ಡಬ್ಲ್ಯುಟಿಸಿ ಫೈನಲ್: ಕೊಹ್ಲಿ ತಂಡಕ್ಕೆ ಸಚಿನ್ ತೆಂಡೂಲ್ಕರ್ ನೀಡಿದ ಸಲಹೆ ಏನು ಗೊತ್ತೇ?

ಸೌತ್ ಹ್ಯಾಂಪ್ಟನ್ ನಲ್ಲಿ ನಡೆದ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ನ್ಯೂಲಿಜ್ಯಾಂಡ್ ವಿರುದ್ಧ ಮಣಿದ ಭಾರತ ತಂಡಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ಸಲಹೆ ನೀಡಿದ್ದಾರೆ. 
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್

ಮುಂಬೈ: ಸೌತ್ ಹ್ಯಾಂಪ್ಟನ್ ನಲ್ಲಿ ನಡೆದ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ನ್ಯೂಲಿಜ್ಯಾಂಡ್ ವಿರುದ್ಧ ಮಣಿದ ಭಾರತ ತಂಡಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ಸಲಹೆ ನೀಡಿದ್ದಾರೆ. 

"ವಿರಾಟ್ ಕೊಹ್ಲಿ ನೇತೃತ್ವದ ತಂಡ ರಿಸರ್ವ್ 6ನೇ ದಿನದ ಮೊದಲ ಕೆಲವು ಓವರ್ ಗಳಲ್ಲಿ ವಿಕೆಟ್ ಗಳನ್ನು ಉಳಿಸಿಕೊಳ್ಳುವುದು ಮುಖ್ಯವಾಗಿತು. ಆದರೆ ನ್ಯೂಜಿಲ್ಯಾಂಡ್ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಬಳಿಕ ಭಾರತ ಸೋಲು ಕಂಡಿತು ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. 

ನ್ಯೂಜಿಲ್ಯಾಂಡ್ ನ ವೇಗಿ ಕೈಲ್ ಜಾಮಿಸನ್ ಭಾರತದ ಬ್ಯಾಟ್ಸ್ ಮನ್ ಗಳ ಮೇಲೆ ಹಿಡಿತ ಸಾಧಿಸಿ ಚೇತೇಶ್ವರ್ ಪೂಜಾರಾ, ಕೊಹ್ಲಿಯಂತಹ ಅತ್ಯುತ್ತಮ ಆಟಗಾರರನ್ನು ಪೆವಿಲಿಯನ್ ಗೆ ಕಳಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಭಾರತ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ 8 ವಿಕೆಟ್ ಗಳ ಸೋಲು ಕಂಡಿತ್ತು. 

ಮೊದಲ 10-12 ಓವರ್ ಗಳಲ್ಲಿ ವಿಕೆಟ್ ಗಳನ್ನು ಕಳೆದುಕೊಳ್ಳದೇ ಇರುವುದು ಮುಖ್ಯವಾಗಿತ್ತು. ಕೊಹ್ಲಿ, ಪೂಜಾರ ಅವರನ್ನು ಪೆವಿಲಿಯನ್ ಗೆ ಮರಳಿಸುವುದರಲ್ಲಿ ನ್ಯೂಜಿಲ್ಯಾಂಡ್ ಯಶಸ್ವಿಯಾಯಿತು. ನಂತರದಲ್ಲಿ ಕ್ರೀಸ್ ಗೆ ಬಂದ ಅಜಿಂಕ್ಯಾ ರೆಹಾನೆಯನ್ನೂ ಪೆವಿಲಿಯನ್ ಗೆ ಸುಲಭಾವಾಗಿ ಕಳಿಸಿ ನ್ಯೂಜಿಲ್ಯಾಂಡ್ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಇದು ಭಾರತದ ಮೇಲೆ ಮತ್ತಷ್ಟು ಒತ್ತಡ ಹೇರಿತು ಈ ಹಂತದಲ್ಲಿ ಬ್ಯಾಟ್ಸ್ ಮನ್ ಗಳು ಗಟ್ಟಿಯಾಗಿ ನಿಲ್ಲಬೇಕಿತ್ತು ಎಂದು ತೆಂಡೂಲ್ಕರ್ ಯೂಟ್ಯೂಬ್ ಚಾನಲ್ ನ ಮೂಲಕ ಹೇಳಿದ್ದಾರೆ. 

ಕೊನೆಯ ದಿನ ಸರಣಿ ಸಮಬಲ ಸಾಧಿಸಲು ಭಾರತಕ್ಕೆ ಒಳ್ಳೆಯ ಪಾಲುದಾರಿಕೆಯ ಬ್ಯಾಟಿಂಗ್ ಅಗತ್ಯವಿತ್ತು. ಮೂರು ವಿಕೆಟ್ ಗಳನ್ನು ಕಳೆದುಕೊಂಡಿದ್ದರೂ ಭಾರತ ತಂಡ ನ್ಯೂಜಿಲ್ಯಾಂಡ್ ಗೆ ಒತ್ತಡ ಹಾಕಬಹುದಿತ್ತು. 

ಕೊನೆಯ ದಿನ ಮೊದಲ 10 ಓವರ್ ಗಳು ಬಹಳ ನಿರ್ಣಾಯಕವಾಗಿತ್ತು ಎಂದು ಮೊದಲೇ ಹೇಳಿದ್ದೆ. ತಂಪು ಪಾನೀಯ ವಿರಾಮದ ವರೆಗೂ ವಿಕೆಟ್ ಗಳನ್ನು ಉಳಿಸಿಕೊಂಡಿದ್ದರೆ ಭಾರತಕ್ಕೆ ಹೆಚ್ಚಿನ ಅವಕಾಶಗಳಿದ್ದವು ಎಂದು ಸಚಿನ್ ತೆಂಡೂಲ್ಕರ್ ವಿಶ್ಲೇಷಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com