ಪುರುಷರ ಕ್ರಿಕೆಟ್ ತಂಡಕ್ಕೆ ನಿಷೇಧ ಹೇರಬೇಡಿ: ಅಫ್ಘಾನಿಸ್ತಾನ ಮಹಿಳಾ ಕ್ರಿಕೆಟ್ ಮಂಡಳಿ ಮಾಜಿ ಅಧ್ಯಕ್ಷೆ ಮನವಿ

ದೇಶ ತಾಲಿಬಾನ್ ತೆಕ್ಕೆಗೆ ಜಾರುತ್ತಿದ್ದಂತೆಯೇ ಕ್ರಿಕೆಟ್ ಮಂಡಳಿ ಮಾಜಿ ಅಧ್ಯಕ್ಷೆ ತುಬಾ ಸಂಗರ್ ಅವರು ದೇಶ ತೊರೆದು ಕೆನಡಾಗೆ ಹಾರಿದ್ದರು. ಅಲ್ಲಿಂದಲೇ ಅವರು ಪತ್ರಿಕಾಗೋಷ್ಟಿಯಲ್ಲಿ ಆಫ್ಘನ್ ಪುರುಷರ ಕ್ರಿಕೆಟ್ ತಂಡವನ್ನು ಬೆಂಬಲಿಸಿದ್ದಾರೆ.  
ಅಫ್ಘಾನಿಸ್ತಾನ ಕ್ರಿಕೆಟ್ ತಂಡ
ಅಫ್ಘಾನಿಸ್ತಾನ ಕ್ರಿಕೆಟ್ ತಂಡ

ಕಾಬೂಲ್: ಅಂತಾರಾಷ್ಟ್ರೀಯ ಕ್ರಿಕೆಟಿಗರು ಅಫ್ಘಾನಿಸ್ತಾನ ಕ್ರಿಕೆಟ್ ತಂಡವನ್ನು ಪ್ರೋತ್ಸಾಹಿಸಬೇಕು ಎಂದು ಅಫ್ಘಾನಿಸ್ತಾನ ಮಹಿಳಾ ಕ್ರಿಕೆಟ್ ಮಂಡಳಿ ಮಾಜಿ ತುಬಾ ಸಂಗರ್ ಹೇಳಿದ್ದಾರೆ. ದೇಶದ ಮಹಿಳಾ ಕ್ರಿಕೆಟ್ ತಂಡಕ್ಕೆ ತಾಲಿಬಾನ್ ನಿಷೇಧ ಹೇರಿರುವುದರಿಂದ ಆಸ್ಟ್ರೇಲಿಯ ಆಫ್ಘನ್ ಕ್ರಿಕೆಟಿಗರ ಜೊತೆಗಿನ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಿತ್ತು.

ತಾಲಿಬಾನ್ ಮಹಿಳಾ ವಿರೋಧಿ ನೀತಿಗಳ ವಿರುದ್ಧ ಕ್ರಿಕೆಟ್ ಆಡುವ ಹಲವು ದೇಶಗಳು ಪ್ರತಿಭಟನಾರ್ಥ ಅಫ್ಘಾನಿಸ್ತಾನ ಪುರುಷರ ಕ್ರಿಕೆಟ್ ತಂಡಕ್ಕೆ ನಿಷೇಧ ಹೇರುವ ಕುರಿತು ಚಿಂತನೆ ನಡೆಸಿರುವ ಹಿನ್ನೆಲೆಯಲ್ಲಿ ತುಬಾ ಸಂಗರ್ ತಮ್ಮ ಅಭಿಪ್ರಾಯ ಹೇಳಿದ್ದಾರೆ.

ದೇಶ ತಾಲಿಬಾನ್ ತೆಕ್ಕೆಗೆ ಜಾರುತ್ತಿದ್ದಂತೆಯೇ ತುಬಾ ಸಂಗರ್ ಅವರು ದೇಶ ತೊರೆದು ಕೆನಡಾಗೆ ಹಾರಿದ್ದರು. ಅಲ್ಲಿಂದಲೇ ಅವರು ಪತ್ರಿಕಾಗೋಷ್ಟಿಯಲ್ಲಿ ಆಫ್ಘನ್ ಪುರುಷರ ಕ್ರಿಕೆಟ್ ತಂಡವನ್ನು ಬೆಂಬಲಿಸಿದ್ದಾರೆ.  

ಪುರುಷರ ಕ್ರಿಕೆಟ್ ತಂಡವನ್ನು ನಿಷೇಧಿಸುವುದರಿಂದ ದೇಶದ ಅಸಂಖ್ಯ ಕ್ರೀಡಾಭಿಮಾನಿಗಳ ಕ್ರೀಡಾಸ್ಫೂರ್ತಿಯನ್ನು ಕೊಂದಂತೆ ಆಗುತ್ತದೆ ಎನ್ನುವುದು ಅವರ ಅಭಿಪ್ರಾಯ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com