ಸಿಡ್ನಿ ಟೆಸ್ಟ್ ಹೀರೋ ಹನುಮ ವಿಹಾರಿ ಮರೆತ ಆಯ್ಕೆ ಸಮಿತಿ ವಿರುದ್ಧ ಅಭಿಮಾನಿಗಳ ಆಕ್ರೋಶ, ಸ್ಪಷ್ಟನೆ ಕೊಟ್ಟ ಬಿಸಿಸಿಐ ಹೇಳಿದ್ದೇನು?
ನ್ಯೂಜಿಲೆಂಡ್ ತಂಡದ ಭಾರತ ಪ್ರವಾಸದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ತಂಡ ಪ್ರಕಟಿಸಿದ್ದು, ತಂಡದಿಂದ ಸಿಡ್ನಿ ಟೆಸ್ಟ್ ಹೀರೋ ಹನುಮವಿಹಾರಿಯನ್ನು ಕೈ ಬಿಟ್ಟಿದ್ದಕ್ಕೆ ಅಭಿಮಾನಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Published: 12th November 2021 03:29 PM | Last Updated: 12th November 2021 03:29 PM | A+A A-

ಹನುಮ ವಿಹಾರಿ
ನವದೆಹಲಿ: ನ್ಯೂಜಿಲೆಂಡ್ ತಂಡದ ಭಾರತ ಪ್ರವಾಸದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ತಂಡ ಪ್ರಕಟಿಸಿದ್ದು, ತಂಡದಿಂದ ಸಿಡ್ನಿ ಟೆಸ್ಟ್ ಹೀರೋ ಹನುಮವಿಹಾರಿಯನ್ನು ಕೈ ಬಿಟ್ಟಿದ್ದಕ್ಕೆ ಅಭಿಮಾನಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ICYMI: Here's India's squad for the 2-match #INDvNZ Test series #TeamIndia pic.twitter.com/gQcaKa1YWS
— BCCI (@BCCI) November 12, 2021
ಹೌದು.. ಈ ಹಿಂದೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತಕ್ಕೆ ಐತಿಹಾಸಿಕ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಹನುಮವಿಹಾರಿಯನ್ನು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡದೇ ಇರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಕರುಣ್ ನಾಯರ್ ಗೆ ಆದ ಪರಿಸ್ಥಿತಿಯೇ ಹನುಮ ವಿಹಾರಿಗೂ ಮಾಡಲಾಗುತ್ತಿದೆ. ಅವರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಟ್ವಿಟರ್ ನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ: ರೋಹಿತ್ ಶರ್ಮಾ ಔಟ್, ಮೊದಲ ಪಂದ್ಯ ಕೊಹ್ಲಿಗೆ ವಿಶ್ರಾಂತಿ
•Made Some crucial runs in New Zealand when all Batters struggling
— ABHISHEK BAMNAVAT
•Made Maiden century in WI when team needed
• Draw a historical Sydeny test with Ash
Hanuma Vihari deserved chance if he is fit in test squad why dropped?
Also he only play in overseas (difficult) conditions pic.twitter.com/SyOFGpatUU