ಐಪಿಎಲ್-2021: ಆರ್ ಸಿಬಿ ವಿರುದ್ಧ ಭರ್ಜರಿ ಜಯದ ಜೊತೆಗೆ ದಾಖಲೆ ಬರೆದ ಕೋಲ್ಕತಾ

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ತಂಡ ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ ಆ ತಂಡ ಐಪಿಎಲ್ ನಲ್ಲಿ ವಿಶೇಷ ದಾಖಲೆಗೆ ಪಾತ್ರವಾಗಿದೆ.
ಕೆಕೆಆರ್ ಬ್ಯಾಟಿಂಗ್
ಕೆಕೆಆರ್ ಬ್ಯಾಟಿಂಗ್

ಅಬುದಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ತಂಡ ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ ಆ ತಂಡ ಐಪಿಎಲ್ ನಲ್ಲಿ ವಿಶೇಷ ದಾಖಲೆಗೆ ಪಾತ್ರವಾಗಿದೆ.

ಹೌದು.. ಅಬುದಾಬಿಯಲ್ಲಿ ಇಂದು ನಡೆದ ಪಂದ್ಯದಲ್ಲಿ ಆರ್ ಸಿಬಿ ನೀಡಿದ್ದ 93 ರನ್ ಗಳ ಸಾಧಾರಣ ಗುರಿಯನ್ನು ಯಾವುದೇ ರೀತಿಯ ಪ್ರತಿರೋಧವಿಲ್ಲದೇ ಕೋಲ್ಕತಾ ಕೇವಲ 1 ವಿಕೆಟ್ ಕಳೆದುಕೊಂಡು ಸಾಧಿಸಿ 9 ವಿಕೆಟ್ ಗಳ ಭರ್ಜರಿ ಜಯಗಳಿಸಿದೆ.  ಕೆಕೆಆರ್ ಪರ ಆರಂಭಿಕರಾಗಿ ಕಣಕ್ಕಿಳಿದ ಶುಭಮನ್ ಗಿಲ್ (48) ಮತ್ತು ವೆಂಕಟೇಶ್ ಅಯ್ಯರ್ (41 ರನ್) ಜೋಡಿ ಬಹುತೇಕ ಪಂದ್ಯವನ್ನು ತಾವೇ ಮುಕ್ತಾಯ ಮಾಡಿದರು. ಆಂತಿಮ ಹಂತದಲ್ಲಿ ಗೆಲುವಿಗೆ ಕೇವಲ 11 ರನ್ ಗಳು ಬೇಕಿದ್ದಾಗ 48 ರನ್ ಗಳಿ ಅರ್ಧಶತಕದ ಹೊಸ್ತಿಲಲ್ಲಿದ್ದ ಗಿಲ್ ಚಹಲ್ ಬೌಲಿಂಗ್ ನಲ್ಲಿ ಔಟಾದರು. ಬಳಿಕ ವೆಂಕಟೇಶ್ ಅಯ್ಯರ್ ಗೆಲುವಿನ ಔಪಾಚಾರಿಕೆಯನ್ನು ಪೂರ್ಣಗೊಳಿಸಿದರು.

ದಾಖಲೆ
ಇನ್ನು ಈ ಪಂದ್ಯದ ಭರ್ಜರಿ ಜಯದ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ತನ್ನ ಖಾತೆಗೆ ವಿಶೇಷ ದಾಖಲೆಯೊಂದನ್ನು ಹಾಕಿಕೊಂಡಿದ್ದು, ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಎಸೆತಗಳಿರುವಂತೆಯೇ ಪಂದ್ಯ ಜಯಿಸಿದ ತಂಡಗಳ ಪಟ್ಟಿಯಲ್ಲಿ ಕೆಕೆಆರ್ ಸ್ಥಾನಗಳಿಸಿದೆ. ಈ ಪಂದ್ಯದಲ್ಲಿ ಕೋಲ್ಕತಾ ಇನ್ನೂ 10 ಓವರ್ ಗಳು ಅಂದರೆ 60 ಎಸೆತಗಳು ಬಾಕಿ ಇರುವಂತೆಯೇ ಪಂದ್ಯವನ್ನು ಜಯಿಸಿದ್ದು, ಆ ಮೂಲಕ ಅತೀ ಹೆಚ್ಚು ಎಸೆತಗಳಿರುವಂತೆಯೇ ಪಂದ್ಯ ಜಯಿಸಿದ ತಂಡಗಳ ಪಟ್ಟಿಯಲ್ಲಿ 5ನೇ ಸ್ಥಾನ ಗಳಿಸಿದೆ.

ಈ ಪಟ್ಟಿಯ ಮೊದಲ ಸ್ಥಾನದಲ್ಲಿ ಮುಂಬೈ ಇದ್ದು, ಇದೇ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 2008ರಲ್ಲಿ ಮುಂಬೈ ಇನ್ನೂ 87 ಎಸೆತಗಳು ಬಾಕಿ ಇರುವಂತೆ ಪಂದ್ಯ ಜಯಿಸಿತ್ತು. 2ನೇ ಸ್ಥಾನದಲ್ಲಿ ಕೆಟಿಕೆ (ಕೊಚ್ಚಿ ಟಸ್ಕರ್ಸ್ ಕೇರಳ) ಇದ್ದು 2011ರ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಇಂದೋರ್ ನಲ್ಲಿ ನಡೆದ ಪಂದ್ಯದಲ್ಲಿ 76 ಎಸೆತಗಳು  ಬಾಕಿ ಇರುವಂತೆ ಪಂದ್ಯ ಜಯಿಸಿತ್ತು, ಮೂರನೇ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್ ಇದ್ದು 2017ರಲ್ಲಿ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ 73 ಎಸೆತಗಳು ಬಾಕಿ ಇರುವಂತೆ ಪಂದ್ಯ ಗೆದ್ದಿತ್ತು. 4ನೇ ಸ್ಥಾನದಲ್ಲಿ ಆರ್ ಸಿಬಿ ಇದ್ದು 2018ರಲ್ಲಿ ಇಂದೋರ್ ನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಆರ್ ಸಿಬಿ 71 ಎಸೆತ ಬಾಕಿ ಇರುವಂತೆ ಪಂದ್ಯ ಜಯಿಸಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com