ಬಾಂಗ್ಲಾ ವಿರುದ್ಧ ದಾಖಲೆಯ ದ್ವಿಶತಕ: ICC ಏಕದಿನ ರ್ಯಾಕಿಂಗ್ ನಲ್ಲಿ ಬರೊಬ್ಬರಿ 117 ಸ್ಥಾನ ಮೇಲಕ್ಕೇರಿದ ಇಶಾನ್ ಕಿಶನ್!

ಬಾಂಗ್ಲಾದೇಶ ವಿರುದ್ಧ ಅಂತಿಮ ಏಕದಿನ ಪಂದ್ಯದಲ್ಲಿ ದಾಖಲೆಯ ದ್ವಿಶತಕ ಸಿಡಿಸಿದ ಭಾರತದ ಇಶಾನ್ ಕಿಶನ್ ICC ಏಕದಿನ ರ್ಯಾಂಕಿಂಗ್ (ODI Ranking)ನಲ್ಲಿ ಏಕಾಏಕಿ 117 ಸ್ಥಾನ ಮೇಲೇರಿ ಜೀವನ ಶ್ರೇಷ್ಠ 37ನೇ ಸ್ಥಾನಕ್ಕೇರಿದ್ದಾರೆ.
ಇಶಾನ್ ಕಿಶನ್ ಮತ್ತು ವಿರಾಟ್ ಕೊಹ್ಲಿ
ಇಶಾನ್ ಕಿಶನ್ ಮತ್ತು ವಿರಾಟ್ ಕೊಹ್ಲಿ

ಮುಂಬೈ: ಬಾಂಗ್ಲಾದೇಶ ವಿರುದ್ಧ ಅಂತಿಮ ಏಕದಿನ ಪಂದ್ಯದಲ್ಲಿ ದಾಖಲೆಯ ದ್ವಿಶತಕ ಸಿಡಿಸಿದ ಭಾರತದ ಇಶಾನ್ ಕಿಶನ್ ICC ಏಕದಿನ ರ್ಯಾಂಕಿಂಗ್ (ODI Ranking)ನಲ್ಲಿ ಏಕಾಏಕಿ 117 ಸ್ಥಾನ ಮೇಲೇರಿ ಜೀವನ ಶ್ರೇಷ್ಠ 37ನೇ ಸ್ಥಾನಕ್ಕೇರಿದ್ದಾರೆ.

ಹೌದು...ಬುಧವಾರ ಬಿಡುಗಡೆಯಾದ ಇತ್ತೀಚಿನ ಏಕದಿನ ರ‍್ಯಾಂಕಿಂಗ್‌ನಲ್ಲಿ ಬರೋಬ್ಬರಿ 117 ಸ್ಥಾನಗಳ ಜಿಗಿತ ಕಂಡಿರುವ ಕಿಶನ್ 37ನೇ ಸ್ಥಾನಕ್ಕೆತಲುಪಿದ್ದು, ಈ ಪಂದ್ಯದಲ್ಲಿ ಇಶಾನ್ ಜೊತೆ ವಿರಾಟ್ ಕೊಹ್ಲಿ ಕೂಡ ಶತಕ ಬಾರಿಸಿದ್ದು, ಅವರಿಗೂ ರ‍್ಯಾಂಕಿಂಗ್‌ನಲ್ಲಿ ಮುಂಬಡ್ತಿ ಸಿಕ್ಕಿದೆ.

ಉಳಿದಂತೆ ವಿರಾಟ್ ಕೊಹ್ಲಿ ಎರಡು ಸ್ಥಾನ ಮೇಲೇರಿ 8ನೇ ಸ್ಥಾನಕ್ಕೆ ತಲುಪಿದ್ದು, ಶ್ರೇಯಸ್ ಅಯ್ಯರ್ ಕೂಡ ಶ್ರೇಯಾಂಕದಲ್ಲಿ ಲಾಭ ಪಡೆದಿದ್ದು, ಢಾಕಾದಲ್ಲಿ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ 82 ರನ್ ಗಳಿಸಿದ್ದರು. ಈ ಅರ್ಧಶತಕದಾಟದ ಲಾಭ ಪಡೆದಿರುವ ಅಯ್ಯರ್, 20 ನೇ ಸ್ಥಾನದಿಂದ ಜಿಗಿದು, 15 ನೇ ಸ್ಥಾನಕ್ಕೆ ಏರಿದ್ದಾರೆ. ಬೌಲರ್‌ಗಳ ಪೈಕಿ ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಏಕದಿನ ರ‍್ಯಾಂಕಿಂಗ್‌ನಲ್ಲಿ ನಾಲ್ಕು ಸ್ಥಾನಗಳನ್ನು ಹೆಚ್ಚಿಸಿಕೊಂಡು 22ನೇ ಸ್ಥಾನಕ್ಕೆ ತಲುಪಿದ್ದಾರೆ. ಬಾಂಗ್ಲಾದೇಶದ ಸ್ಪಿನ್ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಒಂದು ಸ್ಥಾನ ಹೆಚ್ಚಿಸಿಕೊಂಡು ಎಂಟನೇ ಸ್ಥಾನಕ್ಕೆ ತಲುಪಿದ್ದಾರೆ. ಆಲ್ ರೌಂಡರ್ ಪಟ್ಟಿಯಲ್ಲಿ ಬಾಂಗ್ಲಾದೇಶದ ಮೆಹೆದಿ ಹಸನ್ ಮಿರಾಜ್ ಮೂರು ಸ್ಥಾನ ಮೇಲೇರಿ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ.

ಮೂರು ವರ್ಷಗಳ ನಂತರ ಬಾಂಗ್ಲಾದೇಶದ ವಿರುದ್ಧ ಏಕದಿನ ಶತಕ ಸಿಡಿಸಿದ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 72 ಶತಕಗಳನ್ನು ಪೂರೈಸಿದ್ದರು. ಈ ಶತಕಗಳ ವಿಚಾರದಲ್ಲಿ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್​ರನ್ನು ಹಿಂದಿಕ್ಕಿದರು. ಶನಿವಾರ ಚಿತ್ತಗಾಂಗ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 91 ಎಸೆತಗಳನ್ನು ಎದುರಿಸಿದ್ದ ಕೊಹ್ಲಿ 113 ರನ್‌ಗಳ ಇನಿಂಗ್ಸ್‌ ಆಡಿದ್ದರು. ಇದು ಆಗಸ್ಟ್ 2019 ರ ನಂತರ 50 ಓವರ್‌ಗಳ ಸ್ವರೂಪದಲ್ಲಿ ಕೊಹ್ಲಿಯ ಮೊದಲ ಶತಕವಾಗಿತ್ತು. ಕೊಹ್ಲಿಯೊಂದಿಗೆ ದಾಖಲೆಯ ಜೊತೆಯಾಟವನ್ನಾಡಿದ್ದ ಎಡಗೈ ಆರಂಭಿಕ ಕಿಶನ್ 131 ಎಸೆತಗಳಲ್ಲಿ 210 ರನ್‌ಗಳ ದಾಖಲೆಯ ಇನ್ನಿಂಗ್ಸ್ ಆಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com