T20I Ranking: ಬಾಬರ್ ಅಜಂ ವಿಶ್ವದ ನಂ.1 ಟಿ20 ಬ್ಯಾಟ್ಸ್‌ಮನ್, ವನಿಂದು ಹಸ್ರಂಗ ಅಗ್ರ ಬೌಲರ್
ಪಾಕ್ ನಾಯಕ ಬಾಬರ್ ಅಜಂ ಮತ್ತು ವನಿಂದು ಹಸರಂಗ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು ಇದರೊಂದಿಗೆ ವಿಶ್ವದ ನಂ.1 ಟಿ20 ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳಾಗಿದ್ದಾರೆ.
Published: 03rd November 2021 04:17 PM | Last Updated: 03rd November 2021 05:18 PM | A+A A-

ಬುಮ್ರಾ
ನವದೆಹಲಿ: ಪಾಕ್ ನಾಯಕ ಬಾಬರ್ ಅಜಂ ಮತ್ತು ವನಿಂದು ಹಸರಂಗ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು ಇದರೊಂದಿಗೆ ವಿಶ್ವದ ನಂ.1 ಟಿ20 ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳಾಗಿದ್ದಾರೆ.
2021ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಬಾಬರ್ ಅಜಂ ಬ್ಯಾಟ್ಸ್‌ಮನ್ ಮತ್ತು ನಾಯಕನಾಗಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಸತತ ನಾಲ್ಕು ಪಂದ್ಯಗಳ ಗೆಲುವಿನೊಂದಿಗೆ ಪಾಕಿಸ್ತಾನವು ಟಿ20 ವಿಶ್ವದಲ್ಲಿ ಸೆಮಿಫೈನಲ್ ತಲುಪಿದ ತಂಡವಾಗಿದೆ. ಬಾಬರ್ ಇಂಗ್ಲೆಂಡ್‌ನ ಡೇವಿಡ್ ಮಲಾನ್ ರನ್ನು ಹಿಂದಿಕ್ಕಿ ಟಿ20 ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಪರ ಬಾಬರ್ ಅಜಂ ಮಹತ್ವದ ಪಾತ್ರ ವಹಿಸಿದ್ದಾರೆ. ಅವರು ನಾಲ್ಕು ಇನ್ನಿಂಗ್ಸ್‌ಗಳಲ್ಲಿ 66 ಸರಾಸರಿಯಲ್ಲಿ 124.52 ಸ್ಟ್ರೈಕ್ ರೇಟ್‌ನಲ್ಲಿ 198 ರನ್ ಗಳಿಸಿದ್ದಾರೆ. ಕಳೆದ ವಾರದ ರ್ಯಾಂಕಿಂಗ್ ನಲ್ಲಿ ಎರಡನೇ ಸ್ಥಾನದಲ್ಲಿದ್ದ ಬಾಬರ್ 14 ಅಂಕಗಳ ಮುನ್ನಡೆ(834ರಲ್ಲಿ) ಪಡೆದು ಡೇವಿಡ್ ಮಲಾನ್ ಅವರನ್ನು ಹಿಂದಿಕ್ಕಿದರು.
ಇದನ್ನೂ ಓದಿ: ವಿರಾಟ್ ಕೊಹ್ಲಿ ದಾಖಲೆ ಮುರಿದ ಪಾಕ್ ನಾಯಕ ಬಾಬರ್!
ಮಲಾನ್ 831ರಿಂದ 798ಕ್ಕೆ ಕುಸಿದರು. ಜೇಸನ್ ರಾಯ್ ಆರು ಸ್ಥಾನ ಮೇಲೇರಿ 14ನೇ ಸ್ಥಾನ, ಡೇವಿಡ್ ಮಿಲ್ಲರ್ ಆರು ಸ್ಥಾನ ಮೇಲೇರಿ 33ನೇ ಸ್ಥಾನ ಹಾಗೂ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ 35 ಸ್ಥಾನ ಮೇಲೇರಿ 52ನೇ ಸ್ಥಾನ ಪಡೆದಿದ್ದಾರೆ.
ವಿರಾಟ್ ಕೊಹ್ಲಿಗೆ ಐದನೇ ಸ್ಥಾನ
ಐಸಿಸಿ ಟಿ20 ರ್ಯಾಂಕಿಂಗ್‌ನಲ್ಲಿ ಬಾಬರ್ ಅಜಂ 834 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಡೇವಿಡ್ ಮಲಾನ್ 798 ಅಂಕಗಳೊಂದಿಗೆ ಮತ್ತು ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ 733 ಅಂಕಗಳೊಂದಿಗೆ ಇದ್ದಾರೆ. ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ 731 ಅಂಕಗಳೊಂದಿಗೆ ಟಿ20 ರ್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 714 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಲೋಕೇಶ್ ರಾಹುಲ್ 678 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ.
ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಜಿಗಿತ
ಐಸಿಸಿ ಪುರುಷರ ಟಿ20 ಶ್ರೇಯಾಂಕದಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಒಂದು ಸ್ಥಾನ ಮೇಲಕ್ಕೆದ್ದು 23ನೇ ಸ್ಥಾನಕ್ಕೆ ತಲುಪಿದ್ದರೆ, ವೇಗಿ ಜಸ್ಪ್ರೀತ್ ಬುಮ್ರಾ 10 ಸ್ಥಾನ ಮೇಲೇರಿ 24ನೇ ಸ್ಥಾನದಲ್ಲಿದ್ದಾರೆ.