ರೋಹಿತ್ ಶರ್ಮಾ ಟಿ-20 ತಂಡದ ನಾಯಕ?; ಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆ!

ಟೀಮ್ ಇಂಡಿಯಾ ಟಿ-20 ವಿಶ್ವಕಪ್ ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿದೆ. ಅಲ್ಲದೆ ಟಿ-20 ಪ್ರಕಾರದ ಪಂದ್ಯಗಳಿಗೆ ಈಗಾಗಲೇ ವಿರಾಟ್ ಕೊಹ್ಲಿ ರಾಜೀನಾಮೆ ಘೋಷಿಸಿದ್ದು, ಈ ಟೂರ್ನಿ ಕೊನೆ ಟಿ-20 ಆಗಲಿದೆ.
ರೋಹಿತ್ ಶರ್ಮಾ
ರೋಹಿತ್ ಶರ್ಮಾ

ಬೆಂಗಳೂರು: ಟೀಮ್ ಇಂಡಿಯಾ ಟಿ-20 ವಿಶ್ವಕಪ್ ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿದೆ. ಅಲ್ಲದೆ ಟಿ-20 ಪ್ರಕಾರದ ಪಂದ್ಯಗಳಿಗೆ ಈಗಾಗಲೇ ವಿರಾಟ್ ಕೊಹ್ಲಿ ರಾಜೀನಾಮೆ ಘೋಷಿಸಿದ್ದು, ಈ ಟೂರ್ನಿ ಕೊನೆ ಟಿ-20 ಆಗಲಿದೆ.

ಮುಂಬರುವ ಟಿ-20 ಸರಣಿಯನ್ನು ನ್ಯೂಜಿಲೆಂಡ್ ವಿರುದ್ಧ ಭಾರತ ಆಡಲಿದೆ. ಈ ಸರಣಿಗೆ ಯಾರನ್ನ ನಾಯಕರನ್ನಾಗಿ ಆಯ್ಕೆ ಮಾಡಬೇಕು ಅನ್ನೋ ಸಂದಿಗ್ಧ ಪರಿಸ್ಥಿತಿಯಲ್ಲಿ ಬಿಸಿಸಿಐ ಇದೆ. ಈ ಬಗ್ಗೆ ಕ್ರಿಕೆಟ್ ಪಂಡಿತರು, ರೋಹಿತ್ ಶರ್ಮಾ ಅವರತ್ತ ಬೊಟ್ಟು ಮಾಡಿದ್ದು, ಅವರೇ ಮುಂದಿನ ಟಿ-20 ತಂಡದ ನಾಯಕನಾಗುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದಾರೆ.

ಏಕೆಂದರೆ ವಿರಾಟ್ ಕೊಹ್ಲಿ ನಂತರ ಟಿ-20 ಫ್ಲ್ಯಾಟ್ ಫಾರ್ಮ್ ನ ನಾಯಕನ ಆಯ್ಕೆಯಲ್ಲಿ ರೋಹಿತ್ ಶರ್ಮಾ ಹೆಸರು ಮುನ್ನಲೆಯಲ್ಲಿದೆ. ಅಲ್ಲದೆ, ನಾಯಕತ್ವ ಆಯ್ಕೆಯಲ್ಲಿ ರೋಹಿತ್ ಶರ್ಮಾ ಅವರಿಗೆ ಸ್ಪರ್ಧೆಯೊಡ್ಡುವ ಅಂತಹ ಆಟಗಾರರು ಟೀಮ್ ಇಂಡಿಯಾದಲ್ಲಿ ಸದ್ಯಕ್ಕೆ ಇಲ್ಲ ಅಂತಿದ್ದಾರೆ ಕ್ರಿಕೆಟ್ ತಜ್ಞರು. 

ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಸದ್ಯದಲ್ಲೇ ಟೀಮ್ ಇಂಡಿಯಾದ ಆಟಗಾರರ ಹೆಸರನ್ನು ಘೋಷಣೆ ಮಾಡಲಾಗುತ್ತದೆ. ಮುಖ್ಯ ಆಯ್ಕೆದಾರರಾಗಿರುವ ಚೇತನ್ ಶರ್ಮಾ ಹಾಗೂ ಸಹ ಆಯ್ಕೆದಾರ ಅಬೆ ಕುರುವಿಲ್ಲಾ ದುಬೈನಲ್ಲಿದ್ದರೆ. ಉಳಿದ ಆಯ್ಕೆದಾರರು ಭಾರತದಲ್ಲಿ ಇದ್ದಾರೆ. ಇನ್ನು ಭಾರತೀಯ ಕ್ರಿಕೆಟ್ ತಂಡದ ಆಟಗಾರರು ನಿರಂತರವಾಗಿ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯೂ ಇದೆ.

ಸರಣಿಗೂ ಮುನ್ನ ಕ್ವಾರಂಟೈನ್ 
ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗುವ ಆಟಗಾರರಿಗೆ ನವೆಂಬರ್ 10ರೊಳಗೆ ರಿಪೋರ್ಟ್ ಮಾಡಿಕೊಳ್ಳುವಂತೆ ಸೂಚಿಸುವ ಸಾಧ್ಯತೆ ಇದೆ. ಅಲ್ಲದೆ ಅಭ್ಯಾಸಕ್ಕೂ ಮುನ್ನ ಆಟಗಾರರು 5 ದಿನಗಳ ಕಾಲ ಕ್ವಾರಂಟೈನಲ್ಲಿ ಇರಬೇಕಿದೆ. 

ಮುಖ್ಯ ಕೋಚ್ ಆಯ್ಕೆ ವಿಚಾರ
ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವ ಗಡುವು ಅಕ್ಟೋಬರ್ 26ರಂದು ಕೊನೆಗೊಂಡಿದೆ. ಆದರೆ, ಫೀಲ್ಡಿಂಗ್, ಬ್ಯಾಟಿಂಗ್, ಬೌಲಿಂಗ್ ವಿಭಾಗದ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವ ದಿನಾಂಕ ನವೆಂಬರ್ 3 ಕೊನೆಯ ದಿನವಾಗಿದೆ. ಆದರೆ, ಈ ಹುದ್ದೆಗಳ ನೇಮಕಾತಿ ನವೆಂಬರ್ 10ರೊಳಗೆ ಪೂರ್ಣಗೊಳ್ಳಲಿದೆ ಅನ್ನೋದರ ಬಗ್ಗೆ ಯಾವುದೇ ಖಚಿತ ಮಾಹಿತಿ ಹೊರಬಿದ್ದಿಲ್ಲ.  

ಮುಖ್ಯ ತರಬೇತುದಾರ ಮತ್ತು ಇತರ ಸಹಾಯಕ ಸಿಬ್ಬಂದಿ ನೇಮಕಾತಿ ಕೇವಲ ಔಪಚಾರಿಕವಾಗಿದ್ದು, ಈವರೆಗೆ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಕೂಡ ರಚನೆಯಾಗಿಲ್ಲ. ಅತಿ ಮುಖ್ಯ ವಿಚಾರ ಏನೆಂದರೆ ಸಿಎಸಿ ಸದಸ್ಯರಾಗಿರುವ ಮದನ್ ಲಾಲ್ ಅವರು 70 ವರ್ಷಗಳನ್ನು ದಾಟಿದ್ದು, ತಮ್ಮ ಅವಧಿ ಪೂರ್ಣಗೊಳಿಸಿದ್ದಾರೆ. ಈ ಹಂತದಲ್ಲಿ ಮುಂದಿನ ಹತ್ತು ದಿನಗಳಲ್ಲಿ ಬಿಸಿಸಿಐ ಹಲವು ನಿರ್ಧಾರಗಳನ್ನು ಕೈಗೊಳ್ಳಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com