ಮಹಿಳಾ ಕ್ರಿಕೆಟ್ ಗೆ ಅವಕಾಶ ನೀಡದಿದ್ದರೆ, ಆಸಿಸ್-ಅಫ್ಘಾನ್ ಐತಿಹಾಸಿಕ ಟೆಸ್ಟ್ ರದ್ದು!: ತಾಲಿಬಾನ್ ಗೆ ಆಸ್ಟ್ರೇಲಿಯಾ ತಿರುಗೇಟು

ಮಹಿಳೆಯರಿಗೆ ಕ್ರಿಕೆಟ್ ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡದಿದ್ದರೆ ಆಸ್ಟ್ರೇಲಿಯಾ ಮತ್ತು ಆಫ್ಘಾನಿಸ್ತಾನ ಪುರುಷರ ತಂಡಗಳ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಾಲಿಬಾನ್ ಗೆ ಖಡಕ್ ಎಚ್ಚರಿಕೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸಿಡ್ನಿ: ಮಹಿಳೆಯರಿಗೆ ಕ್ರಿಕೆಟ್ ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡದಿದ್ದರೆ ಆಸ್ಟ್ರೇಲಿಯಾ ಮತ್ತು ಆಫ್ಘಾನಿಸ್ತಾನ ಪುರುಷರ ತಂಡಗಳ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಾಲಿಬಾನ್ ಗೆ ಖಡಕ್ ಎಚ್ಚರಿಕೆ ನೀಡಿದೆ.

ಇತ್ತೀಚೆಗಷ್ಟೇ ಆಫ್ಘಾನಿಸ್ತಾನವನ್ನು ವಶಕ್ಕೆ ತೆಗೆದುಕೊಂಡಿರುವ ತಾಲಿಬಾನಿಗಳು ಕ್ರಮೇಣ ಷರಿಯಾ ಕಾನೂನು ಜಾರಿಗೆ ತರುತ್ತಿದ್ದು, ಇದರ ಭಾಗವಾಗಿ ಇದೀಗ ಮಹಿಳೆಯರು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದನ್ನು ನಿಷೇಧಿಸಿದ್ದಾರೆ. ಕ್ರಿಕೆಟ್‌ ಸೇರಿದಂತೆ ಇತರೆ ಕ್ರೀಡೆಗಳಲ್ಲಿ ಮಹಿಳೆಯರು ತಮ್ಮ ಮುಖ ಮತ್ತು ದೇಹವನ್ನು  ಮುಚ್ಚಿಕೊಳ್ಳದಂತಹ ಪರಿಸ್ಥಿತಿಯನ್ನು ಎದುರಿಸಬಹುದು. ಮಹಿಳೆಯರನ್ನು ಈ ರೀತಿ ನೋಡಲು ಇಸ್ಲಾಂ ಅನುಮತಿಸುವುದಿಲ್ಲ ಎಂದು ತಾಲಿಬಾನ್ ಸಾಂಸ್ಕೃತಿಕ ಆಯೋಗದ ಉಪ ಮುಖ್ಯಸ್ಥ ಅಹ್ಮದುಲ್ಲಾ ವಾಸಿಕ್ ಹೇಳಿದ್ದಾರೆ.

'ಇದು ಮಾಧ್ಯಮ ಯುಗ, ಮತ್ತು ಫೋಟೋಗಳು ಮತ್ತು ವೀಡಿಯೊಗಳು ಇರುತ್ತವೆ, ಮತ್ತು ನಂತರ ಜನರು ಅದನ್ನು ವೀಕ್ಷಿಸುತ್ತಾರೆ. ಇಸ್ಲಾಂ ಮತ್ತು ಇಸ್ಲಾಮಿಕ್ ಎಮಿರೇಟ್ ಮಹಿಳೆಯರಿಗೆ ಕ್ರಿಕೆಟ್ ಆಡಲು ಅಥವಾ ಅವರು ಬಹಿರಂಗಪಡಿಸುವ ರೀತಿಯ ಕ್ರೀಡೆಗಳನ್ನು ಆಡಲು ಅನುಮತಿಸುವುದಿಲ್ಲ ಎಂದು ಹೇಳಿದರು.  ಅಂತೆಯೇ ತಾವು ಕ್ರೀಡಾ ವಿರೋಧಿಗಳಲ್ಲಿ ಎಂದು ಹೇಳಿದ ಅವರು, 'ಕಳೆದ ತಿಂಗಳು ಎಸ್‌ಬಿಎಸ್‌ಗೆ ತಾಲಿಬಾನ್ ಪುರುಷರ ಕ್ರಿಕೆಟ್ ಮುಂದುವರಿಸಲು ಅವಕಾಶ ನೀಡಿದೆ ಮತ್ತು ಪುರುಷರ ರಾಷ್ಟ್ರೀಯ ತಂಡವು ನವೆಂಬರ್‌ನಲ್ಲಿ ಟೆಸ್ಟ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲು ಅನುಮೋದನೆ ಕೂಡ ನೀಡಿದೆ  ಎಂದು ಹೇಳಿದರು.

ತಾಲಿಬಾನ್ ಈ ನಡೆ ಇದೀಗ ಜಗತ್ತಿನಾದ್ಯಂತ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದ್ದು, ಪ್ರಮುಖವಾಗಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಣೆಯನ್ನು ಹೊರಡಿಸುವ ಮೂಲಕ ತಾಲಿಬಾನಿಗರಿಗೆ ಖಡಕ್ ಎಚ್ಚರಿಕೆ ನೀಡಿದೆ. 'ಮಹಿಳೆಯರ ಕ್ರಿಕೆಟ್ ಗೆ ತಾಲಿಬಾನ್ ಅನುಮತಿ ನೀಡದಿದ್ದರೆ ಮುಂಬರುವ ನವೆಂಬರ್​ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಹೋಬರ್ಟ್​ನಲ್ಲಿ ನಡೆಯಬೇಕಿರುವ ಐತಿಹಾಸಿಕ ಚೊಚ್ಚಲ ಟೆಸ್ಟ್​ ಪಂದ್ಯವನ್ನು ರದ್ದುಗೊಳಿತ್ತೇವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.

“ಒಂದು ವೇಳೆ ತಾಲಿಬಾನಿಗರು ಕ್ರಿಡೆಯಲ್ಲಿ ಮಹಿಳೆಯರ ಮೇಲೆ ನಿಷೇಧ ಹೇರಿದರೆ ನಾವೂ ಅಫ್ಘಾನಿಸ್ತಾನದ ವಿರುದ್ಧ ಹೋಬರ್ಟ್​​​ನಲ್ಲಿ ನಡೆಯಬೇಕಿದ್ದ ಟೆಸ್ಟ್ ಪಂದ್ಯವನ್ನು ರದ್ದು ಮಾಡಬೇಕಾಗುತ್ತದೆ. ಮಹಿಳೆಯರ ಕ್ರೀಡೆ ಅಭಿವೃದ್ಧಿಯನ್ನು ಬೆಂಬಲಿಸುವುದು ಆಸ್ಟ್ರೇಲಿಯಾದ ಕರ್ತವ್ಯವಾಗಿದೆ. ಒಂದು ವೇಳೆ  ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಕ್ರೀಡೆಗೆ ನಿಷೇಧ ಹೇರಿದ್ದು ನಿಜವೇ ಆದರೆ ನಾವೂ ಆಫ್ಘಾನಿಸ್ತಾನ ಪುರುಷರ ತಂಡದ ನಮ್ಮ ದೇಶದ ಪ್ರವಾಸವನ್ನು ರದ್ದುಗೊಳಿಸಬೇಕಾಗುತ್ತದೆ. ಜಾಗತಿಕ ಮಟ್ಟದಲ್ಲಿ ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಚಾಲನೆ ನೀಡುವುದು ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ತೀರಾ ಮುಖ್ಯವಾಗಿದೆ. ಕ್ರಿಕೆಟ್‌ಗೆ  ನಮ್ಮ ದೃಷ್ಟಿಕೋನ ಎಂದಿಗೂ ಎಲ್ಲರಿಗೂ ಒಂದೇ ಆಗಿರುತ್ತದೆ. ನಾವು ಪ್ರತಿ ಹಂತದಲ್ಲೂ ಮಹಿಳೆಯರಿಗೆ ನಿಸ್ಸಂದಿಗ್ಧವಾಗಿ ಬೆಂಬಲಿಸುತ್ತೇವೆ ಎಂದು ಆಸ್ಟ್ರೇಲಿಯಾ ಖಡಕ್ ಸೂಚನೆ ನೀಡಿದೆ.

ಅಲ್ಲದೆ ಇದೇ ವಿಚಾರವಾಗಿ ಮಾತನಾಡಿರುವ ಆಸ್ಟ್ರೇಲಿಯಾದ ಕ್ರೀಡಾ ಸಚಿವ ರಿಚರ್ಡ್ ಕೋಲ್ಬೆಕ್ ಅವರು, ಮಹಿಳಾ ಕ್ರೀಡೆ ಕುರಿತು ತಾಲಿಬಾನ್ ನಿರ್ಧಾರ ಸರಿಯಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಂತಹ ಸಂಘಟನೆಗಳು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ನಾವು ಒತ್ತಾಯಿಸುತ್ತೇವೆ. ಯಾವುದೇ ಹಂತದಲ್ಲಿ  ಮಹಿಳೆಯರನ್ನು ಕ್ರೀಡೆಯಿಂದ ಹೊರಗಿಡುವುದು ಸ್ವೀಕಾರಾರ್ಹವಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಸೇರಿದಂತೆ ಅಂತಾರಾಷ್ಟ್ರೀಯ ಕ್ರೀಡಾ ಪ್ರಾಧಿಕಾರಗಳು ಈ ಭಯಾನಕ ತೀರ್ಪಿನ ವಿರುದ್ಧ ನಿಲುವು ತೆಗೆದುಕೊಳ್ಳುವಂತೆ ನಾವು ಒತ್ತಾಯಿಸುತ್ತೇವೆ. ಅಫ್ಘಾನಿಸ್ತಾನದ ಮಹಿಳಾ ಸಾಕರ್ ತಂಡದ ಆಟಗಾರರು  ಆಸ್ಟ್ರೇಲಿಯಾದಲ್ಲಿ ವಾಸಿಸಲು ವೀಸಾ ನೀಡಲಾಗಿದೆ. ಇಲ್ಲಿ ಡಜನ್ಗಟ್ಟಲೆ ಕ್ರೀಡಾಪಟುಗಳಲ್ಲಿದ್ದಾರೆ.  COVID-19 ಸಾಂಕ್ರಾಮಿಕ ರೋಗದಿಂದಾಗಿ ಸಂಪರ್ಕತಡೆಯನ್ನು ಅನುಭವಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಇನ್ನು ತಾಲಿಬಾನ್ ತನ್ನ ನಿರ್ಧಾರದಿಂದ ಹಿಂದೆ ಸರಿಯದೇ ಇದ್ದಲ್ಲಿ ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ ನಡುವಣ ಚೊಚ್ಚಲ ಟೆಸ್ಟ್ ಪಂದ್ಯ ರದ್ದಾಗುವುದು ಖಚಿತವಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com