ನ್ಯೂಜಿಲೆಂಡ್ ವಿರುದ್ಧ 2ನೇ ಟೆಸ್ಟ್: 2ನೇ ದಿನದಾಟ ಅಂತ್ಯಕ್ಕೆ ಭಾರತ 69/0, 2ನೇ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾಗೆ 332 ರನ್ ಮುನ್ನಡೆ

ವಾಂಖೆಡೆ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಅಂತ್ಯವಾಗಿದ್ದು, 2ನೇ ಇನ್ನಿಂಗ್ಸ್ ನಲ್ಲಿ ಭಾರತ ವಿಕೆಟ್ ನಷ್ಟವಿಲ್ಲದೇ 69ರನ್ ಗಳಿಸಿದೆ. ಅಂತೆಯೇ ನ್ಯೂಜಿಲೆಂಡ್ ವಿರುದ್ಧ 332 ರನ್ ಗಳ ಮುನ್ನಡೆ ಕಾಯ್ದುಕೊಂಡಿದೆ.
ಪೂಜಾರ ಮತ್ತು ಮಯಾಂಕ್ ಅಗರ್ವಾಲ್
ಪೂಜಾರ ಮತ್ತು ಮಯಾಂಕ್ ಅಗರ್ವಾಲ್

ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಅಂತ್ಯವಾಗಿದ್ದು, 2ನೇ ಇನ್ನಿಂಗ್ಸ್ ನಲ್ಲಿ ಭಾರತ ವಿಕೆಟ್ ನಷ್ಟವಿಲ್ಲದೇ 69ರನ್ ಗಳಿಸಿದೆ. ಅಂತೆಯೇ ನ್ಯೂಜಿಲೆಂಡ್ ವಿರುದ್ಧ 332 ರನ್ ಗಳ ಮುನ್ನಡೆ ಕಾಯ್ದುಕೊಂಡಿದೆ.

ಟೀಂ ಇಂಡಿಯಾ ಬೌಲರ್ ಗಳ ಅರ್ಭಟದ ಮುಂದೆ ಮಂಕಾದ ನ್ಯೂಜಿಲೆಂಡ್ ತಂಡ ಇಂದು ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 62 ರನ್ ಗಳಿಗೆ ಆಲೌಟ್ ಆಗಿದ್ದು, ಆ ಮೂಲಕ 263 ರನ್ ಗಳ ಹಿನ್ನಡೆ ಅನುಭವಿಸಿತು. ಭಾರತ ನೀಡಿದ 325ರನ್ ಗಳ ಮೊದಲ ಇನ್ನಿಂಗ್ಸ್ ಗುರಿಗೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಆರಂಭದಿಂದಲೂ ಭಾರತೀಯ ಬೌಲರ್ ಗಳ ಎದುರು ತಿಣುಕಾಡಿತು. 

ಆರಂಭಿಕರಾದ ಟಾಮ್ ಲಾಥಮ್ 10 ರನ್ ಗಳಿಸಿ ಔಟಾದರೆ, ವಿಲ್ ಯಂಗ್ ಕೇವಲ 4 ರನ್ ಗಳಿಸಿ ಔಟ್ ಆದರು. ಬಳಿಕ ನಡೆದದ್ದು ಅಕ್ಷರಶಃ ನ್ಯೂಜಿಲೆಂಡ್ ಆಟಗಾರರ ಪೆವಿಲಿಯನ್ ಪರೇಡ್.. ಆಗ್ರ ಆರು ಆಟಗಾರರು ಒಂದಂಕಿ ಮೊತ್ತವನ್ನೂ ಮುಟ್ಟಲು ತಿಣುಕಾಡಿ ಔಟಾದರು. ಕೆಳ ಕ್ರಮಾಂಕದ ಕೈಲ್ ಜೇಮೀಸನ್ 17ರನ್ ಗಳಿಸಿದ್ದೇ ಇಡೀ ತಂಡದಲ್ಲಿ ಬ್ಯಾಟರ್ ಓರ್ವ ಗಳಿಸಿದ ವೈಯುಕ್ತಿಕ ಗರಿಷ್ಠ ರನ್ ಗಳಿಕೆಯಾಗಿದೆ.

ಒಟ್ಟಾರೆ ಭಾರತದ ವಿರುದ್ಧ ಕೇವಲ 62 ರನ್ ಗಳಿಗೆ ಆಲೌಟ್ ಆಗುವ ಮೂಲಕ ಕಿವೀಸ್ ಪಡೆ 263 ರನ್ ಗಳ ಹಿನ್ನಡೆ ಅನುಭವಿಸಿತು. ಇನ್ನು ಭಾರತದ ಪರ ಆರ್ ಅಶ್ವಿನ್ 4 ವಿಕೆಟ್ ಪಡೆದರೆ, ಮಹಮದ್ ಸಿರಾಜ್ 3 ಮತ್ತು ಅಕ್ಸರ್ ಪಟೇಲ್ 2 ವಿಕೆಟ್ ಪಡೆದರು.

ಭಾರತ ಭರ್ಜರಿ ಆರಂಭ
ಇನ್ನು 263 ರನ್ ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾಗೆ ಆರಂಭಿಕರಾದ ಮಯಾಂಕ್ ಅಗರ್ವಾಲ್ ಮತ್ತು ಚೇತೇಶ್ವರ ಪೂಜಾರ ಭರ್ಜರಿ ಆರಂಭ ನೀಡಿದ್ದಾರೆ. ದಿನದಾಟದ ಅಂತ್ಯದವೆರೆಗೂ ಈ ಜೋಡಿ ಯಾವುದೇ ಆಘಾತವಾಗದಂತೆ ನೋಡಿಕೊಂಡಿದ್ದು, ಅರ್ಧಶತಕದ ಜೊತೆಯಾಟವಾಡಿದ್ದಾರೆ. ಮಯಾಂಕ್ 38 ರನ್ ಗಳಿಸಿದರೆ, ಪೂಜಾರಾ 29ರನ್ ಗಳಿಸಿ ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಅಂತೆಯೇ ನ್ಯೂಜಿಲೆಂಡ್ ವಿರುದ್ಧ 332ರನ್ ಗಳ ಮುನ್ನಡೆ ಸಾಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com