ಐಪಿಎಲ್ 2021: ಮುಂಬೈ ಇಂಡಿಯನ್ಸ್ ಗೆ ಹ್ಯಾಟ್-ಟ್ರಿಕ್ ಗುರಿ; ಕೊಹ್ಲಿಗೆ 'ಈ ಸಲ ಕಪ್ ನಮ್ದೆ' ನಿಜವಾಗುತ್ತಾ?

ಐಪಿಎಲ್-2021 ಹಲವಾರು ಕಾರಣಗಳಿಗೆ ಹಿಂದೆಂದಿಗಿಂತಲೂ ಈ ಬಾರಿ ವಿಶಿಷ್ಟವಾಗಿದೆ. 

Published: 08th April 2021 03:03 PM  |   Last Updated: 08th April 2021 03:07 PM   |  A+A-


IPL-2021

ಐಪಿಎಲ್-2021

Posted By : Srinivas Rao BV
Source : The New Indian Express

ಚೆನ್ನೈ: ಐಪಿಎಲ್-2021 ಹಲವಾರು ಕಾರಣಗಳಿಗೆ ಹಿಂದೆಂದಿಗಿಂತಲೂ ಈ ಬಾರಿ ವಿಶಿಷ್ಟವಾಗಿದೆ. 

ಕೋವಿಡ್-19 ಹೆಚ್ಚುತ್ತಿರುವ ಸಂದರ್ಭದಲ್ಲಿ ಐಪಿಎಲ್-2021 ನಡೆಯುತ್ತಿರುವುದು, ಎರಡನೇ ಅಲೆಯಿಂದ ಹೈರಾಣಾಗಿ ಪ್ರತಿ ದಿನ ಕೊರೋನಾದ್ದೇ ಸುದ್ದಿ ಕೇಳಿ ಬೇಸತ್ತ ಜನತೆಗೆ 7 ವಾರಗಳ ಕಾಲ ಹೊಸ ಮನರಂಜನೆಯ ಆಯ್ಕೆ ಸಿಗಲಿದೆ. ಮತ್ತೊಂದು ವಿಶ್ವಕಪ್ ಟಿ-20 ವಿಶ್ವಕಪ್ ನಡೆಯುತ್ತಿರುವ ವರ್ಷದಲ್ಲೇ ಹೊಸ ಪ್ರತಿಭೆಗಳನ್ನು ಪರಿಚಯಿಸುವ ಐಪಿಎಲ್-2021 ನಡೆಯುತ್ತಿರುವುದೂ ಮತ್ತಷ್ಟು ಕುತೂಹಲ ಮೂಡಿಸಿದೆ. 

ಏ.09 ರಿಂದ ಚೆನ್ನೈ ನಲ್ಲಿ ಐಪಿಎಲ್-2021 ಪಂದ್ಯಗಳಿಗೆ ಚಾಲನೆ ದೊರೆಯಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್, ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ನಡುವೆ ಮೊದಲ ಪಂದ್ಯ ನಡೆಯಲಿದ್ದು ಕ್ರಿಕೆಟ್ ಪ್ರೇಮಿಗಳಿಗೆ ಅತ್ಯುತ್ತಮ ಮನರಂಜನೆ ದೊರೆಯಲಿದೆ. 

ಆಟಗಾರರು ಹಾಗೂ ಸಿಬ್ಬಂದಿಗಳಿಗೆ ಕೋವಿಡ್-19 ಸೋಂಕು ತಗುಲಿ ಪ್ರಾರಂಭಿಕ ಹಂತದಲ್ಲೇ ಲೀಗ್ ಮೇಲೆ ಕೋವಿಡ್-19 ವೈರಾಣುವಿನ ಕರಿಛಾಯೆ ಆವರಿಸಿತ್ತು. ಆದರೆ ಪಂದ್ಯಗಳಿಗೆ ಕಠಿಣ ಬಯೋ-ಬಬಲ್ ಇರುವ ಕಾರಣದಿಂದಾಗಿ ಪಂದ್ಯಗಳು ಸುಗಮವಾಗಿ ನಡೆಯಲಿದೆ ಎಂದು ಬಿಸಿಸಿಐ ನಿರೀಕ್ಷೆ ಹೊಂದಿದೆ. 

ರೋಹಿತ್ ಶರ್ಮಾ ಐಪಿಎಲ್ ಜಗತ್ತಿನ ಅತ್ಯಂತ ಯಶಸ್ವಿ ನಾಯಕನಾಗಿದ್ದು, ಅಭೂತಪೂರ್ವ ಐದು ಐಪಿಎಲ್ ಟೈಟಲ್ ಗಳನ್ನು ತಮ್ಮ ನೇತೃತ್ವದಲ್ಲಿ ತಂಡಕ್ಕೆ ಗೆಲ್ಲಿಸಿಕೊಟ್ಟಿದ್ದಾರೆ. ಈ ಐಪಿಎಲ್ ನ್ನೂ ಗೆದ್ದರೆ 6 ನೇ ಟ್ರೋಫಿ ಮೂಲಕ ಮೊದಲ ಹ್ಯಾಟ್ರಿಕ್ ಸಾಧನೆ ಮಾಡಿದ ನಾಯಕ ಎಂಬ ಖ್ಯಾತಿಗೂ ರೋಹಿತ್ ಭಾಜನರಾಗಲಿದ್ದಾರೆ. ಒಂದು ವೇಳೆ ರೋಹಿತ್ ಶರ್ಮಾ ಸರಣಿ ಗೆಲ್ಲಿಸುವಲ್ಲಿ ವಿಫಲರಾದರೂ ಅವರ ಬದಲಿಗೆ ಕ್ವಿಂಟನ್ ಡಿ ಕಾಕ್, ಇಶಾನ್ ಕಿಶನ್, ಸೂರ್ಯ ಕುಮಾರ್ ಯಾದವ್ ಅವರಂತಹ ಸಮರ್ಥ ಆಟಗಾರರು ಎದುರಾಳಿಗಳಿಗೆ ಪ್ರಬಲ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿರುವುದು ಮುಂಬೈ ಇಂಡಿಯನ್ಸ್ ನ ಪ್ಲಸ್  ಪಾಯಿಂಟ್ ಆಗಿದೆ. 

ರೋಹಿತ್ ಶರ್ಮಾ ಎದುರಾಳಿ ತಂಡದ ನಾಯಕ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ. ಆರ್ ಸಿಬಿ ಪ್ರತಿ ಬಾರಿಯೂ ಈ ಸಲ ಕಪ್ ನಮ್ದೆ ಎಂಬ ಕನಸು ಈ ಬಾರಿಯಾದರೂ ನನಸಾಗುತ್ತಾ ನೋಡಬೇಕಿದೆ. ಆದರೆ ಕೊಹ್ಲಿ ನೇತೃತ್ವದ ಆರ್ ಸಿಬಿ ತಂಡವನ್ನು ಗಮನಿಸಿದರೆ, ಹೆಚ್ಚು ವಿಶ್ವಾಸ ಕಷ್ಟಸಾಧ್ಯ ಎಂದು ವಿಶ್ಲೇಷಿಸಲಾಗುತ್ತಿದೆ. 

ಗ್ಲೆನ್ ಮ್ಯಾಕ್ಸ್ ವೆಲ್ ನ್ನು ಪುನಃ ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದು, ಭಾರತದಲ್ಲಿ ಪರೀಕ್ಷೆಗೊಳಪಡದ ನ್ಯೂಜಿಲ್ಯಾಂಡ್ ನ ಕೈಲ್ ಜಾಮಿಸನ್ ನ್ನು ತಂಡಕ್ಕೆ ತೆಗೆದುಕೊಳ್ಳಲಾಗಿದೆ. 

ಈ ನಡುವೆ ಧೋನಿ ಎಂದಿನಂತೆ ಸದ್ದಿಲ್ಲದೇ ತಮ್ಮ ಕಾರ್ಯತಂತ್ರ ಹೆಣೆಯುತ್ತಿದ್ದು, ಸುರೇಶ್ ರೈನಾ ತಂಡಕ್ಕೆ ಮರಳಿರುವುದು, ಮೊಯೀನ್ ಅಲಿ, ಸ್ಯಾಮ್ ಕರನ್ ಸೇರಿದಂತೆ ಬಲಿಷ್ಠ ಆಲ್ ರೌಂಡರ್ ಗಳಿರುವುದರಿಂದ ಸಿಎಸ್ ಕೆ ತಂಡಕ್ಕೆ ಹಲವು ಲಾಭಗಳಿವೆ, ಇನ್ನು ಕೃಷ್ಣಪ್ಪ ಗೌತಮ್ ಅವರೆಡೆಗಿನ ಧೋನಿ ವಿಶ್ವಾಸವಂತೂ ಕುತೂಹಲ ಮೂಡಿಸಿದೆ. 

ಇನ್ನು ಧೋನಿ ಅವರ ಅಭಿಮಾನಿ ರಿಷಭ್ ಪಂತ್ ಡೆಲ್ಲಿ ತಂಡದ ನೃತೃತ್ವ ವಹಿಸಿದ್ದು, ಧೋನಿ ಅವರಿಂದಲೇ ಸ್ಪೂರ್ತಿ ಪಡೆದಿದ್ದಾರೆ. ಗಬ್ಬಾದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ರಿಷಭ್ ಪಂತ್ ಭರವಸೆ ಮೂಡಿಸಿದ್ದು, ಪೃಥ್ವಿ ಶಾ, ಮಾರ್ಕಸ್ ಸ್ಟೋಯಿನಿಸ್, ಶಿಮ್ರಾನ್ ಹೆಟ್ಮಿಯರ್ ರಂತಹ ಆಟಗಾರರ ಬ್ಯಾಟಿಂಗ್ ಲೈನ್ ನ್ನು ಹೊಂದಿದ್ದಾರೆ.

ಅತ್ಯಂತ ಕಳಪೆ ಪ್ರದರ್ಶನ ಹೊಂದಿರುವ ಸನ್ ರೈಸರ್ಸ್ ಗೆ ಈ ಬಾರಿ ಡೇವಿಡ್ ವಾರ್ನರ್, ರಶೀದ್ ಖಾನ್ ರಂತಹ ಅತ್ಯುತ್ತಮ ಆಟಗಾರರು ದೊರೆತಿದ್ದು, ಈ ಬಾರಿಯ ಪ್ರದರ್ಶನದತ್ತ ಎಲ್ಲರ ಗಮನ ಇದೆ. 

ಈ ಬಾರಿ ಕೋಲ್ಕತ್ತ ನೈಟ್ ರೈಡಾರ್ಸ್ ಆಂಡ್ರೆ ರಸ್ಸೆಲ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ನ್ನು ನಿರೀಕ್ಷಿಸುತ್ತಿದ್ದು, ವರುಣ್ ಚಕ್ರವರ್ತಿ ಅವರ ಬಗ್ಗೆಯೂ ಹೆಚ್ಚಿನ ನಿರೀಕ್ಷೆಗಳಿವೆ.
 
ಪಂಜಾಬ್ ತಂಡಕ್ಕೆ ನಾಯಕ ಕೆಎಲ್ ರಾಹುಲ್ ಅವರ ಪ್ರದರ್ಶನ, ಕ್ಷಮತೆ ನಿರ್ಣಾಯಕವಾಗಿರಲಿದ್ದು, ಹೆಸರು ಬದಲಾವಣೆ ಅದೃಷ್ಟ ತರಬಲ್ಲದು ಎಂಬ ನಿರೀಕ್ಷೆಯಲ್ಲಿದ್ದಾರೆ ಪ್ರಾಂಚೈಸಿಯ ಮಾಲಿಕರು. ರಾಜಸ್ಥಾನ ರಾಯಲ್ಸ್ ತಂಡಕ್ಕೆ ಜೋಫ್ರಾ ಆರ್ಚರ್ ಅವರ ಅನುಪಸ್ಥಿತಿ ಪ್ರಾರಂಭದಲ್ಲಿ ಸ್ವಲ್ಪ ಕಾಡಬಹುದಾದರೂ ಬೆನ್ ಸ್ಟೋಸ್, ಜೋಸ್ ಬಟ್ಲರ್ ಮತ್ತು ಕ್ರಿಸ್ ಮೋರಿಸ್ ರಂತಹ ವಿಶ್ವಾಸಾರ್ಹ ಆಟಗಾರರು ನಾಯಕ ಸಂಜು ಸ್ಯಾಮ್ಸನ್ ಗೆ ಸಾಥ್ ನೀಡಲಿದ್ದಾರೆ. 

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp