೆಲುವು ದಾಖಲಿಸಿತ್ತು.

ಬೌಲಿಂಗ್ ವಿಭಾಗದಲ್ಲಿ ಟೀಂ ಇಂಡಿಯಾ ಬೌಲರ್ ರವಿಚಂದ್ರನ್ ಅಶ್ವಿನ್ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಜಸ್ಟ್ ಪ್ರೀತ್ ಬುಮ್ರಾ 754 ಅಂಕಗಳೊಂದಿಗೆ 10ನೇ ಸ್ಥಾನದಲ್ಲಿದ್ದಾರೆ. 

ಟೆಸ್ಟ್ ಬ್ಯಾಟಿಂಗ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರಿಷಬ್ ಪಂತ್ ಕ್ರಮವಾಗಿ 5, 6 ಮತ್ತು 7ನೇ ಸ್ಥಾನದಲ್ಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com