ಕೆಎಲ್ ರಾಹುಲ್‌ಗೆ 20 ಕೋಟಿ ರೂ. ಆಫರ್ ಕೊಟ್ಟ ಲಖನೌ: ಐಪಿಎಲ್ ಇತಿಹಾಸದಲ್ಲೇ ಇದು ದುಬಾರಿ ಮೊತ್ತ; ಆಗಾದ್ರೆ RCB ಕಥೆ ಏನು?

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಎರಡು ವರ್ಷಗಳಿಂದ ಪಂಜಾಬ್ ಕಿಂಗ್ಸ್‌ನ ನಾಯಕತ್ವ ವಹಿಸಿರುವ ಕೆಎಲ್ ರಾಹುಲ್ ಮುಂದಿನ ಆವೃತ್ತಿಯಲ್ಲಿ ಲಖನೌ ಫ್ರಾಂಚೈಸಿಗೆ ಸೇರ್ಪಡೆಯಾಗಬಹುದು. 
ಕೆಎಲ್ ರಾಹುಲ್
ಕೆಎಲ್ ರಾಹುಲ್
Updated on

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಎರಡು ವರ್ಷಗಳಿಂದ ಪಂಜಾಬ್ ಕಿಂಗ್ಸ್‌ನ ನಾಯಕತ್ವ ವಹಿಸಿರುವ ಕೆಎಲ್ ರಾಹುಲ್ ಮುಂದಿನ ಆವೃತ್ತಿಯಲ್ಲಿ ಲಖನೌ ಫ್ರಾಂಚೈಸಿಗೆ ಸೇರ್ಪಡೆಯಾಗಬಹುದು. 

ವರದಿಯ ಪ್ರಕಾರ, ಲಖನೌ ಫ್ರಾಂಚೈಸಿಯು ಕೆಎಲ್ ರಾಹುಲ್ ಅವರಿಗೆ 20 ಕೋಟಿ ರೂಪಾಯಿ ಆಫರ್ ಮಾಡಿದ್ದು ಇದರ ಜೊತೆಗೆ ಮುಂದಿನ ನಾಯಕನನ್ನಾಗಿ ಮಾಡಲು ಮಾತುಕತೆಯನ್ನು ಪ್ರಾರಂಭಿಸಿದೆ. ರಾಹುಲ್ ಮತ್ತು ಲಖನೌ ತಂಡದ ನಡುವಿನ ಮಾತುಕತೆ ಯಶಸ್ವಿಯಾದರೆ, ಹೊಸ ಅಹಮದಾಬಾದ್ ಫ್ರಾಂಚೈಸಿ ಬದಲಿಗೆ ನಾಯಕನ ಹುಡುಕಾಟದಲ್ಲಿದೆ.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ರಾಜಿನಾಮೆ ನೀಡಿದ್ದರಿಂದ ಕೆಎಲ್ ರಾಹುಲ್ ಆರ್ ಸಿಬಿ ಸೇರಲಿದ್ದು ತಂಡದ ನಾಯಕತ್ವ ವಹಿಸಿಕೊಳ್ಳಬಹುದು ಎಂದು ಊಹೆಗಳು ಶುರುವಾಗಿದ್ದವು. ಇದೀಗ ಲಖನೌ ಭಾರೀ ಮೊತ್ತದ ಆಫರ್ ನೀಡಿರುವುದು ಕೆಎಲ್ ರಾಹುಲ್ ನಿರ್ಣಯ ಏನೆಂಬುದು ಮುಂದಿನ ದಿನಗಳಲ್ಲಿ ತಿಳಿಯಲಿವೆ.

IPL 2022 ಧಾರಣ ನಿಯಮಗಳು
ಬಿಸಿಸಿಐ ನಿಯಮಗಳ ಪ್ರಕಾರ, ಹಳೆಯ ಎಂಟು ಫ್ರಾಂಚೈಸಿಗಳು ಮೂರಕ್ಕಿಂತ ಹೆಚ್ಚು ಭಾರತೀಯ ಆಟಗಾರರನ್ನು ಉಳಿಸಿಕೊಳ್ಳುವಂತಿಲ್ಲ, ಆದರೆ ಧಾರಣ ಪಟ್ಟಿಯಲ್ಲಿ ವಿದೇಶಿ ಆಟಗಾರರ ಸಂಖ್ಯೆ ಇಬ್ಬರಿಗೆ ಸೀಮಿತವಾಗಿದೆ. ತಂಡವು ಇಬ್ಬರಿಗಿಂತ ಹೆಚ್ಚು ಅನ್‌ಕ್ಯಾಪ್ಡ್ ಆಟಗಾರರನ್ನು ಇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅದು ಸ್ಪಷ್ಟವಾಗಿ ಹೇಳುತ್ತದೆ. 

ಅದೇ ಸಮಯದಲ್ಲಿ, ಲಖನೌ ಮತ್ತು ಅಹಮದಾಬಾದ್‌ನಿಂದ ಎರಡು ಹೊಸ ತಂಡಗಳು ಹರಾಜಿನಿಂದ ಇಬ್ಬರು ಭಾರತೀಯ ಆಟಗಾರರನ್ನು ಆಯ್ಕೆ ಮಾಡಬಹುದು ಆದರೆ ವಿದೇಶಿ ಆಟಗಾರರ ಸಂಖ್ಯೆ ಕೇವಲ ಒಬ್ಬರಾಗಿರಬೇಕು. ಹೆಚ್ಚುವರಿಯಾಗಿ, ಹೊಸ ತಂಡಗಳು ಹರಾಜಿನ ಮೊದಲು ಒಬ್ಬ ಅನ್‌ಕ್ಯಾಪ್ಡ್ ಆಟಗಾರನನ್ನು ಮಾತ್ರ ಆಯ್ಕೆ ಮಾಡಬಹುದು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com