ಟಿ20 ವಿಶ್ವಕಪ್: ಭಾರತ-ಪಾಕ್ ಪಂದ್ಯ ನೋಡಲು ಹೋಗಿದ್ದ ಪಾಕ್ ಸಚಿವ ದಿಢೀರ್ ವಾಪಸ್ಸಾಗಿದ್ದೇಕೆ?

ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಇನ್ನೇನು ಕೆಲವೇ ಗಂಟೆಗಳಲ್ಲಿ ಪಂದ್ಯ ಆರಂಭವಾಗಲಿದೆ. ಆದರೆ ಪಂದ್ಯ ನೋಡಲೇಬೇಕು ಅಂತಾ ದುಬೈಗೆ ಹೋಗಿದ್ದ ಸಚಿವರೊಬ್ಬರು ವಾಪಸ್ ಆಗಿರುವ ಅಚ್ಚರಿ ವಿಚಾರ ಹೊರಬಿದ್ದಿದೆ.
ಶೇಕ್ ರಶೀದ್
ಶೇಕ್ ರಶೀದ್

ಇಸ್ಲಾಮಾಬಾದ್: ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಇನ್ನೇನು ಕೆಲವೇ ಗಂಟೆಗಳಲ್ಲಿ ಪಂದ್ಯ ಆರಂಭವಾಗಲಿದೆ. ಆದರೆ ಪಂದ್ಯ ನೋಡಲೇಬೇಕು ಅಂತಾ ದುಬೈಗೆ ಹೋಗಿದ್ದ ಸಚಿವರೊಬ್ಬರು ವಾಪಸ್ ಆಗಿರುವ ಅಚ್ಚರಿ ವಿಚಾರ ಹೊರಬಿದ್ದಿದೆ.

ಪಾಕಿಸ್ತಾನದ ಗೃಹ ಸಚಿವ ಶೇಕ್ ರಶೀದ್ ಪಾಲಿಟಿಕ್ಸ್ ನಲ್ಲಿ ಅಷ್ಟೇ ಜನಪ್ರಿಯ ಆಗಿರೋ ಈ ಪಾಕಿಸ್ತಾನದ ಸಚಿವ ಕ್ರಿಕೆಟ್ ಅಭಿಮಾನಿ ಕೂಡ ಹೌದು. ಭಾರತದ ಮೇಲೆ ದಾಳಿ ಮಾಡುತ್ತೇವೆ. ಅಣು ಬಾಂಬ್ ನಿಂದ ಮ್ಯಾಪ್ ನಲ್ಲಿ ಇಂಡಿಯಾ ಇಲ್ಲದಂತೆ ಮಾಡುತ್ತೇವೆ ಅಂತಾ ಹೇಳಿಕೆ ಕೊಡೋದರ ಮೂಲಕ ಭಾರತದ ಮಾಧ್ಯಮಗಳಲ್ಲಿ ಶೇಖ್ ರಶೀದ್ ಹೆಚ್ಚು ಸುದ್ದಿಯಾಗಿರುತ್ತಾರೆ.

ಈ ಮಧ್ಯೆ ಟೀಂ ಇಂಡಿಯಾ ಹಾಗೂ ಪಾಕ್ ಮಧ್ಯದ ಪಂದ್ಯ ಕಣ್ತುಂಬಿಕೊಳ್ಳಲು ಅಂತಾ ಶೇಕ್ ರಶೀದ್ 2 ದಿನಗಳ ಮೊದಲೇ ದುಬೈಗೆ ಹೋಗಿದ್ದರು. ಆದರೆ ಅವರಿಗೆ ವಿಶ್ವದ ಬ್ಲಾಕ್ ಬಸ್ಟರ್ ಪಂದ್ಯ ನೋಡುವ ಅವಕಾಶ ಇಲ್ಲದಂತಾಗಿದೆ. ಅದಕ್ಕೆ ಕಾರಣ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್.               

ವಿರೋಧ ಪಕ್ಷಗಳು ಮತ್ತು ನಿಷೇಧಿತ ಸಂಘಟನೆಯು ದೇಶದ ಬಹು ನಗರಗಳಲ್ಲಿ ಪ್ರತ್ಯೇಕ ಪ್ರತಿಭಟನೆಗಳನ್ನು ನಡೆಸಿದ್ದು, ಇದರ ಪರಿಣಾಮವಾಗಿ ಇಸ್ಲಾಮಾಬಾದ್, ಲಾಹೋರ್ ಮತ್ತು ರಾವಲ್ಪಿಂಡಿ ಭಾಗಶಃ ಸ್ಥಗಿತಗೊಂಡಿವೆ.

ಪಾಕಿಸ್ತಾನದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ನಿಭಾಯಿಸಲು ದೇಶಕ್ಕೆ ಹಿಂತಿರುಗುವಂತೆ ಪ್ರಧಾನಿ ಆಂತರಿಕ ಸಚಿವರನ್ನು ಒತ್ತಾಯಿಸಿದ್ದು ದೇಶದಲ್ಲಿ ನಡೆಯುತ್ತಿರುವ ಭದ್ರತಾ ಪರಿಸ್ಥಿತಿಯನ್ನು ನಿಭಾಯಿಸಲು ಇಮ್ರಾನ್ ಖಾನ್ ಕರೆ ಮಾಡಿ ಸ್ವದೇಶಕ್ಕೆ ಮರಳುವಂತೆ ಸೂಚಿಸಿದ್ದರು. ಇದ್ದರಿಂದ ಸಚಿವರು ಇಂದು ಶಾರ್ಜಾದಿಂದ ಏರ್‌ಬ್ಲೂ ವಿಮಾನ ಪಿಎ-213 ಮೂಲಕ ಇಸ್ಲಾಮಾಬಾದ್‌ಗೆ ಮರಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com