ಐಪಿಎಲ್-2021: ಕೋಲ್ಕತಾ ಬೌಲಿಂಗ್ ಆರ್ಭಟಕ್ಕೆ ಮಂಕಾದ ಆರ್ ಸಿಬಿ ದಾಂಡಿಗರು, 92 ರನ್ ಗಳಿಗೆ ಆಲೌಟ್

ಬೌಲರ್ ಗಳ ಸಾಂಘಿಕ ಹೋರಾಟದಿಂದಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಪ್ರಬಲ ಆರ್ ಸಿಬಿ ತಂಡವನ್ನು ಕೇವಲ 92 ರನ್ ಗಳಿಗೆ ಕಟ್ಟಿಹಾಕಿದೆ.
ಕೆಕೆಆರ್ ಬೌಲರ್ ಗಳ ಆರ್ಭಟ
ಕೆಕೆಆರ್ ಬೌಲರ್ ಗಳ ಆರ್ಭಟ

ಅಬುದಾಬಿ: ಬೌಲರ್ ಗಳ ಸಾಂಘಿಕ ಹೋರಾಟದಿಂದಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಪ್ರಬಲ ಆರ್ ಸಿಬಿ ತಂಡವನ್ನು ಕೇವಲ 92 ರನ್ ಗಳಿಗೆ ಕಟ್ಟಿಹಾಕಿದೆ.

ಅಬುದಾಬಿಯಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಾಯಕ ವಿರಾಟ್ ಕೊಹ್ಲಿ ಬೃಹತ್ ಮೊತ್ತ ಪೇರಿಸುವ ಇರಾದೆ ಹೊಂದಿದ್ದರು. ಆದರೆ ಆರಂಭದಿಂದಲೇ ಕರಾರುವಕ್ಕಾದ ಬೌಲಿಂಗ್ ದಾಳಿ ನಡೆಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ಮೊದಲ ವಿಕೆಟ್ ರೂಪದಲ್ಲಿ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡಿತು. ಕೆಕೆಆರ್ ನ ಪ್ರಸಿದ್ಧ್ ಕೃಷ್ಣ 5 ರನ್ ಗಳಿಸಿದ್ದ ಕೊಹ್ಲಿಯನ್ನು ಎಲ್ ಬಿ ಬಲೆಗೆ ಕೆಡವಿದರು. 

ಬಳಿಕ ಮೈದಾನದಲ್ಲಿ ನಡೆದಿದ್ದು ಅಕ್ಷರಶಃ ಆರ್ ಸಿಬಿ ಬ್ಯಾಟ್ಸ್ ಮನ್ ಗಳ ಪೆವಿಲಿಯನ್ ಪರೇಡ್. ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ (22 ರನ್), ಶ್ರೀಕಾರ್ ಭರತ್ (16ರನ್), ಗ್ಲೇನ್ ಮ್ಯಾಕ್ಸ್ ವೆಲ್ (10 ರನ್), ಕೆಳ ಕ್ರಮಾಂಕದ ಬ್ಯಾಟ್ಸಮನ್ ಹರ್ಷಲ್ ಪಟೇಲ್ (12 ರನ್)ಬಿಟ್ಟರೆ ಉಳಿದಾವ ಆಟಗಾರರೂ ಎರಡಂಕಿ ಮೊತ್ತ ದಾಟಲೇ ಇಲ್ಲ. ತಂಡದ ಸ್ಫೋಟಕ ಆಟಗಾರ ಎಬಿಡಿ ವಿಲಿಯರ್ಸ್ ಸೇರಿದಂತೆ ಇಬ್ಬರು ಆಟಗಾರರು ಶೂನ್ಯಕ್ಕೆ ಔಟ್ ಆಗಿದ್ದು ತಂಡಕ್ಕೆ ಮಾರಣಾಂತಿಕ ಹೊಡೆತ ನೀಡಿತು. 

ಅಂತಿಮ ಹಂತದಲ್ಲಿ ಹರ್ಷಲ್ ಪಟೇಲ್ ಮತ್ತು ಸಿರಾಜ್ ಪ್ರತಿರೋಧ ತೋರುವ ಪ್ರಯತ್ನ ಪಟ್ಟರಾದರೂ ಸಾಧ್ಯವಾಗಲಿಲ್ಲ. 19ನೇ ಓವರ್ ನ ಅಂತಿಮ ಎಸೆತದಲ್ಲಿ 8 ರನ್ ಗಳಿಸಿದ್ದ ಸಿರಾಜ್ ಔಟಾಗುವದರೊಂದಿಗೆ ಆರ್ ಸಿಬಿ 2 ರನ್ ಗಳಿಸಿ ಆಲೌಟ್ ಆಯಿತು. ಆ ಮೂಲಕ ಕೆಕೆಆರ್ ಗೆ 93 ರನ್ ಗಳ ಸಾಧಾರಣ ಗುರಿ ನೀಡಿತು.

ಇನ್ನು ಕೆಕೆಆರ್ ಪರ ಚಕ್ರವರ್ತಿ ಮತ್ತು ಆ್ಯಂಡ್ರೆ ರಸೆಲ್ ತಲಾ 3 ವಿಕೆಟ್ ಪಡೆದು ಆರ್ ಸಿಬಿ ಪತನಕ್ಕೆ ಕಾರಣವಾದರೆ, ಲಾಕಿ ಫರ್ಗುಸನ್ 2 ಮತ್ತು ಪ್ರಸಿದ್ಧ್ ಕೃಷ್ಣ 1 ವಿಕೆಟ್ ಪಡೆದು ತಂಡದ ಮೇಲುಗೈನಲ್ಲಿ ಮಹತ್ತರ ಪಾತ್ರ ವಹಿಸಿದರು.

ಇತ್ತೀಚಿನ ವರದಿಗಳು ಬಂದಾಗ ಕೆಕೆಆರ್ 3 ಓವರ್ ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 22 ರನ್ ಗಳಿಸಿದೆ. ಶುಭ್ ಮನ್ ಗಿಲ್ ( 8 ರನ್) ಮತ್ತು ವೆಂಕಟೇಶ್ ಅಯ್ಯರ್ (11 ರನ್) ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಕೆಕೆಆರ್ ತಂಡ ಈ ಪಂದ್ಯವನ್ನು ಗೆಲ್ಲಲು ಬಾಕಿ 17 ಓವರ್ ನಲ್ಲಿ 71 ರನ್ ಗಳಿಸಬೇಕಿದೆ.

ಸಂಕ್ಷಿಪ್ತ ಸ್ಕೋರ್ ವಿವರ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com