ಟೀಂ ಇಂಡಿಯಾ ಆಟಗಾರರು
ಕ್ರಿಕೆಟ್
ಭಾರತ- ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್: ಭಾರತ ಗೆಲುವಿಗೆ ಆರು ವಿಕೆಟ್ ಅಗತ್ಯ
ಇಲ್ಲಿನ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ- ಭಾರತ ನಡುವಣ ಮೊದಲ ಟೆಸ್ಟ್ ಪಂದ್ಯ ಕುತೂಹಲ ಘಟ್ಟಕೆ ಬಂದು ನಿಂತಿದೆ.
ಸೆಂಚುರಿಯನ್ : ಇಲ್ಲಿನ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ- ಭಾರತ ನಡುವಣ ಮೊದಲ ಟೆಸ್ಟ್ ಪಂದ್ಯ ಕುತೂಹಲ ಘಟ್ಟಕೆ ಬಂದು ನಿಂತಿದೆ.
ಭಾರತ ನೀಡಿರುವ 305 ರನ್ ಗಳ ಗೆಲುವಿನ ಗುರಿ ಬೆನ್ನತ್ತಿರುವ ದಕ್ಷಿಣ ಆಫ್ರಿಕಾ, ನಾಲ್ಕನೇ ದಿನದಾಟದ ಅಂತ್ಯಕ್ಕೆ 40.5 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿದ್ದು, ಸಂಕಷ್ಟದಲ್ಲಿದೆ. ಅಂತಿಮ ದಿನದಾಟದಲ್ಲಿ ಆರು ವಿಕೆಟ್ ಬಾಕಿ ಉಳಿದಿರುವಂತೆಯೇ ಗೆಲುವಿಗೆ ಇನ್ನೂ 211 ರನ್ ಗಳು ಬೇಕಾಗಿದ್ದು, ಭಾರತ ಗೆಲುವಿಗೆ ಆರು ವಿಕೆಟ್ ಗಳ ಅಗತ್ಯವಿದೆ.
ದಕ್ಷಿಣ ಆಫ್ರಿಕಾ ಪರ ಅಜೇಯ ಅರ್ಧ ಶತಕ ಗಳಿಸಿರುವ ಡೀನ್ ಎಲ್ಗರ್ 52 ರನ್ ಗಳೊಂದಿಗೆ ಹೋರಾಟ ಮುಂದುವರೆಸಿದ್ದಾರೆ. ಟೀಂ ಇಂಡಿಯಾ ಪರ ವೇಗಿ ಜಸ್ ಪ್ರೀತ್ ಬೂಮ್ರಾ ಎರಡು ಹಾಗೂ ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ