ಅತೀ ಹೆಚ್ಚು 5 ವಿಕೆಟ್ ಗೊಂಚಲು: ಟಾಮ್ ರಿಚರ್ಡಸನ್, ರೋಡ್ನಿ ಹಾಗ್ ದಾಖಲೆ ಸರಿಗಟ್ಟಿದ ಅಕ್ಷರ್ ಪಟೇಲ್
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಪಡೆಯನ್ನು ಇನ್ನಿಲ್ಲದಂತೆ ಕಾಡಿದ ಭಾರತದ ಅಕ್ಷರ್ ಪಟೇಲ್ ಕ್ರಿಕೆಟ್ ದಂತಕಥೆಗಳಾದ ಟಾಮ್ ರಿಚರ್ಡಸನ್, ರೋಡ್ನಿ ಹಾಗ್ ಅವರ ದಾಖಲೆಗಳನ್ನು ಸರಿಗಟ್ಟಿದ್ದಾರೆ.
Published: 27th November 2021 06:46 PM | Last Updated: 27th November 2021 06:46 PM | A+A A-

ಅಕ್ಷರ್ ಪಟೇಲ್
ಕಾನ್ಪುರ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಪಡೆಯನ್ನು ಇನ್ನಿಲ್ಲದಂತೆ ಕಾಡಿದ ಭಾರತದ ಅಕ್ಷರ್ ಪಟೇಲ್ ಕ್ರಿಕೆಟ್ ದಂತಕಥೆಗಳಾದ ಟಾಮ್ ರಿಚರ್ಡಸನ್, ರೋಡ್ನಿ ಹಾಗ್ ಅವರ ದಾಖಲೆಗಳನ್ನು ಸರಿಗಟ್ಟಿದ್ದಾರೆ.
Stumps on Day 3 of the 1st Test.#TeamIndia lose the wicket of Shubman Gill in the second innings. Lead by 63 runs.
— BCCI (@BCCI) November 27, 2021
Scorecard - https://t.co/WRsJCUhS2d #INDvNZ @Paytm pic.twitter.com/d4uwQrosZR
ಕಾನ್ಪುರದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಪಡೆಯ ಪ್ರಮುಖ ಐದು ವಿಕೆಟ್ ಗಳನ್ನು ಪಡೆದ ಅಕ್ಸರ್ ಪಟೇಲ್ ಆ ಮೂಲಕ 6ನೇ ಬಾರಿಗೆ 5 ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದರು. ಅಂತೆಯೇ ಅತೀ ಹೆಚ್ಚು ಬಾರಿ 5 ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಅಕ್ಷರ್ ಪಟೇಲ್ ಜಂಟಿ 2ನೇ ಸ್ಥಾನಕ್ಕೇರಿದ್ದಾರೆ.
ಈ ಪಟ್ಟಿಯಲ್ಲಿ ಮೊದಲ ನಾಲ್ತು ಟೆಸ್ಟ್ ಗಳಲ್ಲಿ ಹೆಚ್ಚುಬಾರಿ ಐದು ವಿಕೆಟ್ ಗೊಂಚಲು ಪಡೆದ ಬೌಲರ್ ಗಳಿದ್ದು. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಚಾರ್ಲಿ ಟರ್ನರ್ ಅಗ್ರ ಸ್ಥಾನದಲ್ಲಿದ್ದಾರೆ. ಚಾರ್ಲಿ ಒಟ್ಟು 6 ಬಾರಿ 5 ವಿಕೆಟ್ ಗಳ ಗೊಂಚಲು ಪಡೆದಿದ್ದಾರೆ. ಅಂತೆಯೇ 2ನೇ ಸ್ಥಾನದಲ್ಲಿ ಜಂಟಿಯಾಗಿ ಟಾಮ್ ರಿಚರ್ಡ್ಸನ್, ರೋಡ್ನಿ ಹಾಗ್ ಮತ್ತು ಅಕ್ಷರ್ ಪಟೇಲ್ ಇದ್ದು ಈ ಮೂರೂ ಆಟಗಾರರು 5 ಬಾರಿ 5 ವಿಕೆಟ್ ಗಳ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದ ವಸೀಂ ಅಕ್ರಂ ದಾಖಲೆ ಮುರಿದ ಆರ್ ಅಶ್ವಿನ್, ಭಜ್ಜಿ ದಾಖಲೆ ಸರಿಗಟ್ಟಲು ಸಮಯ ಸನ್ನಿಹಿತ!
3ನೇ ಸ್ಥಾನದಲ್ಲಿ ಫ್ರೆಡ್ ಸ್ಪೋಫೋರ್ಥ್, ಸಿಡ್ ಬರ್ನಸ್, ನಿಕ್ ಕುಕ್, ವರ್ನನ್ ಫಿಲಾಂಡರ್ ಇದ್ದು ಈ ನಾಲ್ಕೂ ಆಟಗಾರರೂ 4 ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: ಭಾರತ vs ನ್ಯೂಜಿಲೆಂಡ್ ಮೊದಲ ಟೆಸ್ಟ್: ಕಿವೀಸ್ ಬ್ಯಾಟ್ಸ್ ಮನ್ ಗೆ 3 ಬಾರಿ ಜೀವದಾನ, ದಾಖಲೆ ನಿರ್ಮಾಣ
ಭಾರತದ ಪರ ಎಲ್ ಶಿವರಾಮಕೃಷ್ಣನ್ ಮತ್ತು ನರೇಂದ್ರ ಹಿರ್ವಾನಿ ತಲಾ 3 ಬಾರಿ 5 ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ.