ಐಪಿಎಲ್ 2023: ಭಾರತದ 273 ಆಟಗಾರರು, 132 ವಿದೇಶಿ ಆಟಗಾರರು ಹರಾಜು, ಡಿಸೆಂಬರ್ 23 ರಂದು ಆಕ್ಷನ್ ಪ್ರಕ್ರಿಯೆ

ಐಪಿಎಲ್‌ 2023ರ ಆವೃತ್ತಿಯ ಹರಾಜಿಗೆ ಲಭ್ಯರಿರುವ ಭಾರತದ 273 ಆಟಗಾರರು, 132 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 405 ಆಟಗಾರರ ಪಟ್ಟಿಯನ್ನು ಬಿಸಿಸಿಐ ಮಂಗಳವಾರ ಬಿಡುಗಡೆ ಮಾಡಿದ್ದು, ಇದೇ ಡಿಸೆಂಬರ್ 23 ರಂದು ಹರಾಜು ಪ್ರಕ್ರಿಯೆ ನಡೆಯಲಿದೆ.
ಐಪಿಎಲ್ ಟ್ರೋಫಿ
ಐಪಿಎಲ್ ಟ್ರೋಫಿ

ನವದೆಹಲಿ: ಐಪಿಎಲ್‌ 2023ರ ಆವೃತ್ತಿಯ ಹರಾಜಿಗೆ ಲಭ್ಯರಿರುವ ಭಾರತದ 273 ಆಟಗಾರರು, 132 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 405 ಆಟಗಾರರ ಪಟ್ಟಿಯನ್ನು ಬಿಸಿಸಿಐ ಮಂಗಳವಾರ ಬಿಡುಗಡೆ ಮಾಡಿದ್ದು, ಇದೇ ಡಿಸೆಂಬರ್ 23 ರಂದು ಹರಾಜು ಪ್ರಕ್ರಿಯೆ ನಡೆಯಲಿದೆ.

ಆರಂಭದಲ್ಲಿ 991 ಆಟಗಾರರಿದ್ದ ಪಟ್ಟಿ ಸದ್ಯ 405ಕ್ಕೆ ಇಳಿದಿದೆ. 405 ಆಟಗಾರರಲ್ಲಿ 273 ಭಾರತೀಯರು ಮತ್ತು 132 ವಿದೇಶಿ ಆಟಗಾರರು ಇದ್ದಾರೆ. ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಐಪಿಎಲ್ 2023 ರ ಹರಾಜಿನಲ್ಲಿ ಒಟ್ಟು 405 ಆಟಗಾರರನ್ನು ಪ್ರಸ್ತುತಪಡಿಸುವ ಅಂತಿಮ ಪಟ್ಟಿಗೆ ಸೇರಿಸಲಾದ ತಂಡಗಳಿಂದ ಆರು ಹೆಚ್ಚುವರಿ ಆಟಗಾರರನ್ನು ವಿನಂತಿಸಲಾಗಿದೆ" ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. 

ಹರಾಜಿಗೆ ಲಭ್ಯರಿರುವ ಆಟಗಾರರಲ್ಲಿ ಅಫ್ಗಾನಿಸ್ತಾನದ ಸ್ಪಿನ್ನರ್‌, 15 ವರ್ಷದ ಅಲ್ಹಾ ಮೊಹಮ್ಮದ್‌ ಘಝನ್ಫರ್‌ ಅತ್ಯಂತ ಕಿರಿಯ ಎನಿಸಿಕೊಂಡಿದ್ದಾರೆ. 2007ರ ಜುಲೈ 15ರಂದು ಜನಿಸಿರುವ ಘಝನ್ಫರ್‌ ಈ ವರೆಗೆ ಮೂರು ಟಿ20 ಕ್ರಿಕೆಟ್‌ ಪಂದ್ಯಗಳನ್ನು ಆಡಿದ್ದಾರೆ. ಭಾರತದ, 40 ವರ್ಷದ ಅಮಿತ್‌ ಮಿಶ್ರಾ ಹರಾಜಿನಲ್ಲಿರುವ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಒಟ್ಟು ಕ್ಯಾಪ್ಡ್ ಆಟಗಾರರು 119, ಅನ್ ಕ್ಯಾಪ್ಡ್ ಆಟಗಾರರು 282 ಮತ್ತು ಅಸೋಸಿಯೇಟ್ ರಾಷ್ಟ್ರಗಳಿಂದ 4 ಆಟಗಾರರು ಇದ್ದಾರೆ ಎಂದು ಹೇಳಿಕೆ ಉಲ್ಲೇಖಿಸಿದೆ.

ಯಾವೆಲ್ಲಾ ಆಟಗಾರರು ಹರಾಜಿನಲ್ಲಿ ಲಭ್ಯ
ಮಯಾಂಕ್ ಅಗರ್ವಾಲ್ (ಭಾರತ), ಹ್ಯಾರಿ ಬ್ರೂಕ್ (ಇಂಗ್ಲೆಂಡ್), ಜೋ ರೂಟ್ (ಇಂಗ್ಲೆಂಡ್), ರಿಲೀ ರೊಸೊವ್ (ದಕ್ಷಿಣ ಆಫ್ರಿಕಾ), ಕ್ಯಾಮರೂನ್ ಗ್ರೀನ್ (ಆಸ್ಟ್ರೇಲಿಯಾ), ಸಿಕಂದರ್ ರಜಾ (ಜಿಂಬಾಬ್ವೆ), ಬೆನ್ ಸ್ಟೋಕ್ಸ್ (ಇಂಗ್ಲೆಂಡ್), ಅಜಿಂಕ್ಯ ರಹಾನೆ (ಭಾರತ), ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ), ನಿಕೋಲಸ್ ಪೂರನ್ (ವೆಸ್ಟ್ ಇಂಡೀಸ್), ಮುಜೀಬ್ ರಹಮಾನ್ (ಅಫ್ಘಾನಿಸ್ತಾನ), ಡೇವಿಡ್ ಮಲಾನ್ (ಇಂಗ್ಲೆಂಡ್), ದಸುನ್ ಶಾನಕ (ಶ್ರೀಲಂಕಾ), ಪಾಲ್ ಸ್ಟಿರ್ಲಿಂಗ್ (ಐರ್ಲೆಂಡ್), ಶಾಯ್ ಹೋಪ್ (ವೆಸ್ಟ್ ಇಂಡೀಸ್), ಡೇರಿಲ್ ಮಿಚೆಲ್ (ನ್ಯೂಜಿಲೆಂಡ್), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (ದಕ್ಷಿಣ ಆಫ್ರಿಕಾ), ಟಾಮ್ ಲ್ಯಾಥಮ್ (ನ್ಯೂಜಿಲೆಂಡ್), ಜೇಸನ್ ರಾಯ್ (ಇಂಗ್ಲೆಂಡ್), ಕಾರ್ತಿಕ್ ಮೆಯ್ಯಪ್ಪನ್ (ಯುಎಇ), ಹ್ಯಾರಿ ಟೆಕ್ಟರ್ (ಐರ್ಲೆಂಡ್), ರೀಜಾ ಹೆಂಡ್ರಿಕ್ಸ್ ( ದಕ್ಷಿಣ ಆಫ್ರಿಕಾ), ಬ್ಲೆಸಿಂಗ್ ಮುಜರ್ಬಾನಿ (ಜಿಂಬಾಬ್ವೆ) ಸೇರಿದಂತೆ 400ಕ್ಕೂ ಅಧಿಕ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.

ಗರಿಷ್ಠ 30 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 87 ಸ್ಥಾನಗಳು ಈಗ ಲಭ್ಯವಿದ್ದು, ಡಿಸೆಂಬರ್ 23ರಂದು ಈ ಹರಾಜು ಪ್ರಕ್ರಿಯೆ ನಡೆಯಲಿದೆ. 2 ಕೋಟಿ ರೂ ಅತ್ಯಧಿಕ ಮೀಸಲು ಬೆಲೆಯಾಗಿದ್ದು, 19 ಸಾಗರೋತ್ತರ ಆಟಗಾರರು ಗರಿಷ್ಠ ಮೊತ್ತದ ಬ್ರಾಕೆಟ್‌ ಆಯ್ಕೆ ಮಾಡಿಕೊಂಡಿದ್ದಾರೆ. ಉಳಿದಂತೆ 1.5 ಕೋಟಿ ಮೂಲ ಬೆಲೆಯೊಂದಿಗೆ ಹನ್ನೊಂದು ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ. ಮನೀಷ್ ಪಾಂಡೆ ಮತ್ತು ಮಯಾಂಕ್ ಅಗರ್ವಾಲ್ 20 ಕ್ರಿಕೆಟಿಗರ ಪಟ್ಟಿಯಲ್ಲಿ ಭಾರತೀಯ ಆಟಗಾರರಾಗಿದ್ದು, ಇವರ ಮೂಲಕ ಬೆಲೆ ಒಂದು ಕೋಟಿ ರೂ ಎಂದು ಹೇಳಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com