ದಾಖಲೆ ಬರೆದ ಭಾರತ: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಅತೀ ದೊಡ್ಡ ಗೆಲುವು

ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 372 ರನ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ ತಂಡ ಐತಿಹಾಸಿಕ ಸಾಧನೆ ಮಾಡಿದ್ದು, ಇದು ಭಾರತ ತಂಡದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಅತೀ ದೊಡ್ಡ ಗೆಲುವಾಗಿದೆ.
ಭಾರತಕ್ಕೆ ಜಯ
ಭಾರತಕ್ಕೆ ಜಯ

ಮುಂಬೈ: ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 372 ರನ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ ತಂಡ ಐತಿಹಾಸಿಕ ಸಾಧನೆ ಮಾಡಿದ್ದು, ಇದು ಭಾರತ ತಂಡದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಅತೀ ದೊಡ್ಡ ಗೆಲುವಾಗಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಕೇವಲ ನಾಲ್ಕೇ ದಿನಕ್ಕೆ ಮುಕ್ತಾಯವಾದ ಪಂದ್ಯದಲ್ಲಿ ಭಾರತ ನೀಡಿದ 450ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಕಿವೀಸ್ ಪಡೆ ಕೇವಲ 167ರನ್ ಗಳಿಗೆ ಆಲೌಟ್ ಆಗುವ ಮೂಲಕ ಭಾರತದ ವಿರುದ್ಧ 372 ರನ್ ಗಳ ಹೀನಾಯ ಸೋಲು ಕಂಡಿತು. ಆ ಮೂಲಕ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಾಲ್ಕನೇ ದಿನದಲ್ಲಿಯೇ ಪಂದ್ಯ ಮುಕ್ತಾಯವಾಗಿದ್ದು ಟೀಮ್ ಇಂಡಿಯಾ ರನ್‌ಗಳ ಭಾರೀ ಅಂತರದಿಂದ ವಿಜಯ ಸಾಧಿಸಿದೆ.

ಈ ಹಿಂದೆ 2015ರಲ್ಲಿ ದೆಹಲಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 337ರನ್ ಗಳ ಜಯ ಸಾಧಿಸಿತ್ತು. ಇದು ಭಾರತ ಅತೀ ದೊಡ್ಡ ರನ್ ಗಳ ಅಂತರದ ಗೆಲುವಾಗಿತ್ತು. ಈ ದಾಖಲೆಯನ್ನು ಇಂದು ಭಾರತ ಹಿಂದಿಕ್ಕಿದೆ. ಅಂತೆಯೇ 2016ರಲ್ಲಿ ಇಂದೋರ್ ನಲ್ಲಿ ಇದೇ ನ್ಯೂಜಿಲೆಂಡ್ ವಿರುದ್ಧ 321ರನ್ ಗಳ ಜಯ ಸಾಧಿಸಿತ್ತು. ಇದಕ್ಕೂ ಮೊದಲು 2008ರಲ್ಲಿ ಆಸ್ಟ್ರೇಲಿಯಾ ವಿರುದ್ಧ 320ರನ್ ಗಳ ಜಯಸಾಧಿಸಿತ್ತು.

Largest victory for India (by runs):
372 vs NZ, Mumbai 2021*
337 vs SA, Delhi 2015
321 vs NZ, Indore 2016
320 vs AUS, Mohali 2008
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com