ಡಬ್ಲ್ಯೂಟಿಸಿ ಫೈನಲ್: ಮೂರನೇ ದಿನದಾಟ ಅಂತ್ಯಕ್ಕೆ ಕಿವೀಸ್ 101/2

ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದ ಮೂರನೇ ದಿನದಾಟ ಅಂತ್ಯವಾಗಿದ್ದು ನ್ಯೂಜಿಲೆಂಡ್ 2 ವಿಕೆಟ್ ನಷ್ಟಕ್ಕೆ 101 ರನ್ ಕಲೆ ಹಾಕಿದೆ.
ಡಬ್ಲ್ಯೂಟಿಸಿ ಫೈನಲ್: ಮೂರನೇ ದಿನದಾಟ ಅಂತ್ಯಕ್ಕೆ ಕಿವೀಸ್ 101/2
Updated on

ಸೌಥ್ಯಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದ ಮೂರನೇ ದಿನದಾಟ ಅಂತ್ಯವಾಗಿದ್ದು ನ್ಯೂಜಿಲೆಂಡ್ 2 ವಿಕೆಟ್ ನಷ್ಟಕ್ಕೆ 101 ರನ್ ಕಲೆ ಹಾಕಿದೆ.

ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 217 ರನ್ ಗಳಿಗೆ ಆಲೌಟ್ ಆದ ನಂತರ ಬ್ಯಾಟಿಂಗ್ ಪ್ರಾರಂಭಿಸಿದ ಕಿವೀಸ್ ಪರ ಟಾಮ್ ಲ್ಯಾಥಮ್(30), ಡೆವೊನ್ ಕಾನ್ವೆ (54) ರನ್ ಗಳಿಸಿದ್ದರೆ ನಾಯಕ ಕೇನ್ ವಿಲಿಯಮ್ಸನ್ ಔಟಾಗದೆ 12 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ಟೀಂ ಇಂಡಿಯಾದ ಇಶಾಂತ್ ಶರ್ಮಾ ಹಾಗೂ ರವಿಶಂಕರ್ ಅಶ್ವಿನ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.


ಭಾರತ ಚಹಾ ವಿರಾಮಕ್ಕೆ ಮುನ್ನವೇ ಕೈಲ್ ಜೆಮಿಸನ್ ಅವರ ಆಕ್ರಮಣಕಾರಿ ಬೌಲಿಂಗ್ ದಾಳಿಗೆ ಸಿಕ್ಕಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತ್ತು ರೋಸ್ ಬೌಲ್ ನ ಸೌಥ್ಯಾಂಪ್ಟನ್ ಕ್ರೀಡಾಂಗಣದಲ್ಲಿ ನಿನ್ನೆ ಆರಂಭವಾಗಬೇಕಿದ್ದ ಪಂದ್ಯ ಮಳೆಯಿಂದಾಗಿ ಆರಂಭವಾಗಿರಲಿಲ್ಲ. ಇಂದು ಆರಂಭವಾದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com