ಓಮಿಕ್ರಾನ್ ಭೀತಿ ನಡುವೆಯೇ ಟೀಂ ಇಂಡಿಯಾದಿಂದ ದಕ್ಷಿಣ ಆಫ್ರಿಕಾ ಪ್ರವಾಸ; ಡಿ.26ರಂದು ಮೊದಲ ಟೆಸ್ಟ್!
ಇಡೀ ಜಗತ್ತಿಗೆ ಭೀತಿ ಹುಟ್ಟಿಸಿರುವ ಓಮಿಕ್ರಾನ್ ರೋಪಾಂತರಿ ಕೊರೋನಾ ವೈರಸ್ ಸೋಂಕಿನ ನಡುವೆಯೇ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಕ್ರಿಕೆಟ್ ಸೌತ್ ಆಫ್ರಿಕಾ (ಸಿಎಸ್‌ಎ) ಒಪ್ಪಂದಕ್ಕೆ ಬಂದಿದ್ದು, ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸ ಸ್ಪಷ್ಟವಾಗಿದೆ.
Published: 04th December 2021 05:35 PM | Last Updated: 04th December 2021 06:29 PM | A+A A-

ಬಿಸಿಸಿಐ ಲೋಗೋ
ನವದೆಹಲಿ: ಇಡೀ ಜಗತ್ತಿಗೆ ಭೀತಿ ಹುಟ್ಟಿಸಿರುವ ಓಮಿಕ್ರಾನ್ ರೋಪಾಂತರಿ ಕೊರೋನಾ ವೈರಸ್ ಸೋಂಕಿನ ನಡುವೆಯೇ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಕ್ರಿಕೆಟ್ ಸೌತ್ ಆಫ್ರಿಕಾ (ಸಿಎಸ್‌ಎ) ಒಪ್ಪಂದಕ್ಕೆ ಬಂದಿದ್ದು, ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸ ಸ್ಪಷ್ಟವಾಗಿದೆ.
ಇದನ್ನೂ ಓದಿ: ಒಮಿಕ್ರಾನ್ ಭೀತಿ: ಆಫ್ರಿಕಾ ಪ್ರವಾಸ ಮುಂದೂಡುವ ಸಾಧ್ಯತೆ; ತಂಡದ ಆಯ್ಕೆ ತಡೆ ಹಿಡಿದ ಬಿಸಿಸಿಐ
ಆಫ್ರಿಕಾದಲ್ಲಿ ಓಮಿಕ್ರಾನ್ ರೂಪಾಂತರ ಸೋಂಕು ಉಲ್ಬಣವಾದ ಹಿನ್ನಲೆಯಲ್ಲಿ ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದ ಮೇಲೆ ಅನುಮಾನಗಳು ಮೂಡಿದ್ದವು. ಆದರೆ ಇದೀಗ ಈ ಬಗ್ಗೆ ಬಿಸಿಸಿಐ ಸ್ಪಷ್ಟನೆ ನೀಡಿದ್ದು, ಪ್ರವಾಸ ಮುಂದುವರೆಯಲಿದೆ ಎಂದು ಹೇಳಿದೆ. ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು, 'ಭಾರತ ಮೂರು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಪ್ರವಾಸದ ಭಾಗವಾಗಿದ್ದ ನಾಲ್ಕು ಟಿ20 ಪಂದ್ಯಗಳನ್ನು ನಂತರ ಆಡಲಾಗುತ್ತದೆ ಎಂದು ಶನಿವಾರ ಪ್ರಕಟಿಸಿದ್ದಾರೆ.
ಇದನ್ನೂ ಓದಿ: 62 ರನ್ ಗಳಿಗೆ ಆಲೌಟ್: ನಾಲ್ಕು ಕಳಪೆ ದಾಖಲೆ ಬರೆದ ನ್ಯೂಜಿಲೆಂಡ್!
ಈ ಕುರಿತು ಉಭಯ ಕ್ರಿಕೆಟ್ ಮಂಡಳಿಗಳು ಸುಧೀರ್ಘ ಚರ್ಚೆ ನಡೆಸಿ ಒಂದು ಒಪ್ಪಂದಕ್ಕೆ ಬಂದಿದ್ದು, ಅದರಂತೆ 'ಭಾರತ ತಂಡವು ಈ ತಿಂಗಳ ಕೊನೆಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮೂರು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 26 ರಂದು ಆರಂಭವಾಗಲಿದೆ. ಅಂತೆಯೇ ಉಭಯ ಕ್ರಿಕೆಟ್ ಬೋರ್ಡ್‌ಗಳು ನಾಲ್ಕು ಟ್ವೆಂಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ನಂತರದ ದಿನಾಂಕದಲ್ಲಿ ಆಡಲಾಗುವುದು ಎಂದು ನಿರ್ಧರಿಸಿವೆ.
ಇದನ್ನೂ ಓದಿ: 2ನೇ ಟೆಸ್ಟ್ ಪಂದ್ಯ: ಭಾರತೀಯ ಬೌಲರ್ ಗಳ ಪಾರಮ್ಯ, 62 ರನ್ ಗಳಿಗೆ ಕಿವೀಸ್ ಪಡೆ ಆಲೌಟ್
ಆದರೆ ಸರಣಿಯ ಸ್ಥಳಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಆದರೆ ಬಾಕ್ಸಿಂಗ್ ಡೇ ಟೆಸ್ಟ್ ಅನ್ನು ಈ ಹಿಂದೆ ಆಯೋಜಿಸಲಾಗಿದ್ದ ಡರ್ಬನ್ ಕ್ರೀಡಾಂಗಣದಲ್ಲಿ ಅಲ್ಲದೆ ಸೆಂಚುರಿಯನ್‌ನಲ್ಲಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: 'ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್': ಭಾರತದ ವಿರುದ್ಧ ವಿಶ್ವದಾಖಲೆ ಬರೆದ ಕಿವೀಸ್ ಬೌಲರ್ 'ಎಜಾಜ್ ಪಟೇಲ್'
ತವರಿನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಪಂದ್ಯದ ಬಳಿಕ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ತಂಡಗಳ ಪಂದ್ಯ ನಿಗದಿಯಾಗಿದೆ. ಪ್ರವಾಸದಲ್ಲಿ ಭಾರತ ತಂಡ 3 ಟೆಸ್ಟ್, 3 ಏಕದಿನ ಹಾಗೂ 4 ಟಿ20 ಸರಣಿಗಳ ವೇಳಾಪಟ್ಟಿ ಈಗಾಗಲೇ ನಿಗದಿಯಾಗಿತ್ತು. ಆದರೆ 4 ಟಿ20 ಪಂದ್ಯಗಳನ್ನು ಮುಂದೂಡಿದ್ದಾರೆ. ಡಿ.17ರಿಂದ ಜೊಹಾನ್ಸ್ ಬರ್ಗ್‍ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.