ರೋಹಿತ್ ಕ್ಯಾಪ್ಟನ್ ಆಗಿದ್ದು ಟೀಮ್ ಇಂಡಿಯಾಗೆ ಒಳ್ಳೆಯದು; ಇನ್ಮುಂದೆ ಕೊಹ್ಲಿ ಬ್ಯಾಟಿಂಗ್‌ನತ್ತ ಗಮನಹರಿಸಬಹುದು: ರವಿಶಾಸ್ತ್ರಿ

ಟೆಸ್ಟ್ ಮತ್ತು ಸೀಮಿತ ಓವರ್‌ಗಳ ಸ್ವರೂಪದಲ್ಲಿ ವಿಭಿನ್ನ ನಾಯಕರನ್ನು ಹೊಂದಿರುವುದು ಸರಿಯಾದ ನಿರ್ಧಾರ. ಸದ್ಯದ ಕ್ರಿಕೆಟ್ ಪ್ರಪಂಚದಲ್ಲಿ ಒಬ್ಬನೇ ಆಟಗಾರ ಮೂರು ಮಾದರಿಯ ತಂಡದ ನಾಯಕತ್ವವನ್ನು ವಹಿಸುವುದು ಕಷ್ಟ.
ಟೀಮ್ ಇಂಡಿಯಾ ಮಾಜಿ ಕೋಚ್ ರವಿ ಶಾಸ್ತ್ರಿ
ಟೀಮ್ ಇಂಡಿಯಾ ಮಾಜಿ ಕೋಚ್ ರವಿ ಶಾಸ್ತ್ರಿ
Updated on

ಮುಂಬೈ: ನಾಯಕತ್ವ ಬದಲಾವಣೆ ವಿವಾದದ ಸುತ್ತ ಟೀಮ್ ಇಂಡಿಯಾ ಗಿರಕಿ ಹೊಡೆಯುತ್ತಿರುವ ಸಂದರ್ಭದಲ್ಲಿ ಮಾಜಿ ಕೋಚ್ ರವಿಶಾಸ್ತ್ರಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬಗ್ಗೆ ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ನೊಂದಿಗೆ ವಿಶೇಷ ಸಂವಾದದಲ್ಲಿ ಮಾತನಾಡಿರುವ ಅವರು, ‘ಟೆಸ್ಟ್ ಮತ್ತು ಸೀಮಿತ ಓವರ್‌ಗಳ ಸ್ವರೂಪದಲ್ಲಿ ವಿಭಿನ್ನ ನಾಯಕರನ್ನು ಹೊಂದಿರುವುದು ಸರಿಯಾದ ನಿರ್ಧಾರ. ಸದ್ಯದ ಕ್ರಿಕೆಟ್ ಪ್ರಪಂಚದಲ್ಲಿ ಒಬ್ಬನೇ ಆಟಗಾರ ಮೂರು ಮಾದರಿಯ ತಂಡದ ನಾಯಕತ್ವವನ್ನು ವಹಿಸುವುದು ಕಷ್ಟ. ಬಿಸಿಸಿಐ ಕೈಗೊಂಡಿರುವ ನಿರ್ಧಾರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪಾಲಿಗೆ ತುಂಬಾ ಒಳ್ಳೆಯ ನಿರ್ಧಾರ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ಏಕದಿನ ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿದ ಬಳಿಕ ವಿರಾಟ್ ಕೊಹ್ಲಿ ಟೆಸ್ಟ್ ನತ್ತ ಸುಲಭವಾಗಿ ಗಮನ ಕೇಂದ್ರಕರಿಸಲು ಸಾಧ್ಯವಾಗಿದೆ. ಈಗ ಬಯಸಿದಷ್ಟು ಕಾಲ ಕೊಹ್ಲಿ ಟೆಸ್ಟ್‌ ತಂಡದ ಸಾರಥ್ಯವನ್ನು ವಹಿಸಿಕೊಳ್ಳುವ ಅವಕಾಶ ಪಡೆದಿದ್ದಾರೆ. ಅಲ್ಲದೆ, ತಮ್ಮ ಸಾಮರ್ಥ್ಯವನ್ನು ಆಟದ ಮೇಲೆ ಕೇಂದ್ರಿಕರಿಸಲು ಹೆಚ್ಚಿನ ಸಮಯಾವಕಾಶ ದೊರೆಯಲಿದ್ದು, ಇನ್ನೂ ಐದಾರು ವರ್ಷಗಳ ಕಾಲ ವಿರಾಟ್ ಕೊಹ್ಲಿ ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಳ್ಳಬಹುದಾಗಿದೆ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com