ಪತ್ನಿ, ಪ್ರೇಯಸಿಯಿಂದ ಮಾತ್ರ ಒತ್ತಡ: ಸೌರವ್ ಗಂಗೂಲಿ ವಿವಾದಾತ್ಮಕ ಹೇಳಿಕೆ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 
ಸೌರವ್ ಗಂಗೂಲಿ
ಸೌರವ್ ಗಂಗೂಲಿ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಗುರುರ್ಗಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಯಾವ ಕ್ರಿಕೆಟಿಗರ ವರ್ತನೆ ನಿಮಗೆ ಬಹಳ ಇಷ್ಟ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ. "ನನಗೆ ವಿರಾಟ್ ಕೊಹ್ಲಿ ವರ್ತನೆ ಇಷ್ಟವಾಗುತ್ತದೆ ಆದರೆ ಅವರು ಬಹಳಷ್ಟು ಜಗಳವಾಡುತ್ತಾರೆ. 

ಜೀವನದಲ್ಲಿ ಒತ್ತಡವನ್ನು ಹೇಗೆ ನಿರ್ವಹಿಸುತ್ತೀರಿ ಎಂಬ ಪ್ರಶ್ನೆಗೂ ಉತ್ತರಿಸಿರುವ ಗಂಗೂಲಿ, ಜೀವನದಲ್ಲಿ ಒತ್ತಡ ಇಲ್ಲ. ಪತ್ನಿ ಹಾಗೂ ಪ್ರೇಯಸಿಯಷ್ಟೇ ಎಂದು ಹೇಳಿದ್ದಾರೆ. 

ಗಂಗೂಲಿ ಅವರ ಈ ಹೇಳಿಕೆಯ ಬಗ್ಗೆ ನೆಟಿಜನ್ ಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಟ್ರೋಲ್ ಮಾಡುತ್ತಿದ್ದಾರೆ. 

ಇದಕ್ಕೂ ಮುನ್ನ ಕೊಹ್ಲಿ ಅವರನ್ನು ಒಡಿಐ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಇದಾದ ಬಳಿಕ ಪ್ರತಿಕ್ರಿಯೆ ನೀಡಿದ್ದ ಗಂಗೂಲಿ ಬಿಸಿಸಿಐ ಕೊಹ್ಲಿ ಅವರನ್ನು ಟಿ20 ನಾಯಕತ್ವ ತೊರೆಯದಂತೆ ಕೇಳಿತ್ತು. ವೈಟ್ ಬಾಲ್ ಫಾರ್ಮೆಟ್ ಗಳಿಗೆ ಒಬ್ಬನೇ ನಾಯಕ ಇರಬೇಕೆಂಬ ಉದ್ದೇಶದಿಂದ ಆಯ್ಕೆಗಾರರು ಕೊಹ್ಲಿ ಅವರನ್ನು 50 ಓವರ್ ಗಳ ಆವೃತ್ತಿಯಿಂದ ಕೊಹ್ಲಿ ಅವರನ್ನು ಕೈಬಿಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com