ಟಿ-20 ವಿಶ್ವಕಪ್: ನ್ಯೂಜಿಲೆಂಡ್ ಗೆ ಎಚ್ಚರಿಕೆ ಕೊಟ್ಟ ಶೋಯೆಬ್ ಅಖ್ತರ್!

ಟೀಮ್ ಇಂಡಿಯಾ ಸತತ ಎರಡು ಪಂದ್ಯಗಳನ್ನು ಗೆದ್ದ ಮೇಲೆ ಪಾಕಿಸ್ತಾನಕ್ಕೆ ಜ್ವರ ಬಂದಂತಾಗಿದೆ. ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದ ಬಳಿಕ ಟೂರ್ನಿಯಲ್ಲಿ ಭಾರತ ವಾಪಸ್ ಆಗುವ ಲಕ್ಷಣ ಗೋಚರವಾಗುತ್ತಿವೆ.
ಶೋಯೆಬ್ ಅಖ್ತರ್
ಶೋಯೆಬ್ ಅಖ್ತರ್
Updated on

ಬೆಂಗಳೂರು: ಟೀಮ್ ಇಂಡಿಯಾ ಸತತ ಎರಡು ಪಂದ್ಯಗಳನ್ನು ಗೆದ್ದ ಮೇಲೆ ಪಾಕಿಸ್ತಾನಕ್ಕೆ ಜ್ವರ ಬಂದಂತಾಗಿದೆ. ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದ ಬಳಿಕ ಟೂರ್ನಿಯಲ್ಲಿ ಭಾರತ ವಾಪಸ್ ಆಗುವ ಲಕ್ಷಣ ಗೋಚರವಾಗುತ್ತಿವೆ. ಶುಕ್ರವಾರ ಭಾರತದ ಅದ್ಭುತ ಗೆಲುವು ಪಾಕಿಸ್ತಾನ ಕ್ರಿಕೆಟಿಗರ ನಿದ್ದೆಗೆಡಿಸಿದೆ.

ಈ ಹಿನ್ನೆಲೆಯಲ್ಲಿ ನಾಳಿನ ಅಫ್ಘಾನಿಸ್ತಾನ ವಿರುದ್ಧ ಆಡಲಿರುವ ನ್ಯೂಜಿಲೆಂಡ್ ತಂಡದ ಆಟಗಾರರನ್ನು ಎಚ್ಚರಿಸುವ ಕಾರ್ಯಕ್ಕೆ ಪಾಕಿಸ್ತಾನಿಯರು ಕೈ ಹಾಕಿದ್ದಾರೆ.

ಪಾಕಿಸ್ತಾನ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ತನ್ನ ಯುಟ್ಯೂಬ್ ಚಾನೆಲ್ ನಲ್ಲಿ ನ್ಯೂಜಿಲೆಂಡ್ ಗೆ ಎಚ್ಚರಿಕೆಯೊಂದನ್ನು ಕೊಟ್ಟಿದ್ದಾರೆ. " ನಾಳೆ ಅಫ್ಘಾನಿಸ್ತಾನ ವಿರುದ್ಧ ನಡೆಯುವ ಪಂದ್ಯದಲ್ಲಿ ನ್ಯೂಜಿಲೆಂಡ್ ಸೋತರೆ, ನಂತರ ಬಹಳಷ್ಟು ಪ್ರಶ್ನೆಗಳು ಉದ್ಭವವಾಗಲಿವೆ. ನಾನು ನಿಮಗೆ ಈಗಲೇ ಇದನ್ನು ಎಚ್ಚರಿಸುತ್ತಿದ್ದೇನೆ. ನನಗೆ ಭಯ ಏನೆಂದ್ರೆ ಸೋಷಿಯಲ್ ಮೀಡಿಯಾದ ಟಾಪ್ ಟ್ರೆಂಡಿಂಗ್ ನಲ್ಲಿ ಹೊಸ ವಿಚಾರವವೊಂದು ಹುಟ್ಟಿಕೊಳ್ಳಲಿದೆ. ಅಲ್ಲದೆ ನಾನು ಯಾವುದೇ ವಿವಾದ ಸೃಷ್ಟಿಸಲು ಬಯಸುವುದಿಲ್ಲ" ಅನ್ನೋ ಎಚ್ಚರಿಕೆ ಸಂಗತಿಗಳನ್ನು ನ್ಯೂಜಿಲೆಂಡ್ ಮುಂದೆ ಶೋಯೆಬ್ ಅಖ್ತರ್ ಇಟ್ಟಿದ್ದಾರೆ.

"ನ್ಯೂಜಿಲೆಂಡ್ ಬಗ್ಗೆ ಪಾಕಿಸ್ತಾನಿಯರಿಗೆ ಒಳ್ಳೆಯ ಭಾವನೆಗಳಿವೆ. ಅಫ್ಘಾನಿಸ್ತಾನವನ್ನು ಸೋಲಿಸಲು ನ್ಯೂಜಿಲೆಂಡ್ ಉತ್ತಮ ತಂಡ ಅನ್ನೋದು ನನ್ನ ಭಾವನೆ. ಒಂದು ವೇಳೆ ಚೆನ್ನಾಗಿ ಆಡದಿದ್ದರೆ ಸಮಸ್ಯೆಯಾಗಲಿದೆ. ನಂತರ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಚರ್ಚೆ, ನಿಂದನೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಭಾರತದ ಆಗಮನ ಈ ಟೂರ್ನಿಗೆ ಜೀವ ತಂದಿದೆ. ಮತ್ತೊಮ್ಮೆ ಭಾರತ-ಪಾಕ್ ಪಂದ್ಯ ನಡೆಯುವ ಸಾಧ್ಯತೆ ಇದೆ. ಇದನ್ನು ಇಡೀ ಜಗತ್ತು ನೋಡಲು ಕಾತುರವಾಗಿದೆ" ಅಂತಾ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com