Online Desk
ಟಿ20 ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಇಂದು ಶನಿವಾರ ವೆಸ್ಟ್ ಇಂಡೀಸ್- ಇಂಗ್ಲೆಂಡ್ ನಡುವಣ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಹೀನಾಯ ಸೋಲು ಕಂಡಿದೆ. ಪಂದ್ಯದ ಶುರುವಿನಲ್ಲಿ ಟಾಸ್ ಸೋತ ವೆಸ್ಟ್ ಇಂಡೀಸ್ ತಂಡ ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟಿತ್ತು.
ಇದನ್ನೂ ಓದಿ: ಟೀಂ ಇಂಡಿಯಾ ಈ ವೇಗಿ ವಿಶ್ವದ ಅತ್ಯುತ್ತಮ ಟಿ20 ಬೌಲರ್: ಪಾಕ್ ಮಾಜಿ ವೇಗಿ ಹೊಗಳಿದ್ದು ಯಾರನ್ನ ಗೊತ್ತ?
ಇಂಗ್ಲೆಂಡ್ ತಂಡದ ಬೌಲರ್ ಗಳ ದಾಳಿಗೆ ತಿಣುಕಾಡಿದ ವೆಸ್ಟ್ ಇಂಡೀಸ್ ಆಟಗಾರರು ಎರಡಂಕಿ ರನ್ ಗಳಿಸಲೂ ಹರಸಾಹಸ ಪಟ್ಟರು. ಇದರ ಪರಿಣಾಮ 14.2 ಓವರ್ ಗಳಲ್ಲಿ 55 ರನ್ ಗಳಿಸಲಷ್ಟೇ ಶಕ್ತವಾದ ವೆಸ್ಟ್ ಇಂಡೀಸ್ ತಂಡ ಆಲೌಟ್ ಆಯಿತು.
ಇದನ್ನೂ ಓದಿ: ಟಿ20 ವಿಶ್ವಕಪ್: ನಾಳೆ ಭಾರತ-ಪಾಕಿಸ್ತಾನ ಪಂದ್ಯ, ಗೆಲ್ಲೋರು ಯಾರು? ಅಂಕಿ-ಅಂಶ ಏನು ಹೇಳುತ್ತಿವೆ?
ನಂತರ ಬ್ಯಾಟಿಂಗ್ ಗೆ ಬಂದ ಇಂಗ್ಲೆಂಡ್ ತಂಡ ನಾಲ್ಕು ವಿಕೆಟ್ ಕಳೆದುಕೊಂಡು, ಇನ್ನೂ 70 ಬಾಲ್ ಗಳು ಉಳಿದಿರುವಂತೆಯೇ 56 ರನ್ ಗಳಿಸಿ ಗೆಲುವಿನ ನಗೆ ಬೀರಿತು. ವೆಸ್ಟ್ ಇಂಡೀಸ್ ತಂಡದಲ್ಲಿ ಕ್ರಿಸ್ ಗೇಲ್ ಮಾತ್ರವೆ ಎರಡಂಕಿ ರನ್(11) ಗಳಿಸಿದರು.