4ನೇ ಟೆಸ್ಟ್: ಇಂಗ್ಲೆಂಡ್ ಗೆಲುವಿಗೆ 368 ರನ್ ಗುರಿ ನೀಡಿದ ಭಾರತ

ಭರವಸೆಯ ಆಟಗಾರರಾದ ರಿಷಭ್ ಪಂತ್(50) ಹಾಗೂ ಶಾರ್ದೂಲ್ ಠಾಕೂರ್(60) ಅವರು ಬಾರಿಸಿದ ಅರ್ಧಶತಕದ ಬಲದಿಂದ ಟೀಮ್ ಇಂಡಿಯಾ ನಾಲ್ಕನೇ ಟೆಸ್ಟ್ ಗೆಲುವಿಗೆ ಇಂಗ್ಲೆಂಡ್ ತಂಡಕ್ಕೆ 368 ರನ್ ಗಳ ಗುರಿ ನೀಡಿದೆ.
ಶಾರ್ದೂಲ್ ಠಾಕೂರ್
ಶಾರ್ದೂಲ್ ಠಾಕೂರ್

ಲಂಡನ್: ಭರವಸೆಯ ಆಟಗಾರರಾದ ರಿಷಭ್ ಪಂತ್(50) ಹಾಗೂ ಶಾರ್ದೂಲ್ ಠಾಕೂರ್(60) ಅವರು ಬಾರಿಸಿದ ಅರ್ಧಶತಕದ ಬಲದಿಂದ ಟೀಮ್ ಇಂಡಿಯಾ ನಾಲ್ಕನೇ ಟೆಸ್ಟ್ ಗೆಲುವಿಗೆ ಇಂಗ್ಲೆಂಡ್ ತಂಡಕ್ಕೆ 368 ರನ್ ಗಳ ಗುರಿ ನೀಡಿದೆ.

ಭಾನುವಾರ 3 ವಿಕೆಟ್ ಗೆ 270 ರನ್ ಗಳಿಂದ ಆಟ ಮುಂದುವರಿಸಿದ ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್ ನಲ್ಲಿ 466 ರನ್ ಗಳಿಗೆ ಆಲೌಟ್ ಆಯಿತು. ಈ ಮೂಲಕ ಆಂಗ್ಲರ ಗೆಲುವಿಗೆ 368 ರನ್ ಗಳ ಗುರಿ ನೀಡಿದೆ.

ರವೀಂದ್ರ ಜಡೇಜ(17) ಹಾಗೂ ಅಂಜಿಕ್ಯ ರಹಾನೆ (0) ನಿರಾಸೆ ಮೂಡಿಸಿದರೆ, ನಾಯಕ ವಿರಾಟ್ ಕೊಹ್ಲಿ 44 ರನ್ ಗಳಿಸಿ ಔಟಾದರು. ಇದರೊಂದಿಗೆ ಟೀ ಇಂಜಿಯಾ 312 ರನ್ನಿಗೆ ಆರು ವಿಕೆಟ್ ಕಳೆದುಕೊಂಡು ಹಿನ್ನಡೆಗೊಳಗಾಗಿತ್ತು.

ಈ ಹಂತದಲ್ಲಿ ಜೊತೆಗೂಡಿದ ಪಂತ್ ಹಾಗೂ ಶಾರ್ದೂಲ್ ಏಳನೇ ವಿಕೆಟ್‌ಗೆ ಅಮೂಲ್ಯ ಶತಕದ ಜೊತೆಯಾಟ ನೀಡಿದರು. 72 ಎಸೆತಗಳನ್ನು ಎದುರಿಸಿದ ಶಾರ್ದೂಲ್ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 60 ರನ್ ಗಳಿಸಿದರು. ಈ ಮೂಲಕ ಎರಡೂ ಇನ್ನಿಂಗ್ಸ್‌ಗಳಲ್ಲಿ ಫಿಫ್ಟಿ ಬಾರಿಸಿದ ಸಾಧನೆ ಮಾಡಿದರು. 

ಶಾರ್ದೂಲ್ ಮೊದಲ ಇನ್ನಿಂಗ್ಸ್‌ನಲ್ಲಿ 57 ರನ್ ಗಳಿಸಿದರು. ಅತ್ತ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಪಂತ್ 106 ಎಸೆತಗಳಲ್ಲಿ ನಾಲ್ಕು ಬೌಂಡರಿ ನೆರವಿನಿಂದ 50 ರನ್ ಗಳಿಸಿದರು. ಕೊನೆ ಹಂತದಲ್ಲಿ ಉಮೇಶ್ ಯಾದವ್ (25) ಹಾಗೂ ಜಸ್‌ಪ್ರೀತ್ ಬೂಮ್ರಾ (24) ಉಪಯುಕ್ತ ಕೊಡುಗೆ ನೀಡುವ ಮೂಲಕ ಭಾರತದ ಮುನ್ನಡೆಯನ್ನು 350ರ ಗಡಿ ದಾಟಿಸಿದರು. ಅಂತಿಮವಾಗಿ ಭಾರತ 466 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com