
ರೋಹಿತ್ ಶರ್ಮಾ ಬ್ಯಾಟಿಂಗ್ ವೈಖರಿ
ಅಬುದಾಬಿ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂದು ನಡೆದ ಆಫ್ಧಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ ಅಬ್ಬರಿಸಿದ ಟೀಂ ಇಂಡಿಯಾ ದಾಖಲೆ ನಿರ್ಮಾಣ ಮಾಡಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್: ಆಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 66 ರನ್ ಗಳ ಭರ್ಜರಿ ಜಯ
ಹೌದು.. ಇಂದು ಅಬುದಾಬಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆಫ್ಗನ್ ಬೌಲರ್ ಗಳನ್ನು ಇನ್ನಿಲ್ಲದಂತೆ ಕಾಡಿದ ಭಾರತದ ಬ್ಯಾಟ್ಸಮನ್ ಗಳು ನಿಗದಿತ 20 ಓವರ್ ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ ಬರೊಬ್ಬರಿ 210 ರನ್ ಗಳನ್ನು ಕಲೆ ಹಾಕಿದರು. ಇದು ಭಾರತದ ಪರ ದಾಖಲೆಯಾಗಿದ್ದು, ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ದಾಖಲಿಸಿದ 2ನೇ ಗರಿಷ್ಠ ಸ್ಕೋರ್ ಆಗಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್: ಭರ್ಜರಿ ಬ್ಯಾಟಿಂಗ್ ಮೂಲಕ ದಾಖಲೆ ಬರೆದ ರೋ'ಹಿಟ್'-ರಾಹುಲ್ ಜೋಡಿ
ಈ ಹಿಂದೆ ಅಂದರೆ 2007ರಲ್ಲಿ ಡರ್ಬನ್ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 218/4 ಗಳಿಸಿತ್ತು. ಇದು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಗಳಿಸಿದ ಗರಿಷ್ಠ ಮೊತ್ತವಾಗಿ ಉಳಿದಿದೆ. ನಂತರದ ಸ್ಥಾನದಲ್ಲಿ ಇಂದಿನ ಪಂದ್ಯವಿದ್ದು, ಇಲ್ಲಿ ಭಾರತ ಆಫ್ಘನ್ ವಿರುದ್ಧ 210/2 ರನ್ ಗಳಿಸಿದೆ.
ಇದನ್ನೂ ಓದಿ: ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ 'ಕನ್ನಡಿಗ' ರಾಹುಲ್ ದ್ರಾವಿಡ್ ನೇಮಕ
2016ರಲ್ಲಿ ಮುಂಬೈ ನಲ್ಲಿ ವಿಂಡೀಸ್ ವಿರುದ್ಧದ ಪಂದ್ಯ 3ನೇ ಸ್ಥಾನದಲ್ಲಿದ್ದು, ಆ ಪಂದ್ಯದಲ್ಲಿ ಭಾರತ 192 ರನ್ ಕಲೆ ಹಾಕಿತ್ತು. ನಾಲ್ಕನೇ ಸ್ಥಾನದಲ್ಲಿ 2007ರಲ್ಲಿ ಡರ್ಬನ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯವಿದ್ದು, ಇಲ್ಲಿ ಭಾರತ 188ರನ್ ಕಲೆಹಾಕಿತ್ತು.
ಇದನ್ನೂ ಓದಿ: T20 World Cup: ಸೆಮಿಫೈನಲ್ ಗೆ ಹೋಗಲು ಕೊಹ್ಲಿ ಮುಂದೆ 2 ಸವಾಲು; ಪವಾಡ ನಡೆಯಬೇಕು!