ಟಿ-20 ವಿಶ್ವಕಪ್: ಪಾಕ್ ವಿರುದ್ಧ ಭಾರತ ಪಂದ್ಯ ಆಡದಿದ್ದರೆ ಏನಾಗುತ್ತೆ?

ಟಿ-20 ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಪಂದ್ಯ ಆಡಬಾರದೆಂಬ ಬೇಡಿಕೆ ಹೆಚ್ಚಾಗ ತೊಡಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದನೆ, ಕಾಶ್ಮೀರಿಗಳಲ್ಲದ ಭಾರತೀಯರನ್ನು ಕಣಿವೆಯಲ್ಲಿ ಹತ್ಯೆ ಮಾಡುತ್ತಿರುವುದರಿಂದ ಈ ಬೇಡಿಕೆ ಬಲ ಪಡೆಯತೊಡಗಿದೆ.
ಭಾರತ- ಪಾಕಿಸ್ತಾನ ತಂಡದ ಆಟಗಾರರ ಚಿತ್ರ
ಭಾರತ- ಪಾಕಿಸ್ತಾನ ತಂಡದ ಆಟಗಾರರ ಚಿತ್ರ

ನವದೆಹಲಿ: ಟಿ-20 ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಪಂದ್ಯ ಆಡಬಾರದೆಂಬ ಬೇಡಿಕೆ ಹೆಚ್ಚಾಗ ತೊಡಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದನೆ, ಕಾಶ್ಮೀರಿಗಳಲ್ಲದ ಭಾರತೀಯರನ್ನು ಕಣಿವೆಯಲ್ಲಿ ಹತ್ಯೆ ಮಾಡುತ್ತಿರುವುದರಿಂದ ಈ ಬೇಡಿಕೆ ಬಲ ಪಡೆಯತೊಡಗಿದೆ. 

ಜಮ್ಮು ಮತ್ತು ಕಾಶ್ಮೀರದಲ್ಲಿ ಅಲ್ಪಸಂಖ್ಯಾತರು ಹಾಗೂ ಯೋಧರ ಹತ್ಯೆ ನಡೆಯುತ್ತಿದೆ. ಇದರಿಂದ ಆಕ್ರೋಶಗೊಂಡಿರುವ ಭಾರತೀಯರು,  ಟಿ-20 ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಭಾರತ ಪಂದ್ಯ ಆಡಬಾರೆಂದು ಕೇಂದ್ರ ಸರ್ಕಾರದ  ಮೇಲೆ ಒತ್ತಡ ಹಾಕುತ್ತಿದ್ದಾರೆ. 

ಒಂದು ವೇಳೆ ಭಯೋತ್ಪಾದನೆಯಿಂದಾಗಿ ಪಾಕಿಸ್ತಾನದ ವಿರುದ್ಧ ಪಂದ್ಯ ಆಡಲು ನಿರಾಕರಿಸಿದರೆ, ಭಾರತಕ್ಕೆ ಹೆಚ್ಚು ತೊಂದರೆ ಹಾಗೂ ನಷ್ಟ ಅನುಭವಿಸಬೇಕಾಗುತ್ತದೆ. ಪಂದ್ಯ ಆಡದೇ ಇದ್ದರೆ ಪಾಕಿಸ್ತಾನ ಯಾವುದೇ ಶ್ರಮವಿಲ್ಲದೆ 2 ಅಂಕ ಪಡೆದುಕೊಳ್ಳುತ್ತದೆ. ಆದರೆ, ಭಾರತಕ್ಕೆ ಯಾವುದೇ ರೀತಿಯ ಅಂಕ ದೊರೆಯುವುದಿಲ್ಲ. ಇದರಿಂದ ಪಾಕಿಸ್ತಾನಕ್ಕೆ ಸೆಮಿ ಫೈನಲ್ ಹಂತ ತಲುಪುವ ಸಾಧ್ಯತೆಗಳು ಹೆಚ್ಚಾಗುತ್ತದೆ. ಇನ್ನೊಂದೆಡೆ ಟೀಂ ಇಂಡಿಯಾ ಸೆಮಿ ಫೈನಲ್, ಫೈನಲ್ ತಲುಪುವುದು ಕಠಿಣವಾಗುತ್ತದೆ ಎಂದು ಸುನೀಲ್ ಗವಾಸ್ಕರ್ ಇಂಡಿಯಾ ಟುಡೆಗೆ ಹೇಳಿದ್ದಾರೆ.

ವಿಶ್ವಕಪ್ ನಲ್ಲಿ ಯಾವಾಗಲೂ ಭಾರತ ವಿರುದ್ಧ ಪಾಕಿಸ್ತಾನ ಸೋತಿದೆ. ಆದ್ದರಿಂದ ಪಾಕಿಸ್ತಾನದಿಂದ ಸೋತಾಗ ಎರಡು ಅಂಕ ಕಳೆದುಕೊಳ್ಳುತ್ತೇವೆ. ಅವರಿಗೆ ಈ ಟೂರ್ನಿಯಲ್ಲಿ ಅನುಕೂಲ ಮಾಡಿಕೊಡಬಾರದು. ನಾನು ದೇಶದ ಜೊತೆಗೆ ಇರ್ತಿನಿ.  ಸರ್ಕಾರ ಏನು ನಿರ್ಧಾರ ಕೈಗೊಂಡರೂ, ಅದರೊಂದಿಗೆ ನಾನು ಇರುತ್ತೇನೆ. ಒಂದು ದೇಶಕ್ಕೆ ಬೇಕಾದರೆ ಪಾಕಿಸ್ತಾನ ವಿರುದ್ಧ ನಾವು ಆಡೋದೆ ಬೇಡ ಎಂದು ಅವರು ಪ್ರತಿಪಾದಿಸಿದ್ದಾರೆ. 

2012 ರಿಂದಲೂ ಭಾರತ  ಮತ್ತು ಪಾಕಿಸ್ತಾನ ನಡುವಣ ದ್ವಿಪಕ್ಷೀಯ ಕ್ರಿಕೆಟ್ ಒಪ್ಪಂದವನ್ನು  ನಿರ್ಬಂಧಿಸಲಾಗಿದೆ. 2007ರಲ್ಲಿ ಪಾಕಿಸ್ತಾನ ವಿರುದ್ಧ ಕೊನೆಯ ಪೂರ್ಣ ಸರಣಿಯನ್ನು ಭಾರತ ಆಡಿತ್ತು.  ಭಾರತ ನಡುವಣ ಒಪ್ಪಂದವನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಥಮ ಕ್ರಮ ಕೈಗೊಳ್ಳಬೇಕೆಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಗವಾಸ್ಕರ್ ಒತ್ತಾಯಿಸಿದ್ದಾರೆ. 

ಜಮ್ಮು-ಕಾಶ್ಮೀರದಲ್ಲಿ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಉಗ್ರರ ಗುಂಪಿನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.  ಪಾಕಿಸ್ತಾನ ಹಾಗೂ ಭಾರತ ವಿರುದ್ಧ ಟಿ-20 ವಿಶ್ವಕಪ್ ಪಂದ್ಯ ಇದ್ದು, ಐಸಿಸಿ ನಿಯಮಗಳ ಪ್ರಕಾರ, ಯಾರ ವಿರುದ್ಧವೂ ಪಂದ್ಯ ಆಡದೆ ನಿರಾಕರಿಸಲು ಸಾಧ್ಯವಿಲ್ಲ. ಐಸಿಸಿ ಟೂರ್ನಮೆಂಟ್ ನಲ್ಲಿ ನಿಗದಿಪಡಿಸಿದ  ತಂಡಗಳೊಂದಿಗೆ ಆಡಬೇಕಾಗುತ್ತದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com