ಐಸಿಸಿ ಮಹಿಳಾ ಟಿ20 ಶ್ರೇಯಾಂಕ: 2ನೇ ಸ್ಥಾನಕ್ಕೆ ಕುಸಿದ ಭಾರತದ ಶಫಾಲಿ ವರ್ಮಾ, ಸ್ಮೃತಿ ಮಂದಾನಗೆ 3ನೇ ಸ್ಥಾನ

ಐಸಿಸಿ ಮಹಿಳಾ ಟಿ20 ಆಟಗಾರ್ತಿಯರ ಶ್ರೇಯಾಂಕ ಪಟ್ಟಿ ಬಿಡುಗಡೆಯಾಗಿದ್ದು, ಪಟ್ಟಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಸ್ಫೋಟಕ ಆಟಗಾರ್ತಿ ಶಫಾಲಿ ವರ್ಮಾ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಶಫಾಲಿ ವರ್ಮಾ ಮತ್ತು ಸ್ಮೃತಿ ಮಂದಾನ
ಶಫಾಲಿ ವರ್ಮಾ ಮತ್ತು ಸ್ಮೃತಿ ಮಂದಾನ

ದುಬೈ: ಐಸಿಸಿ ಮಹಿಳಾ ಟಿ20 ಆಟಗಾರ್ತಿಯರ ಶ್ರೇಯಾಂಕ ಪಟ್ಟಿ ಬಿಡುಗಡೆಯಾಗಿದ್ದು, ಪಟ್ಟಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಸ್ಫೋಟಕ ಆಟಗಾರ್ತಿ ಶಫಾಲಿ ವರ್ಮಾ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಇತ್ತೀಚಿನ ಪಂದ್ಯಗಳಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಆಸ್ಟ್ರೇಲಿಯಾ ತಂಡ ಬೆತ್ ಮೂನಿ ಅವರು ಮೊದಲ ಸ್ಥಾನಕ್ಕೇರಿದ್ದಾರೆ. ಬೆತ್ ಮೂನಿ ಒಟ್ಟು 754 ಅಂಕಗಳನ್ನು ಹೊಂದಿದ್ದಾರೆ. ಭಾರತದ ಶಫಾಲಿ ವರ್ಮಾ 726 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದ್ದು, 709 ಅಂಕಗಳನ್ನು ಹೊಂದಿರುವ ಸ್ಮೃತಿ ಮಂದಾನ 3ನೇ ಸ್ಥಾನದಲ್ಲಿದ್ದಾರೆ.

ಅಗ್ರ 10 ಆಟಗಾರ್ತಿಯರ ಪಟ್ಟಿಯಲ್ಲಿ ಆಸಿಸ್ ಪಡೆ ಪ್ರಾಬಲ್ಯವಿದ್ದು, ಮೊದಲ ಸ್ಥಾನದಲ್ಲಿ ಬೆತ್ ಮೂನಿ ಇದ್ದರೆ, ಆಸಿಸ್ ನಾಯಕಿ ಮೆಗ್ ಲ್ಯಾನಿಂಗ್ ಮತ್ತು ಅಲಿಸ್ಸಾ ಹೀಲಿ ಜಂಟಿ 6ನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ಸೂಫಿ ಡಿವೈನ್ ಮತ್ತು ಸೂಜಿ ಬೇಟ್ಸ್ ಅವರು 5 ಮತ್ತು 7ನೇ ಸ್ಥಾನದಲ್ಲಿದ್ದಾರೆ.

ಬೆತ್ ಮೂನಿಗೆ ನೆರವಾದ ಸಹ ಆಟಗಾರ್ತಿಯ ಗಾಯದ ಸಮಸ್ಯೆ
ಹೌದು.. ಭಾರತದ ವಿರುದ್ಧದ ಟಿ20 ಸರಣಿಗೆ ಬೆತ್ ಮೂನಿ ಅವರು ಆಯ್ಕೆಯಾಗಿರಲಿಲ್ಲ. ಆದರೆ ಸಹ ಆಟಗಾರ್ತಿ ರಾಚೆಲ್ ಹೇನ್ಸ್ ಗಾಯಗೊಂಡು ಟೂರ್ನಿಯಿಂದ ಹೊರಗುಳಿದರು. ಹೀಗಾದಿ ಬಾಕಿ 2 ಪಂದ್ಯಗಳಿಗಾಗಿ ಬೆತ್ ಮೂನಿ ಅವರನ್ನು ಪರ್ಯಾಯ ಆಯ್ಕೆ ಮಾಡಲಾಗಿತ್ತು. ತಾವಾಡಿದ 2 ಪಂದ್ಯಗಳಲ್ಲಿ ಮೂನಿ ತಲಾ 34 ಮತ್ತು 61 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. ಅವರ ಈ ಪ್ರದರ್ಶನದಿಂದಾಗಿಯೇ ಅವರು ಇಂದು ಅಗ್ರ ಸ್ಥಾನಕ್ಕೇರಿದ್ದಾರೆ. 

ಅದೇ ಮತ್ತೋರ್ವ ಆಸಿಸ್ ಆಟಗಾರ್ತಿ ಸೂಫಿ ಮಾಲಿನ್ಯೂಕ್ಸ್ ಅವರಿಗೂ ಟಿ20 ಟೂರ್ನಿಯಿಂದ ಅದೃಷ್ಟ ಖುಲಾಯಿಸಿದ್ದು,. ಈ ಟೂರ್ನಿಯಲ್ಲಿ ತೋರಿದ ಅದ್ಬುತ ಪ್ರದರರ್ಶನದಿಂದಾಗಿ ಮಾಲಿನ್ಯೂಕ್ಸ್  ಶ್ರೇಯಾಂಕ ಪಟ್ಟಿಯಲ್ಲಿ ಬರೊಬ್ಬರಿ 12 ಸ್ಥಾನ ಮೇಲಕ್ಕೇರಿ 9ನೇ ಸ್ಥಾನಕ್ಕೆ ಜಿಗಿದಿದ್ದಾರೆ. 

ಉಳಿದಂತೆ ಭಾರತದ ರಾಜೇಶ್ವರಿ ಗಾಯಕ್ವಾಡ್ 12ನೇ ಸ್ಥಾನಕ್ಕೇರಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com