ಟಿ20 ವಿಶ್ವಕಪ್: ಪಾಕಿಸ್ತಾನ ವಿರುದ್ಧ ಭಾರತಕ್ಕೆ ಹೀನಾಯ ಸೋಲು: ಐತಿಹಾಸಿಕ ಗೆಲುವು ಸಾಧಿಸಿದ ಪಾಕ್

ಟಿ20 ವಿಶ್ವಕಪ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪಾಕಿಸ್ತಾನ ಭಾರತದ ವಿರುದ್ಧ ಮೊದಲ ಗೆಲುವು ದಾಖಲಿಸಿದೆ. ಭಾರತ ನೀಡಿದ 151 ರನ್ ಗಳನ್ನು ಪಾಕ್ ಆರಂಭಿಕ ಜೋಡಿ ಬಾಬರ್- ರಿಜ್ವಾನ್ ಯಶಸ್ವಿಯಾಗಿ ಮುಟ್ಟಿದೆ.
ಪ್ಲೇಯರ್ ಆಫ್ ದಿ ಮ್ಯಾಚ್  ಬೌಲರ್ ಶಹೀನ್ ಶಾ ಅಫ್ರಿದಿ
ಪ್ಲೇಯರ್ ಆಫ್ ದಿ ಮ್ಯಾಚ್ ಬೌಲರ್ ಶಹೀನ್ ಶಾ ಅಫ್ರಿದಿ

ದುಬೈ: ಟಿ20 ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪಾಕಿಸ್ತಾನ ಭಾರತದ ವಿರುದ್ಧ ಮೊದಲ ಗೆಲುವು ದಾಖಲಿಸಿದೆ. ರೋಚಕವಾಗಿಲ್ಲದ ಪಂದ್ಯದಲ್ಲಿ ಪಾಕ್ ನಿರಾಯಾಸವಾಗಿ ಗೆಲುವು ಸಾಧಿಸಿದೆ. ಭಾರತ ನೀಡಿದ 151 ರನ್ ಗಳನ್ನು ಪಾಕ್ ಆರಂಭಿಕ ಜೋಡಿ ಯಶಸ್ವಿಯಾಗಿ ಮುಟ್ಟಿದೆ.

ಮೊದಲ ಓವರಿನಿಂದಲೇ ಆಕ್ರಮಣಕಾರಿ ಆಟ ಶುರು ಮಾಡಿದ್ದ ಬಾಬರ್ ನ ಪಡೆ ಇನ್ನೂ 13 ಬಾಲುಗಳು ಉಳಿದಿರುವಂತೆಯೇ ಗೆಲುವು ದಾಖಲಿಸಿದೆ. ಪಾಕ್ ಕ್ರಿಕೆಟಿಗರ ಒಂದೇ ಒಂದು ವಿಕೆಟ್ ಕೂಡಾ ಭಾರತೀಯ ಕ್ರಿಕೆಟಿಗರಿಗೆ ಸಾಧ್ಯವಾಗಲಿಲ್ಲ. 

ಪಾಕ್ ಆರಂಭಿಕ ಬ್ಯಾಟ್ಸ್ ಮನ್ ಜೋಡಿ ಬಾಬರ್- ರಿಜ್ವಾನ್ ಪಾಕ್ ತಂಡವನ್ನು ಸಮರ್ಥವಾಗಿ ಗೆಲುವಿನ ದಡಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ. 

ಈ ಪಂದ್ಯವನ್ನು ತುದಿಗಾಲಲ್ಲಿ ನಿಂತು ವೀಕ್ಷಿಸುತ್ತಿದ್ದ ಭಾರತೀಯರಿಗೆ ಭಾರತೀಯ ಕ್ರಿಕೆಟಿಗರ ಪ್ರದರ್ಶನದಿಂದ ನಿರಾಸೆಯಾಗಿರುವುದರಲ್ಲಿ ಸಂಶಯವಿಲ್ಲ. 

ಪ್ಲೇಯರ್ ಆಫ್ ದಿ ಮ್ಯಾಚ್ ಗೌರವವನ್ನು ಪಾಕಿಸ್ತಾನದ ವೇಗದ ಬೌಲರ್ ಶಹೀನ್ ಶಾ ಅಫ್ರಿದಿ ತಮ್ಮದಾಗಿಸಿಕೊಂಡಿದ್ದಾರೆ. ನಾಲ್ಕು ಓವರ್ ಬೌಲ್ ಮಾಡಿದ ಅವರು 3 ಪ್ರಮುಖ ವಿಕೆಟ್ ಗಳನ್ನು ಪಡೆಯುವಲ್ಲಿ ಸಫಲರಾದರು.

ಭಾರತದ ಪಾಳೆಯದಲ್ಲಿ ಮೊದಲ ಓವರಿನಲ್ಲಿಯೇ ರೋಹಿತ್ ಶರ್ಮಾ ಡಕ್ ಔಟ್ ಆದರೆ, ಕೆ.ಎಲ್ ರಾಹುಲ್ ಮೂರನೇ ಓವರಿನಲ್ಲಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ನಾಯಕ ವಿರಾಟ್ ಕೊಹ್ಲಿ ಅವರು 57 ರನ್ ದಾಖಲಿಸಿದರೆ ರಿಷಬ್ ಪಂತ್ 39 ರನ್ ಗಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com