ಅದ್ಭುತ ಬೌಲಿಂಗ್; 36 ವರ್ಷದ ಹಳೆಯ ದಾಖಲೆ ಪುಡಿ, ಒಂದೇ ಇನ್ನಿಂಗ್ಸ್ ನಲ್ಲಿ 3 ವಿಶ್ವ ದಾಖಲೆ ನಿರ್ಮಿಸಿದ ಕಿವೀಸ್ ಬೌಲರ್ ಎಜಾಜ್ ಪಟೇಲ್!

ಭಾರತದ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ ಎಲ್ಲ 10 ವಿಕೆಟ್ ಗಳನ್ನು ಪಡೆಯುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿರುವ ಕಿವೀಸ್ ಬೌಲರ್ ಎಜಾಜ್ ಪಟೇಲ್ ತಮ್ಮ ಒಂದೇ ಒಂದು ಅದ್ಭುತ ಇನ್ನಿಂಗ್ಸ್ ಮೂಲಕ ಸರಣಿ ದಾಖಲೆಗಳನ್ನು ನಿರ್ಮಾಣ ಮಾಡಿದ್ದಾರೆ.

Published: 04th December 2021 08:56 PM  |   Last Updated: 04th December 2021 08:56 PM   |  A+A-


Ajaz Patel

ಎಜಾಜ್ ಪಟೇಲ್

Online Desk

ಮುಂಬೈ: ಭಾರತದ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ ಎಲ್ಲ 10 ವಿಕೆಟ್ ಗಳನ್ನು ಪಡೆಯುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿರುವ ಕಿವೀಸ್ ಬೌಲರ್ ಎಜಾಜ್ ಪಟೇಲ್ ತಮ್ಮ ಒಂದೇ ಒಂದು ಅದ್ಭುತ ಇನ್ನಿಂಗ್ಸ್ ಮೂಲಕ ಸರಣಿ ದಾಖಲೆಗಳನ್ನು ನಿರ್ಮಾಣ ಮಾಡಿದ್ದಾರೆ.

ಹೌದು.. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ವರ್ಸಸ್ ನ್ಯೂಜಿಲೆಂಡ್ ನಡುವಿನ 2ನೇ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಕಿವೀಸ್ ಸ್ಪಿನ್ನರ್ ಎಜಾಜ್ ಪಟೇಲ್ ಎಲ್ಲಾ 10 ವಿಕೆಟ್ ಪಡೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧ 2ನೇ ಟೆಸ್ಟ್: 2ನೇ ದಿನದಾಟ ಅಂತ್ಯಕ್ಕೆ ಭಾರತ 69/0, 2ನೇ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾಗೆ 332 ರನ್ ಮುನ್ನಡೆ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಮಯಾಂಕ್ ಅಗರ್ವಾಲ್ ಅವರ ಅಮೋಘ ಶತಕ, ಅಕ್ಸರ್ ಪಟೇಲ್ ಸಮಯೋಚಿತ ಅರ್ಧಶತಗಳ ನೆರವಿನ ಹೊರತಾಗಿಯೂ 325 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಈ ಪತನದಲ್ಲಿ ಕಿವೀಸ್ ಸ್ಪಿನ್ನರ್ ಎಜಾಜ್ ಪಟೇಲ್ ರ ಅಬ್ಬರದ ಬೌಲಿಂಗ್ ಇತ್ತು. ಪಟೇಲ್ ಕೇವಲ 119 ರನ್ ನೀಡಿ ಭಾರತ ಎಲ್ಲ 10 ವಿಕೆಟ್ ಗಳನ್ನು ಕಬಳಿಸಿದರು. ಆ ಮೂಲಕ ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್ ಪಡೆದ ವಿಶ್ವದ ಮೂರನೇ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಇದನ್ನೂ ಓದಿ: ಓಮಿಕ್ರಾನ್ ಭೀತಿ ನಡುವೆಯೇ ಟೀಂ ಇಂಡಿಯಾದಿಂದ ದಕ್ಷಿಣ ಆಫ್ರಿಕಾ ಪ್ರವಾಸ; ಡಿ.26ರಂದು ಮೊದಲ ಟೆಸ್ಟ್

ಈ ಹಿಂದೆ ಇದೇ ರೀತಿಯ ಸಾಧನೆಯನ್ನು ಇಂಗ್ಲೆಂಡ್ ತಂಡದ ಬೌಲರ್ ಜಿಮ್ ಲೇಕರ್ (ಜೇಮ್ಸ್ ಚಾರ್ಲ್ಸ್ ಲೇಕರ್) ಮತ್ತು ಭಾರತದ ಸ್ಪಿನ್ ಲೆಜೆಂಡ್ ಅನಿಲ್ ಕುಂಬ್ಳೆ ಮಾಡಿದ್ದರು. ಆ ಬಳಿಕ ಈ ಪಟ್ಟಿಗೆ ಸೇರಿದ ಮೂರನೇ ಬೌಲರ್ ಎಂಬ ಕೀರ್ತಿಗೆ ಎಜಾಜ್ ಪಟೇಲ್ ಭಾಜನರಾಗಿದ್ದಾರೆ. ಕುಂಬ್ಳೆ ದೆಹಲಿ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ 1999ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 10 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಆ ಬಳಿಕ ಬರೊಬ್ಬರಿ 22 ವರ್ಷಗಳ ಬಳಿಕ ನ್ಯೂಜಿಲೆಂಡ್ ಎಜಾಜ್ ಪಟೇಲ್ ಈ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: 62 ರನ್ ಗಳಿಗೆ ಆಲೌಟ್: ನಾಲ್ಕು ಕಳಪೆ ದಾಖಲೆ ಬರೆದ ನ್ಯೂಜಿಲೆಂಡ್!

3 ವಿಶ್ವ ದಾಖಲೆ ನಿರ್ಮಾಣ
ಇನ್ನು ಈ ಅಮೋಘ ದಾಖಲೆ ಮೂಲಕ ಎಜಾಜ್ ಪಟೇಲ್ 3 ವಿಶ್ವ ದಾಖಲೆ ನಿರ್ಮಾಣ ಮಾಡಿದ್ದಾರೆ.

ಭಾರತದಲ್ಲಿ ವಿದೇಶಿ ಸ್ಪಿನ್ನರ್ ನಿಂದ ಅತ್ಯುತ್ತಮ ಪ್ರದರ್ಶನ
ಭಾರತದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಬೌಲರ್ ಗಳ ಪಟ್ಟಿಯಲ್ಲಿ ಎಜಾಜ್ ಅಗ್ರ ಸ್ಥಾನಕ್ಕೇರಿದ್ದಾರೆ. ಈ ಹಿಂದೆ 2017ರಲ್ಲಿ ಆಸ್ಟ್ರೇಲಿಯಾದ ನಾಥನ್ ಲೈಆನ್ 50 ರನ್ ನೀಡಿ 8 ವಿಕೆಟ್ ಕಬಳಿಸಿದ್ದರು. ಇದು ಭಾರತದಲ್ಲಿ ವಿದೇಶಿ ಸ್ಪಿನ್ನರ್ ರ 2ನೇ ಉತ್ತಮ ಪ್ರದರ್ಶನವಾಗಿದೆ.

ಇದನ್ನೂ ಓದಿ: 2ನೇ ಟೆಸ್ಟ್ ಪಂದ್ಯ: ಭಾರತೀಯ ಬೌಲರ್ ಗಳ ಪಾರಮ್ಯ, 62 ರನ್ ಗಳಿಗೆ ಕಿವೀಸ್ ಪಡೆ ಆಲೌಟ್

ಭಾರತದ ವಿರುದ್ಧ ಅತ್ಯುತ್ತಮ ಬೌಲಿಂಗ್ ಪ್ರದರ್ಶನ
ಇನ್ನು ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಬೌಲರ್ ಒಬ್ಬರು ತೋರಿದ ಅತ್ಯುತ್ತಮ ಪ್ರದರ್ಶನ ಕೂಡ ಇದಾಗಿದ್ದು, ಈ ಹಿಂದೆ 1971ರಲ್ಲಿ ವೆಸ್ಟ್ ಇಂಡೀಸ್ ನ ಬೌಲರ್ ಜಾಕ್ ನರೇಗ 95 ರನ್ ನೀಡಿ 9 ವಿಕೆಟ್ ಪಡೆದಿದ್ದರು. ಇದು ಭಾರತದ ವಿರುದ್ಧ ಬೌಲರ್ ಒಬ್ಬರ ಅತ್ಯುತ್ತಮ ಪ್ರದರ್ಶನವಾಗಿತ್ತು. ಈ ಸಾಧನೆಯನ್ನು ಎಜಾಜ್ ಪಟೇಲ್ 119 ರನ್ ಗಳಿಗೆ 10 ವಿಕೆಟ್ ಕಬಳಿಸಿ ಹಿಂದಿಕ್ಕಿದ್ದಾರೆ.

ನ್ಯೂಜಿಲೆಂಡ್ ಬೌಲರ್ ಒಬ್ಬರ ಅತ್ಯುತ್ತಮ ಪ್ರದರ್ಶನ
ಅಂತೆಯೇ ಕೇವಲ ಭಾರತದ ವಿರುದ್ಧ ಮಾತ್ರವಲ್ಲದೇ ನ್ಯೂಜಿಲೆಂಡ್ ತಂಡ ಬೌಲರ್ ಒಬ್ಬರ ಅತ್ಯುತ್ತಮ ಪ್ರದರ್ಶನ ಕೂಡ ಇದಾಗಿದ್ದು, ಈ ಹಿಂದೆ ಅಂದರೆ 1985ರಲ್ಲಿ ನ್ಯೂಜಿಲೆಂಡ್ ನ ರಿಚರ್ಡ್ ಹ್ಯಾಡ್ಲಿ ಆಸ್ಚ್ರೇಲಿಯಾ ವಿರುದ್ಧ 52 ರನ್ ನೀಡಿ 9 ವಿಕೆಟ್ ಪಡೆದಿದ್ದರು. ಇದು ಈ ವರೆಗಿನ ನ್ಯೂಜಿಲೆಂಡ್ ಬೌಲರ್ ಒಬ್ಬರ ಅತ್ಯುತ್ತಮ ಪ್ರದರ್ಶನವಾಗಿ ದಾಖಲಾಗಿತ್ತು. ಆದರೆ ಇಂದಿನ ಪ್ರದರ್ಶನದ ಮೂಲಕ ಎಜಾಜ್ ಪಟೇಲ್ ಅವರು 36 ವರ್ಷದ ಹಳೆಯ ದಾಖಲೆಯನ್ನೂ ಮುರಿದಿದ್ದಾರೆ.

ಇದನ್ನೂ ಓದಿ: 'ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್': ಭಾರತದ ವಿರುದ್ಧ ವಿಶ್ವದಾಖಲೆ ಬರೆದ ಕಿವೀಸ್ ಬೌಲರ್ 'ಎಜಾಜ್ ಪಟೇಲ್'

ಏಕೈಕ ಆಟಗಾರ
ಅಂತೆಯೇ ಮೊದಲ ಇನ್ನಿಂಗ್ಸ್ ನಲ್ಲಿ 10 ವಿಕೆಟ್ ಪಡೆದು, ಬ್ಯಾಟಿಂಗ್ ವೇಳೆ ಅಜೇಯರಾಗಿ ಉಳಿದ ಜಗತ್ತಿನ ಏಕೈಕ ಕ್ರಿಕೆಟಿಗ ಎಂಬ ಕೀರ್ತಿಗೂ ಏಜಾಜ್ ಪಟೇಲ್ ಭಾಜನರಾಗಿದ್ದಾರೆ.
 


Stay up to date on all the latest ಕ್ರಿಕೆಟ್ news
Poll
Omicron-Covid-variant

ಭಾರತದಲ್ಲಿ ಕೋವಿಡ್‌ನಿಂದ 4.7 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ ಎಂಬ WHO ವರದಿ ಮತ್ತು ಅಂಕಿಅಂಶಗಳನ್ನು ನೀವು ಒಪ್ಪುತ್ತೀರಾ?


Result
ಹೌದು, ಒಪ್ಪಬಹುದು
ಇಲ್ಲ, ಒಪ್ಪಲಾಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp