ಹಿಂದೂಗಳ ನಡುವೆ ನಮಾಜ್: ತೀವ್ರ ಆಕ್ರೋಶದ ಬಳಿಕ ಕ್ಷಮೆಯಾಚಿಸಿದ ಪಾಕ್ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಭಾರತ ಪಾಕಿಸ್ತಾನ ಪಂದ್ಯದ ಕುರಿತ ನಮಾಜ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಪಾಕಿಸ್ತಾನ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್ ಕ್ಷಮೆ ಯಾಚಿಸಿದ್ದಾರೆ.
ಪಾಕ್ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್
ಪಾಕ್ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್

ನವದೆಹಲಿ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಭಾರತ ಪಾಕಿಸ್ತಾನ ಪಂದ್ಯದ ಕುರಿತ ನಮಾಜ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಪಾಕಿಸ್ತಾನ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್ ಕ್ಷಮೆ ಯಾಚಿಸಿದ್ದಾರೆ.

ಈ ಹಿಂದೆ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದ ಬಳಿಕ ಟಿವಿವಾಹಿನಿಯೊಂದಿಗೆ ಮಾತನಾಡಿದ್ದ ವಕಾರ್ ಯೂನಿಸ್, 'ಹಿಂದೂಗಳ ನಡುವೆ ನಮಾಜ್ ಮಾಡಿದ್ದು ನನಗೆ ತುಂಬಾ ವಿಶೇಷವಾಗಿತ್ತು ಎಂದು ಹೇಳಿಕೆ ನೀಡಿದ್ದರು. 'ಬಾಬರ್ ಮತ್ತು ರಿಜ್ವಾನ್ ಬ್ಯಾಟಿಂಗ್ ಮಾಡಿದ ರೀತಿ, ಸ್ಟ್ರೈಕ್-ರೊಟೇಶನ್, ಅವರ ಮುಖದ ನೋಟ ಅದ್ಭುತವಾಗಿತ್ತು..ಮಾಶಲ್ಲಾ, ರಿಜ್ವಾನ್ ಹಿಂದೂಗಳಿಂದ ಸುತ್ತುವರಿದ ಮೈದಾನದಲ್ಲಿ ನಮಾಜ್ ಮಾಡಿದನು, ಅದು ನಿಜವಾಗಿಯೂ ನನಗೆ ತುಂಬಾ ವಿಶೇಷವಾಗಿತ್ತು' ಎಂದು ಹೇಳಿದ್ದರು.

ಈ ಹೇಳಿಕೆ ಕ್ರಿಕೆಟಿಗರಿಂದಲೇ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಕ್ರಿಕೆಟ್ ನಿರೂಪಕರಾದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್, ಆಕಾಶ್ ಚೋಪ್ರಾ, ಹರ್ಷಬೋಗ್ಲೆ ವಕಾರ್ ಯೂನಿಸ್ ವಿರುದ್ಧ ಕಡಿಕಾರಿದ್ದರು.  ಟ್ವೀಟ್ ಮೂಲಕ ತಿರುಗೇಟು ನೀಡಿದ್ದ ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ,'ಇದನ್ನು ಕ್ರೀಡೆಯಲ್ಲಿ ಹೇಳಲು ಜಿಹಾದಿ ಮನಸ್ಥಿತಿಯ ಮತ್ತೊಂದು ಹಂತ ತೋರುತ್ತಿದೆ. ಎಂತಹ ನಾಚಿಕೆಗೇಡಿನ ಮನುಷ್ಯ' ಎಂದು ಕಿಡಿ ಕಾರಿದ್ದರು. ಅಂತೆಯೇ ಹರ್ಷಾ ಬೋಗ್ಲೆ ಕೂಡ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, 'ವಕಾರ್ ಯೂನಿಸ್ ಹೇಳಿದ್ದು, ನಾನು ಕೇಳಿದ ಅತ್ಯಂತ ನಿರಾಶಾದಾಯಕ ಸಂಗತಿಗಳಲ್ಲಿ ಒಂದಾಗಿದೆ. ನಮ್ಮಲ್ಲಿ ಬಹಳಷ್ಟು ಜನರು ಇಂತಹ ವಿಷಯಗಳನ್ನು ಕಡಿಮೆ ಮಾಡಲು ಮತ್ತು ಕ್ರೀಡೆಯ ಬಗ್ಗೆ ಮಾತನಾಡಲು ಕಷ್ಟಪಡುತ್ತಾರೆ ಮತ್ತು ಇದನ್ನು ಕೇಳುವುದು ಭಯಾನಕವಾಗಿದೆ. ವಕಾರ್ ಯೂನಿಸ್ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸುತ್ತಾರೆ ಎಂಬ ಭರವಸೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್ ಬುಧವಾರ ತನ್ನ ವಿವಾದಕ್ಕೆ ಗುರಿಯಾಗಿದ್ದ ಹೇಳಿಕೆಗಾಗಿ ಕ್ಷಮೆಯಾಚಿಸಿದ್ದಾರೆ. ಕ್ರಿಕೆಟ್ ಅಭಿಮಾನಿಗಳಿಂದ ವ್ಯಾಪಕ ಟೀಕೆ ಎದುರಿಸಿದ ನಂತರ, ವಕಾರ್, ಬುಧವಾರ ತನ್ನ ಅವಹೇಳನಕಾರಿ ಹೇಳಿಕೆಗಾಗಿ ಕ್ಷಮೆಯಾಚಿಸಿದ್ದಾರೆ. ನನ್ನ ಹೇಳಿಕೆಯಿಂದ ಒಂದು ಭಾಗದ ಜನರಿಗೆ ನೋವಾಗಿದೆ.. ಆದರೆ ಅದು ಉದ್ದೇಶಪೂರ್ವಕವಾಗಿ ಹೇಳಿದ್ದಲ್ಲ. ಗೆಲುವಿನ ಉತ್ಸಾಹದಲ್ಲಿದ್ದಾಗ ಬಂದಂತಹ ಹೇಳಿಕೆಯಾಗಿದೆ. ನನ್ನ ಹೇಳಿಕೆ ಕುರಿತು ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದರು.

ಪಾಕಿಸ್ತಾನ ಗೆಲುವು ಸಂಭ್ರಮಿಸುತ್ತಾ ಪಾಕಿಸ್ತಾನ ಮಾಧ್ಯಮ ಚರ್ಚಾ ಕಾರ್ಯಕ್ರಮ ನಡೆಸಿತ್ತು. ಈ ಚರ್ಚೆಯಲ್ಲಿ ವಕಾರ್ ಯೂನಿಸ್, ಮಾಜಿ ವೇಗಿ ಶೋಯಬ್ ಅಕ್ತರ್ ಕೂಡ ಪಾಲ್ಗೊಂಡಿದ್ದರು. ಚರ್ಚೆಯ ನಡುವೆ ರಿಜ್ವಾನ್ ಬ್ಯಾಟಿಂಗ್‌ಗಿಂತ ಹೆಚ್ಚು ತೃಪ್ತಿ ನೀಡಿರುವ ವಿಚಾರ ಎಂದರೆ, ಹಿಂದೂಗಳ ನಡುವೆ ರಿಜ್ವಾನ್ ನಮಾಜ್ ಮಾಡಿರುವುದು. ಇದು ಅತ್ಯಂತ ಖುಷಿ ಹಾಗೂ ತೃಪ್ತಿ ನೀಡುವ ವಿಚಾರ ಎಂದು ವಕಾರ್ ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com