ಚಿನ್ನಸ್ವಾಮಿ ಕ್ರೀಡಾಂಗಣ
ಚಿನ್ನಸ್ವಾಮಿ ಕ್ರೀಡಾಂಗಣ

ಚಿನ್ನಸ್ವಾಮಿ ಸ್ಟೇಡಿಯಂ ಛಾವಣಿಯಿಂದ ಮಳೆ ನೀರು ಸೋರಿಕೆ: ಬಿಸಿಸಿಐನ ಗೇಲಿ ಮಾಡಿದ ನೆಟ್ಟಿಗರು, ವಿಡಿಯೋ!

ಪ್ರವಾಸಿ ದಕ್ಷಿಣ ಆಫ್ರಿಕಾ ಮತ್ತು ಟೀಂ ಇಂಡಿಯಾ ನಡುವಿನ 5 ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು ಉಭಯ ತಂಡಗಳು ಸಮಬಲ ಸಾಧಿಸಿದ್ದರಿಂದ ಟೈನಲ್ಲಿ ಅಂತ್ಯವಾಗಿದೆ.

ಬೆಂಗಳೂರು: ಪ್ರವಾಸಿ ದಕ್ಷಿಣ ಆಫ್ರಿಕಾ ಮತ್ತು ಟೀಂ ಇಂಡಿಯಾ ನಡುವಿನ 5 ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು ಉಭಯ ತಂಡಗಳು ಸಮಬಲ ಸಾಧಿಸಿದ್ದರಿಂದ ಟೈನಲ್ಲಿ ಅಂತ್ಯವಾಗಿದೆ.

ನಿರ್ಣಾಯಕ ಹಾಗೂ ಅಂತಿಮ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ ಪಂದ್ಯ ಆರಂಭಕ್ಕೂ ಮುನ್ನವೇ ಮಳೆ ಸುರಿಯಲು ಶುರು ಮಾಡಿತು. ಹೀಗಾಗಿ ಪಂದ್ಯ ತಡವಾಗಿ ಆರಂಭವಾಗಿತ್ತು. ಆದರೆ ಮೂರನೇ ಓವರ್ ಅಂತ್ಯದ ವೇಳೆಗೆ ಮತ್ತೆ ಮಳೆ ಬೀಳಲು ಶುರವಾಗಿದ್ದರಿಂದ ಪಂದ್ಯವನ್ನು ರದ್ದು ಮಾಡಲಾಯಿತು. 

ಇನ್ನು ಪಂದ್ಯ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸ್ಟೇಡಿಯಂನಲ್ಲಿ ನೆರೆದಿದ್ದರು. ಆದರೆ ಎಡಬಿಡದೆ ಸುರಿದ ಮಳೆ ಮಧ್ಯೆ ಕ್ರಿಕೆಟ್ ಪ್ರೇಮಿಗಳು ಎದ್ದು ನಿಂತು ಮಳೆ ನಿಲ್ಲಬಹುದೇ ಎಂದು ಎದ್ದು ಕಾಯುತ್ತಿದ್ದರು. ಇದಕ್ಕೆ ಕಾರಣ ಚಿನ್ನಸ್ವಾಮಿ ಸ್ಟೇಡಿಯಂ ಛಾವಣಿಯಿಂದ ಮಳೆ ನೀರು ಸುರಿಯುತ್ತಿತ್ತು. 

ಇನ್ನು ಅಭಿಮಾನಿಯೊಬ್ಬರು ಮಳೆ ನೀರು ಸುರಿಯುತ್ತಿರುವುದನ್ನು ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ನೋಡಿದ ನೆಟ್ಟಿಗರು ಜಗತ್ತಿನ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐ ಅನ್ನು ಟ್ರೋಲ್ ಮಾಡುತ್ತಿದ್ದಾರೆ.

ಪಂದ್ಯ ವೀಕ್ಷಿಸಲು ಬಿಸಿಸಿಐ ಪ್ರೇಕ್ಷಕರಿಂದ ಟಿಕೆಟ್ ಗೆ 5 ರಿಂದ 25 ಸಾವಿರ ರೂಪಾಯಿ ತೆಗೆದುಕೊಳ್ಳುತ್ತದೆ. ಆದರೆ ಯಾವುದೇ ವ್ಯವಸ್ಥೆಯನ್ನೂ ಕೂಡ ಮಾಡಲ್ಲ ಎಂದು ಟ್ರೋಲ್ ಮಾಡಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com