ನವದೆಹಲಿ: ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಅವರ ಮಧ್ಯೆ ಎಲ್ಲವೂ ಸರಿಯಿಲ್ವಾ? ಹೀಗೊಂದು ಪ್ರಶ್ನೆ, ಅನುಮಾನ ಕೆಲ ದಿನಗಳಿಂದ ಅವರ ಅಭಿಮಾನಿಗಳನ್ನ ಕಾಡುತ್ತಿದೆ. ಆದರೆ ಈ ವದಂತಿ ಮಧ್ಯೆ ಧನಶ್ರೀ ಇನ್ ಸ್ಟಾಗ್ರಾಂ ನಲ್ಲಿ ತಮಾಷೆಯ ವಿಡಿಯೋವೊಂದನ್ನು ಹಂಚಿಕೊಂಡು ಸ್ಪಷ್ಟನೆ ಕೊಟ್ಟಿದ್ದಾರೆ.
ಕ್ಲಿಪ್‌ನಲ್ಲಿ, ಧನಶ್ರೀ ಅವರು “ಸುನೋ, ಮೈನ್ ಏಕ್ ಮಹಿನೇ ಕೆ ಲಿಯೇ ಮೈಕೆ ಜಾ ರಹೀ ಹೂಂ. (ಕೇಳಿ..ನಾನು ನನ್ನ ತಾಯಿಯ ಮನೆಗೆ ಒಂದು ತಿಂಗಳು ಹೋಗುತ್ತಿದ್ದೇನೆ)” ಎಂದು ಹೇಳಿದ್ದಾರೆ. ಇದಕ್ಕೆ ಟಿವಿ ನೋಡುತ್ತಿದ್ದ ಚಹಾಲ್ ತನ್ನ ಕೈಯಿಂದ ರಿಮೋಟ್ ಎಸೆದು ಬಾಲಿವುಡ್ ಹಾಡಿನಲ್ಲಿ ಕುಣಿಯಲು ಪ್ರಾರಂಭಿಸುತ್ತಾರೆ. ಧನಶ್ರೀ ಕೂಡ ಚಹಾಲ್‌ನ ನೃತ್ಯವನ್ನು ನೋಡಿ ನಗಲು ಪ್ರಾರಂಭಿಸುತ್ತಾರೆ. ಅಭಿಮಾನಿಗಳು ಕೂಡ ಈ ವಿಡಿಯೋವನ್ನು ಸ್ವಾಗತಿಸಿದ್ದಾರೆ.
ಈ ಹಿಂದೆ ಧನಶ್ರೀ ಚಹಾಲ್ ಜೊತೆಗಿನ ಸಂಬಂಧದ ಬಗ್ಗೆ ವದಂತಿಗಳನ್ನು ಹರಡುವವರ ವಿರುದ್ಧ ಮಾತನಾಡಿದ್ದರು. ಅವರು ಸುದೀರ್ಘ ಪೋಸ್ಟ್ ಅನ್ನು ಹಂಚಿಕೊಂಡು, ತಮ್ಮ ಜೀವನದ ಬಗ್ಗೆ ಆಧಾರವಿಲ್ಲದ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿ, ಇಂತಹ ವದಂತಿಗಳು ನೋವುಂಟುಮಾಡುತ್ತದೆ ಎಂದಿದ್ದರು.
ಮತ್ತೊಂದೆಡೆ, ಚಾಹಲ್ ಅವರು ಸಹ, ಕಳೆದ ವಾರ ತನ್ನ ವೈವಾಹಿಕ ಜೀವನದ ಬಗ್ಗೆ ವದಂತಿಗಳನ್ನು ನಂಬಬೇಡಿ ಎಂದು ತನ್ನ ಅಭಿಮಾನಿಗಳಿಗೆ ಕೇಳಿಕೊಂಡಿದ್ದರು.
Advertisement