ಟೀಂ ಇಂಡಿಯಾ ಅಸಾಧಾರಣವಾದದ್ದು, ಒಂದು ಫೈನಲ್ ಪಂದ್ಯದಿಂದ ಅದರ ಸಾಮರ್ಥ್ಯ ಅಳೆಯಲು ಆಗಲ್ಲ: ಕೇನ್ ವಿಲಿಯಮ್ಸನ್

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಅಸಾಧಾರಣವಾದದ್ದು ಕೇವಲ ಒಂದು ಫೈನಲ್ ಪಂದ್ಯದಿಂದ ಅದರ ಸಾಮರ್ಥ್ಯವನ್ನು ಅಳೆಯಲು ಆಗಲ್ಲ ಎಂದು ನ್ಯೂಜಿಲೆಂಡ್‌ನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವಿಜೇತ ತಂಡದ ನಾಯಕ ಕೇನ್ ವಿಲಿಯಮ್ಸನ್ ಹೇಳಿದ್ದಾರೆ.
ಕೇನ್ ವಿಲಿಯಮ್ಸನ್-ಕೊಹ್ಲಿ
ಕೇನ್ ವಿಲಿಯಮ್ಸನ್-ಕೊಹ್ಲಿ

ಲಂಡನ್: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಅಸಾಧಾರಣವಾದದ್ದು ಕೇವಲ ಒಂದು ಫೈನಲ್ ಪಂದ್ಯದಿಂದ ಅದರ ಸಾಮರ್ಥ್ಯವನ್ನು ಅಳೆಯಲು ಆಗಲ್ಲ ಎಂದು ನ್ಯೂಜಿಲೆಂಡ್‌ನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವಿಜೇತ ತಂಡದ ನಾಯಕ ಕೇನ್ ವಿಲಿಯಮ್ಸನ್ ಹೇಳಿದ್ದಾರೆ.

ಸೌತಾಂಪ್ಟನ್‌ನಲ್ಲಿ ನಡೆದ ಮಳೆಯ ಪೀಡಿತ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಟೀಂ ಇಂಡಿಯಾವನ್ನು ನ್ಯೂಜಿಲೆಂಡ್ ಎಂಟು ವಿಕೆಟ್‌ಗಳಿಂದ ಮಣಿಸಿತು. ವಿಲಿಯಮ್ಸನ್ ಅಜೇಯ ಅರ್ಧಶತಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು. ಆದರೆ ಒಂದು ಆಫ್ ಫೈನಲ್, ಇದು ಎಂದಿಗೂ ಸಂಪೂರ್ಣ ಚಿತ್ರವನ್ನು ಹೇಳುವುದಿಲ್ಲ ಎಂದು ವಿಲಿಯಮ್ಸನ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

'ನಮಗೆ ತಿಳಿದಿರುವಂತೆ ಟೀಂ ಇಂಡಿಯಾ ಅಸಾಧಾರಣ ತಂಡವಾಗಿದೆ. ಇದು ಒಂದು ದೊಡ್ಡ ತಂಡವಾಗಿದೆ. ಇಂತಹ ತಂಡದ ವಿರುದ್ಧ ಗೆಲುವು ಸಾಧಿಸಿರುವುದಕ್ಕೆ ಹೆಮ್ಮೆಪಡುತ್ತೇವೆ. ಟೀಂ ಇಂಡಿಯಾ ಉತ್ತಮ ವೇಗಿಗಳನ್ನು ಹೊಂದಿದೆ. ಅದು ವಿಶ್ವದಲ್ಲೇ ಅತ್ಯುತ್ತಮವಾಗಿದೆ, ನಂಬಲಾಗದ ಸ್ಪಿನ್ ಬೌಲರ್‌ಗಳು ಮತ್ತು ಬ್ಯಾಟಿಂಗ್‌ಗೆ ಯಾವುದೇ ಉಲ್ಲೇಖವಿಲ್ಲ ಎಂದು ವಿಲಿಯಮ್ಸನ್ ಹೇಳಿದ್ದಾರೆ. 

ವಿಲಿಯಮ್ಸನ್ ಭಾರತೀಯ ಆಟಗಾರರನ್ನು ಆಟದ ಶ್ರೇಷ್ಠ ರಾಯಭಾರಿಗಳು ಎಂದು ಕರೆದರು. ಅಷ್ಟೇ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನು ತಂಡ ಹೊಂದಿದೆ. ಒಂದು ದೇಶವು ಕ್ರೀಡೆಗಾಗಿ ತರುವ ಭಾವನೆ, ನಾವೆಲ್ಲರೂ ಭಾರತ ಹೊಂದಿರುವುದನ್ನು ಪ್ರಶಂಸಿಸಬಹುದು ಎಂದರು.

ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 217 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ನ್ಯೂಜಿಲ್ಯಾಂಡ್ 249 ರನ್ ಗಳಿಗೆ ಆಲೌಟ್ ಆಯಿತು. 30 ರನ್ ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ 170 ರನ್ ಗಳಿಗೆ ಆಲೌಟ್ ಆಯಿತು. ಇನ್ನು ನ್ಯೂಜಿಲ್ಯಾಂಡ್ ಗೆ ಗೆಲ್ಲಲು 139 ರನ್ ಗಳ ಗುರಿ ನೀಡಿತು. ನ್ಯೂಜಿಲ್ಯಾಂಡ್ 2 ವಿಕೆಟ್ ನಷ್ಟಕ್ಕೆ 140 ರನ್ ಬಾರಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಟ್ರೋಫಿಯನ್ನು ಎತ್ತಿ ಹಿಡಿಯಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com