ಐಪಿಎಲ್‌ನಲ್ಲಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಇಂತಿದೆ; ಹಾಗಾದರೆ ಆ ಆಟಗಾರರು ಯಾರು? ಕೊಹ್ಲಿ ಕಥೆಯೇನು?
ಮುಂಬರುವ ಐಪಿಎಲ್ ಹೊಡಿಬಡಿ ಟೂರ್ನಿಗೆ ಬಿಸಿಸಿಐ ಸಜ್ಜಾಗುತ್ತಿದೆ. ಈ ಮಧ್ಯೆ ಇವತ್ತು ಪ್ರಾಂಚೈಸಿಗಳು ಉಳಿಸಿಕೊಳ್ಳಬೇಕಾದ ಆಟಗಾರರ ಪಟ್ಟಿ ನೀಡಲು ಕೊನೆ ದಿನವಾಗಿದೆ. ಮಧ್ಯಾಹ್ನ 12 ಗಂಟೆಗೆ ಈ ಪಟ್ಟಿಯನ್ನು ಬಿಸಿಸಿಐಗೆ ಪ್ರಾಂಚೈಸಿಗಳು ನೀಡಬೇಕಾಗಿದೆ.
Published: 30th November 2021 03:01 PM | Last Updated: 30th November 2021 03:01 PM | A+A A-

ಕೊಹ್ಲಿ
ಮುಂಬೈ: ಮುಂಬರುವ ಐಪಿಎಲ್ ಹೊಡಿಬಡಿ ಟೂರ್ನಿಗೆ ಬಿಸಿಸಿಐ ಸಜ್ಜಾಗುತ್ತಿದೆ. ಈ ಮಧ್ಯೆ ಇವತ್ತು ಪ್ರಾಂಚೈಸಿಗಳು ಉಳಿಸಿಕೊಳ್ಳಬೇಕಾದ ಆಟಗಾರರ ಪಟ್ಟಿ ನೀಡಲು ಕೊನೆ ದಿನವಾಗಿದೆ. ಮಧ್ಯಾಹ್ನ 12 ಗಂಟೆಗೆ ಈ ಪಟ್ಟಿಯನ್ನು ಬಿಸಿಸಿಐಗೆ ಪ್ರಾಂಚೈಸಿಗಳು ನೀಡಬೇಕಾಗಿದೆ.
ಇಎಸ್‌ಪಿಎನ್ ಕ್ರಿಕ್ಇನ್ಫೋ ವರದಿ ಪ್ರಕಾರ, ಮುಂದಿನ ಟೂರ್ನಿಗಾಗಿ 8 ತಂಡಗಳ ಪೈಕಿ 7 ಟೀಮ್ ಗಳು ತಮ್ಮ ಆಟಗಾರರನ್ನು ರಿಟೇನ್ ಮಾಡಿಕೊಂಡಿವೆ. ಆದರೆ, ಪಂಜಾಬ್ ಕಿಂಗ್ಸ್ ತನ್ನ ಯಾವುದೇ ಹಳೆಯ ಆಟಗಾರರನ್ನು ತನ್ನೊಂದಿಗೆ ಇಟ್ಟುಕೊಳ್ಳುತ್ತಿಲ್ಲ ಎಂದು ವರದಿಯಲ್ಲಿ ಹೇಳಿದೆ. ಮುಂಬರುವ ಆಟಗಾರರ ಮೆಗಾ ಹರಾಜಿನಲ್ಲಿ 90 ಕೋಟಿ ರೂಪಾಯಿಯನ್ನು ಪ್ರಾಂಚೈಸಿಗಳು ಖರ್ಚು ಮಾಡಲಿವೆ.
ಕ್ರಿಕ್‌ಇನ್ಫೋ ಸಹ ಐಪಿಎಲ್ ತಂಡಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸ್ಟಾರ್ ಆಟಗಾರರಾದ ಧೋನಿ, ಕೊಹ್ಲಿ ಮತ್ತು ವಿಲಿಯಮ್ಸನ್ ಅವರನ್ನು ತಂಡವು ತನ್ನೊಂದಿಗೆ ಇರಿಸಿಕೊಳ್ಳುವ ನಿರ್ಧಾರಕ್ಕೆ ಬಂದಿವೆ ಎಂದು ತಿಳಿಸಿದೆ.
ಹಾಗಾದ್ರೆ ಇನ್ನುಳಿದ ಆಟಗಾರರು ಯಾರು ಅನ್ನೋದನ್ನು ನೋಡೋದಾದ್ರೆ?
ಚೆನ್ನೈ ಸೂಪರ್ ಕಿಂಗ್ಸ್ - ರವೀಂದ್ರ ಜಡೇಜಾ, ಮಹೇಂದ್ರ ಸಿಂಗ್ ಧೋನಿ, ರಿತುರಾಜ್ ಗಾಯಕ್ವಾಡ್, ಮೊಯಿನ್ ಅಲಿ. ಕೋಲ್ಕತ್ತಾ ನೈಟ್ ರೈಡರ್ಸ್ - ಸುನಿಲ್ ನರೈನ್, ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್. ಸನ್ ರೈಸರ್ಸ್ ಹೈದರಾಬಾದ್ - ಕೇನ್ ವಿಲಿಯಮ್ಸನ್. ಮುಂಬೈ ಇಂಡಿಯನ್ಸ್ - ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ. ರಾಯಲ್ ಚಾಲೆಂಜರ್ಸ್ ಬೆಂಗಳೂರು - ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್. ಡೆಲ್ಲಿ ಕ್ಯಾಪಿಟಲ್ಸ್ - ರಿಷಬ್ ಪಂತ್, ಪೃಥ್ವಿ ಶಾ, ಅಕ್ಸರ್ ಪಟೇಲ್, ಎನ್ರಿಕ್ ನಾರ್ತ್ಯ. ರಾಜಸ್ಥಾನ್ ರಾಯಲ್ಸ್ - ಸಂಜು ಸ್ಯಾಮ್ಸನ್. (ಈ ಬಗ್ಗೆ ಫ್ರಾಂಚೈಸಿಯಿಂದ ಈವರೆಗೆ ಅಧಿಕೃತ ಘೋಷಣೆ ಮಾಡಿಲ್ಲ)
ಐಪಿಎಲ್-2022 ಟೂರ್ನಿಗಾಗಿ ಭರ್ಜರಿ ಸಿದ್ಧತೆ
ಮುಂದಿನ ವರ್ಷದ ಐಪಿಎಲ್‌ಗೆ ಉಳಿಸಿಕೊಳ್ಳುವ ಪ್ರಕ್ರಿಯೆಗೆ ಇವತ್ತು ಅಂತಿಮ ದಿನ. ಇಂದು ಎಲ್ಲಾ ಫ್ರಾಂಚೈಸಿಗಳು ತಮ್ಮ ಆಟಗಾರರ ಪಟ್ಟಿಯನ್ನು ಸಲ್ಲಿಸಲಿವೆ. ಐಪಿಎಲ್ 2022ರ ಮೊದಲು ಮೆಗಾ ಹರಾಜು ಪ್ರಕ್ರಿಯೆ ಆರಂಭಗೊಳ್ಳಲಿದೆ. ಈ ಬಾರಿ ಎರಡು ಹೊಸ ತಂಡಗಳು ಕೂಡ ಐಪಿಎಲ್ ಸೇರ್ಪಡೆಯಾಗಲಿವೆ. ಪ್ರತಿ ತಂಡವು ಒಟ್ಟು 4 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದ್ದು, ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಲು 42 ಕೋಟಿ ರೂಪಾಯಿಯನ್ನು ಪ್ರಾಂಚೈಸಿಗಳು ವೆಚ್ಚ ಮಾಡಲಿವೆ. ಹರಾಜಿನಲ್ಲಿ ತಂಡವೊಂದರ ಮಿತಿ 90 ಕೋಟಿ ರೂಪಾಯಿ ಆಗಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಎಂಟು ತಂಡಗಳು ಇಂದು ರಿಟೇನ್ ಮಾಡಿಕೊಳ್ಳುವ 4 ಆಟಗಾರರ ಹೆಸರನ್ನು ಸಲ್ಲಿಸಬೇಕಾಗಿದೆ. ಅದೇ ಸಮಯದಲ್ಲಿ, ಎರಡು ಹೊಸ ತಂಡಗಳು ಲಕ್ನೋ ಮತ್ತು ಅಹಮದಾಬಾದ್ ಡಿಸೆಂಬರ್ 1 ರಿಂದ 25 ರವರೆಗೆ ತಲಾ ಮೂರು ಆಟಗಾರರನ್ನು ಖರೀದಿಸಬಹುದಾಗಿದೆ.