ಕೋವಿಡ್ ಸಂಕಷ್ಟದಲ್ಲಿರುವ ಭಾರತಕ್ಕಾಗಿ ನಿಧಿ ಸಂಗ್ರಹಿಸಲು ಗೇಮಿಂಗ್ ಲೈವ್ ಸ್ಟ್ರೀಮ್ ನಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗರು ಭಾಗಿ!

ಕೋವಿಡ್ ಸಂಕಷ್ಟದಲ್ಲಿರುವ ಭಾರತಕ್ಕಾಗಿ ಯುನಿಸೆಫ್ ಆಸ್ಟ್ರೇಲಿಯಾದ ನಿಧಿ ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿದ್ದು ಇದರಲ್ಲಿ ಆಸ್ಟ್ರೇಲಿಯಾ ಸ್ಟಾರ್ ವೇಗಿ ಪ್ಯಾಟ್ ಕಮ್ಮಿನ್ಸ್ ಸೇರಿದಂತೆ ಉನ್ನತ ಕ್ರಿಕೆಟಿಗರು ಗುರುವಾರ 12 ಗಂಟೆಗಳ ಗೇಮಿಂಗ್ ಲೈವ್ ಸ್ಟ್ರೀಮ್ನಲ್ಲಿ ಭಾಗವಹಿಸಲಿದ್ದಾರೆ.
ಪ್ಯಾಟ್ ಕಮಿನ್ಸ್
ಪ್ಯಾಟ್ ಕಮಿನ್ಸ್

ಸಿಡ್ನಿ: ಕೋವಿಡ್ ಸಂಕಷ್ಟದಲ್ಲಿರುವ ಭಾರತಕ್ಕಾಗಿ ಯುನಿಸೆಫ್ ಆಸ್ಟ್ರೇಲಿಯಾದ ನಿಧಿ ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿದ್ದು ಇದರಲ್ಲಿ ಆಸ್ಟ್ರೇಲಿಯಾ ಸ್ಟಾರ್ ವೇಗಿ ಪ್ಯಾಟ್ ಕಮ್ಮಿನ್ಸ್ ಸೇರಿದಂತೆ ಉನ್ನತ ಕ್ರಿಕೆಟಿಗರು ಗುರುವಾರ 12 ಗಂಟೆಗಳ ಗೇಮಿಂಗ್ ಲೈವ್ ಸ್ಟ್ರೀಮ್ನಲ್ಲಿ ಭಾಗವಹಿಸಲಿದ್ದಾರೆ.

100,000 ಆಸ್ಟ್ರೇಲಿಯನ್ ಡಾಲರ್ ಸಂಗ್ರಹಿಸುವ ಪ್ರಯತ್ನದಲ್ಲಿ ವೇಗಿ ಜೋಶ್ ಲಾಲರ್, ಕಮ್ಮಿನ್ಸ್, ಸ್ಪಿನ್ನರ್ ನಾಥನ್ ಲಿಯಾನ್, ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹ್ಯಾಝಲ್‌ವುಡ್ ನೇರ ಪ್ರಸಾರದಲ್ಲಿ ಕ್ರಿಕೆಟ್ ಮತ್ತು ಗೇಮಿಂಗ್ ಕೌಶಲ್ಯಗಳ ಬಗ್ಗೆ ಮಾತನಾಡುತ್ತಾರೆ. ಮಧ್ಯಾಹ್ನ 1:30 ಕ್ಕೆ ನಿಧಿಸಂಗ್ರಹ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಆಲ್‌ರೌಂಡರ್ ಮೊಯಿಸಸ್ ಹೆನ್ರಿಕ್ಸ್, ಮಹಿಳಾ ಕ್ರಿಕೆಟಿಗ ಅಲಿಸಾ ಹೀಲಿ ಮತ್ತು ದಕ್ಷಿಣ ಆಫ್ರಿಕಾದ ರಿಲೀ ರೊಸ್ಸೌ ಇತರರು ಭಾಗವಹಿಸಲಿದ್ದಾರೆ.

ಆಸ್ಟ್ರೇಲಿಯಾದ ಕ್ರಿಕೆಟಿಗನಾಗಿರುವುದರಿಂದ, ನಾವು ಭಾರತೀಯರ ಜೊತೆ ವಿಶಿಷ್ಟ ಸಂಬಂಧವನ್ನು ಹೊಂದಿದ್ದೇವೆ ಎಂದು ಲಾಲೋರ್ ಕ್ರಿಕೆಟ್ ಡಾಟ್ ಕಾಮ್ ಗೆ ತಿಳಿಸಿದ್ದು, ಇದು ವಿಶ್ವದ ಒಂದು ಸುಂದರವಾದ ಭಾಗವಾಗಿದೆ. ಭಾರತೀಯರು ಸಂಪೂರ್ಣವಾಗಿ ಕ್ರಿಕೆಟ್ ಹುಚ್ಚರಾಗಿದ್ದು ಅವರು ಎಲ್ಲಾ ಕ್ರಿಕೆಟಿಗರನ್ನು ಸ್ವಾಗತಿಸುತ್ತಾರೆ ಎಂದರು. 

ಭಾರತಕ್ಕಾಗಿ ನಮ್ಮ ಕೈಲಾದಷ್ಟು ಹಣ ಸಂಗ್ರಹ ಮಾಡುವ ಗುರಿ ಹೊಂದಿದ್ದು ಇದು ಮತ್ತು ಮುಂದಕ್ಕೆ ಹೋಗುತ್ತದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಹೊಸ ಸಿಇಒ, ನಿಕ್ ಹಾಕ್ಲೆ ಮತ್ತು ಆಸ್ಟ್ರೇಲಿಯಾದ ಕ್ರಿಕೆಟಿಗರ ಸಂಘದ ಸಿಇಒ ಟಾಡ್ ಗ್ರೀನ್‌ಬರ್ಗ್ ಹೇಳಿದ್ದು ಅವರು ಕೂಡ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಲಾಲೋರ್‌ನ ಟ್ವಿಚ್ ಖಾತೆಯಲ್ಲಿ ಲೈವ್-ಸ್ಟ್ರೀಮ್ ಲಭ್ಯವಿರುತ್ತದೆ. ಯುನಿಸೆಫ್ ಆಸ್ಟ್ರೇಲಿಯಾದ ಇಂಡಿಯಾ ಕೋವಿಡ್ ಸಂಕಷ್ಟಕ್ಕಾಗಿ ಆಸ್ಟ್ರೇಲಿಯಾ ಕ್ರಿಕೆಟ್ ಇದುವರೆಗೆ 280,000ಗಿಂತ ಹೆಚ್ಚು ಆಸ್ಟ್ರೇಲಿಯನ್ ಡಾಲರ್ ಹಣ ಸಂಗ್ರಹಿಸಿದೆ.

ಭಾರತ ಸದ್ಯ ಕೊರೋನಾ ಎರಡನೇ ಅಲೆಗೆ ತತ್ತರಿಸಿ ಹೋಗಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 1,32,788 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 3,207 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಜಗತ್ತಿನ ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 14ನೇ ಆವೃತ್ತಿಯನ್ನು ಕಳೆದ ತಿಂಗಳು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಬಯೋ-ಬಬಲ್ ನಲ್ಲಿ ಕೊರೋನಾ ಪ್ರಕರಣಗಳು ಕಾಣಿಸಿಕೊಂಡಿದ್ದರಿಂದ ಟೂರ್ನಿಯನ್ನು ರದ್ದು ಮಾಡಬೇಕಾಯಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com