ಟಿ-20 ವಿಶ್ವಕಪ್: ಭಾರತದ ಮುಂದಿರುವ ಲೆಕ್ಕಾಚಾರ; ನೆಟ್ ರನ್ ರೇಟ್ ಗುಂಗಿನಲ್ಲಿ ಕೊಹ್ಲಿ ಪಡೆ!

2021ರ ಟಿ-20 ವಿಶ್ವಕಪ್ ಟೂರ್ನಿ ರೋಚಕ ತಿರುವು ಪಡೆದುಕೊಂಂಡಿದೆ. ಸ್ಕಾಟ್ಲೆಂಡ್ ವಿರುದ್ಧ ಭಾರತದ ಅತೀ ದೊಡ್ಡ ಅಂತರದ ಗೆಲುವಿನೊಂದಿಗೆ ಗ್ರುಪ್-2ರ ಪಾಯಿಂಟ್ ಟೇಬಲ್ ನಲ್ಲಿ ಬಿಗ್ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.
ಟೀಂ ಇಂಡಿಯಾ
ಟೀಂ ಇಂಡಿಯಾ

ಬೆಂಗಳೂರು: 2021ರ ಟಿ-20 ವಿಶ್ವಕಪ್ ಟೂರ್ನಿ ರೋಚಕ ತಿರುವು ಪಡೆದುಕೊಂಂಡಿದೆ. ಸ್ಕಾಟ್ಲೆಂಡ್ ವಿರುದ್ಧ ಭಾರತದ ಅತೀ ದೊಡ್ಡ ಅಂತರದ ಗೆಲುವಿನೊಂದಿಗೆ ಗ್ರುಪ್-2ರ ಪಾಯಿಂಟ್ ಟೇಬಲ್ ನಲ್ಲಿ ಬಿಗ್ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಪಾಕಿಸ್ತಾನ ಕ್ರಿಕೆಟ್ ತಂಡ ಮುಂದಿನ ಹಂತಕ್ಕೆ ಜಿಗಿದಿದೆ. ಆದ್ರೆ, 2ನೇ ತಂಡವಾಗಿ ಗ್ರುಪ್-2ರಿಂದ ಸೆಮಿಫೈನಲ್ ಗೆ ಏರುವ ತಂಡದ ಹೆಸರು ಇನ್ನೂ ಸಸ್ಪೆನ್ಸ್ ಆಗಿಯೇ ಉಳಿದಿದೆ. ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಭಾರತ ಮೂರು ತಂಡಗಳು ಸೆಮಿಫೈನಲ್ ಗೆ ಲಗ್ಗೆ ಹಾಕುವ ಕನಸು ಕಾಣುತ್ತಿವೆ. ಅದರಲ್ಲಿ ಯಾವ ತಂಡ ಯಶಸ್ವಿಯಾಗುತ್ತದೆ ಅನ್ನೋದು ಕುತೂಹಲ ಕೆರಳಿಸಿದ್ದು, ನಾಳೆ ನಡೆಯುವ ಅಫ್ಘಾನಿಸ್ತಾನ ಹಾಗೂ ನ್ಯೂಜಿಲೆಂಡ್ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಮಧ್ಯೆ ಭಾರತದ ಹಾದಿ ಅತ್ಯಂತ ಕಠಿಣವಾಗಿದ್ದು, ಕಿವೀಸ್ ವಿರುದ್ಧ ಅಫ್ಘನ್ನರು ಗೆದ್ದರೆ ಮಾತ್ರ ಭಾರತಕ್ಕೆ ಉಳಿಗಾಲ. ಇಲ್ಲದಿದ್ದರೆ ಗಂಟುಮೂಟೆ ಕಟ್ಟಿಕೊಂಡು ಮನೆಗೆ ಹಿಂತಿರಗಬೇಕಾಗುತ್ತದೆ.

ಭಾರತದ ಮುಂದಿರುವ ಲೆಕ್ಕಾಚಾರ!
ಎರಡು ಅಬ್ಬರದ ವಿಜಯಗಳ ನಂತರ ಟೀಮ್ ಇಂಡಿಯಾದ ನೆಟ್ ರನ್ ರೇಟ್ ಉತ್ತಮವಾಗಿದೆ, ಕೊಹ್ಲಿ ಪಡೆಯ ಸೆಮಿಫೈನಲ್ ಹಾದಿಯ ಕನಸು ಚಿಗುರೊಡಿದಿದೆ.

ಟೀಂ ಇಂಡಿಯಾ ಸ್ಕಾಟ್ಲೆಂಡ್ ಅನ್ನು ಕೇವಲ 85 ರನ್‌ಗಳಿಗೆ ಆಲೌಟ್ ಮಾಡಿತ್ತು. ನ್ಯೂಜಿಲೆಂಡ್ ನ ನೆಟ್ ರನ್ ರೇಟ್ ಅನ್ನು ಹಿಂದಿಕ್ಕಲು ಭಾರತ 53 ಎಸೆತಗಳಲ್ಲಿ ಗುರಿಯನ್ನು ದಾಟಬೇಕಾಗಿತ್ತು, ಅಲ್ಲದೆ, ಅಫ್ಘಾನಿಸ್ತಾನದ ನೆಟ್ ರನ್ ರೇಟ್ ಹಿಂದಿಕ್ಕಲು 43 ಎಸೆತಗಳಲ್ಲಿ ಭಾರತ ಗೆಲುವು ಸಾಧಿಸಬೇಕಿತ್ತು. ಅದರಂತೆ ಭಾರತೀಯ ಆಟಗಾರರು ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಕೇವಲ 39 ಎಸೆತಗಳಲ್ಲಿ ಪೂರ್ಣಗೊಳಿಸಿ ಭಾರಿ ಅಂತರದ ಗೆಲುವನ್ನು ಪಡೆಯಿತು.

ಸ್ಕಾಟ್ಲೆಂಡ್ ವಿರುದ್ಧದ ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಗ್ರೂಪ್ 2ರ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತಲುಪಿದೆ. ವಿಶೇಷವೆಂದರೆ ಭಾರತದ ನೆಟ್ ರನ್ ರೇಟ್ +1.619 ಆಗಿದ್ದು, ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್‌ಗಿಂತ ಉತ್ತಮವಾಗಿದೆ. ಆದ್ರೆ ಪಾಯಿಂಟ್ ಟೇಬಲ್ ನಲ್ಲಿ ಭಾರತ 3ನೇ ಸ್ಥಾನದಲ್ಲಿದ್ದು, ನ್ಯೂಜಿಲೆಂಡ್ ಗಿಂತ 2 ಅಂಕ ಹಿಂದಿದೆ.
ಈಗ ಟೀಂ ಇಂಡಿಯಾ ಸೆಮಿಫೈನಲ್ ತಲುಪಬೇಕಾದರೆ, ನವೆಂಬರ್ 8ರಂದು ನಡೆಯಲಿರುವ ನಮೀಬಿಯಾ ವಿರುದ್ಧದ ಪಂದ್ಯವನ್ನು ಕೂಡ ದೊಡ್ಡ ಅಂತರದಿಂದ ಗೆಲ್ಲಬೇಕಿದೆ. ಆದರೆ ನಾಳೆ ಮಧ್ಯಾಹ್ನ 2:30ಕ್ಕೆ ಅಫ್ಘಾನಿಸ್ತಾನ ಹೇಗಾದ್ರೂ ಮಾಡಿ ನ್ಯೂಜಿಲೆಂಡ್ ಅನ್ನು ಸೋಲಿಸಿದರೆ ಭಾರತದ ಸೆಮಿಫೈನಲ್ ಹಾದಿ ಸುಲಭವಾಗಲಿದೆ.

ಭಾರತ ಸೆಮಿಫೈನಲ್ ತಲುಪಲು ಹೇಗೆ ಸಾಧ್ಯ?
- ನಮೀಬಿಯಾ ವಿರುದ್ಧ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಬೇಕು
- ನಾಳಿನ ಪಂದ್ಯದಲ್ಲಿ ನ್ಯೂಜಿಲೆಂಡ್, ಅಫ್ಘಾನಿಸ್ತಾನ ವಿರುದ್ಧ ಸೋಲಬೇಕು
- ಇದು ಸಂಭವಿಸಿದಲ್ಲಿ 3 ತಂಡಗಳು 6 ಅಂಕ ಪಡೆದುಕೊಳ್ಳುತ್ತವೆ.
- ಆಗ ನೆಟ್ ರನ್ ರೇಟ್ ಆಧಾರದಲ್ಲಿ ಭಾರತಕ್ಕೆ ಲಾಭವಾಗಲಿದ್ದು, ಬ್ಲ್ಯೂ ಬಾಯ್ಸ್ ಸೆಮಿಫೈನಲ್ ಹಾದಿ ಸುಗಮವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com