ಟಿ-20 ವಿಶ್ವಕಪ್: ರೋಹಿತ್- ರಾಹುಲ್ ಓಪನಿಂಗ್; ‘ನಾನು 3ನೇ ಸ್ಥಾನದಲ್ಲಿ ಆಡುತ್ತೇನೆ’- ಕೊಹ್ಲಿ
ಭಾರತದ ಪರ ಆರಂಭಿಕ ಜೋಡಿಯಾಗಿ ಕಣಕ್ಕಿಳಿಯವವರ ಹೆಸರು ಕೊನೆಗೂ ಬಹಿರಂಗವಾಗಿದೆ. ನಿನ್ನೆ ಇಂಗ್ಲೆಂಡ್ ವಿರುದ್ಧ ನಡೆದ ಅಭ್ಯಾಸ ಪಂದ್ಯದ ನಂತರ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದು, ನಾನು 3ನೇ ಸ್ಥಾನದಲ್ಲಿ ಕಣಕ್ಕಿಳಿಯುತ್ತೇನೆ. ಹಾಗೂ ಕೆ.ಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಅಂತಾ ತಿಳಿಸಿದರು.
Published: 19th October 2021 12:21 PM | Last Updated: 20th October 2021 01:31 PM | A+A A-

ವಿರಾಟ್ ಕೊಹ್ಲಿ
ಯುಎಇ: ಭಾರತದ ಪರ ಆರಂಭಿಕ ಜೋಡಿಯಾಗಿ ಕಣಕ್ಕಿಳಿಯವವರ ಹೆಸರು ಕೊನೆಗೂ ಬಹಿರಂಗವಾಗಿದೆ. ನಿನ್ನೆ ಇಂಗ್ಲೆಂಡ್ ವಿರುದ್ಧ ನಡೆದ ಅಭ್ಯಾಸ ಪಂದ್ಯದ ನಂತರ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದು, ನಾನು 3ನೇ ಸ್ಥಾನದಲ್ಲಿ ಕಣಕ್ಕಿಳಿಯುತ್ತೇನೆ. ಹಾಗೂ ಕೆ.ಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಅಂತಾ ತಿಳಿಸಿದರು.
ನಿನ್ನೆ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ ಗೆಲುವಿನ ಮೂಲಕ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಆರಂಭಿಕನಾಗಿ ಕ್ರೀಜ್ ಗೆ ಇಳಿದ ಕೆ.ಎಲ್.ರಾಹುಲ್, ಅರ್ಧ ಶತಕ ಗಳಿಸಿ ಗಮನ ಸೆಳೆದರು. ಮತ್ತೊಂದೆಡೆ ಇಶಾನ್ ಕಿಶನ್, ಭರ್ಜರಿ ಬ್ಯಾಟಿಂಗ್ ನಡೆಸಿ ವಾರ್ಮ್ ಅಪ್ ಪಂದ್ಯ ಗೆಲ್ಲುವ ಮೂಲಕ ತಂಡ ಆತ್ಮವಿಶ್ವಾಸವನ್ನು ಹೆಚ್ಚಿಸಿದರು.
ಇದನ್ನೂ ಓದಿ: ಟಿ20 ವಿಶ್ವಕಪ್: ಎಂಎಸ್ ಧೋನಿ ಇಲ್ಲದ್ದಕ್ಕೆ ಫಿನಿಶರ್ ಭಾರ ನನ್ನ ಮೇಲಿದೆ - ಹಾರ್ದಿಕ್ ಪಾಂಡ್ಯ
ಆದ್ರೆ, ಕಳೆದ ಹಲವು ದಿನಗಳಿಂದ ರೋಹಿತ್ ಶರ್ಮಾ ಜೊತೆಗೆ ಯಾರು ಇನ್ನಿಂಗ್ಸ್ ಕಟ್ಟುತ್ತಾರೆ ಅನ್ನೋದು ತೀವ್ರ ಕುತೂಹಲ ಕೆರಳಿಸಿತ್ತು. ಉತ್ತಮ ಓಪನರ್ ಗಳಾಗಿರುವ ಕೆ.ಎಲ್.ರಾಹುಲ್ ಮತ್ತು ಇಶಾನ್ ಕಿಶನ್ ಇಬ್ಬರಲ್ಲಿ ಯಾರು ಅನ್ನೋ ಪ್ರಶ್ನೆ ಉದ್ಭವಾಗಿತ್ತು. ಒಂದೆಡೆ ನಾನೇ ಇನ್ನಿಂಗ್ಸ್ ಆರಂಭಿಸುತ್ತೇನೆ ಅಂತಾ ವಿರಾಟ್ ಕೊಹ್ಲಿ ತಿಳಿಸಿದ್ದರು. ಆದರೆ, ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯದ ನಂತರ ಈ ಪ್ರಶ್ನೆಗೆ ಉತ್ತರಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಪಂದ್ಯದ ನಂತರ ಮಾತನಾಡಿದ ವಿರಾಟ್, ನಾನು ಈ ಬಾರಿ ಇನ್ನಿಂಗ್ಸ್ ಆರಂಭ ಮಾಡಲ್ಲ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದೇನೆ. ರೋಹಿತ್ ಶರ್ಮಾ ಜೊತೆಗೆ ಕೆ.ಎಲ್.ರಾಹುಲ್ ಆರಂಭಿಕವಾಗಿ ಇನ್ನಿಂಗ್ಸ್ ಕಟ್ಟಲಿದ್ದಾರೆ ಅಂತಾ ತಿಳಿಸಿದರು.